Thursday, 5th December 2024

Naga Chaitanya wedding: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಾಗ ಚೈತನ್ಯ-ಸೋಭಿತಾ ಧೂಳಿಪಾಲಾ

Naga Chaitanya wedding: First Pics Of Sobhita Dhulipala As Bride And Naga Chaitanya As Groom Unveiled

ಹೈದರಾಬಾದ್‌: ನಾಗ ಚೈತನ್ಯ ಮತ್ತು ಸೋಭಿತಾ ಧೂಳಿಪಾಲಾ ಅವರ ವಿವಾಹವು (Naga Chaitanya wedding) ಬುಧವಾರ (ಡಿಸೆಂಬರ್‌ 4) ಹೈದರಾಬಾದ್‌ನ ಅನಪೂರ್ಣ ಸ್ಟುಡಿಯೋದಲ್ಲಿ ನಡೆಯಿತು. ತೆಲುಗು ಸಾಂಪ್ರದಾಯದಂತೆ ಕುಟುಂಬ ಸದಸ್ಯರು ಮತ್ತು ಆತ್ಮೀಯ ಸ್ನೇಹಿತರ ವಿವಾಹ ಕಾರ್ಯಕ್ರಮ ನಡೆಯಿತು.
ಮೆಗಾ ಸ್ಟಾರ್ ಚಿರಂಜೀವಿ, ಪವನ್ ಕಲ್ಯಾಣ್, ಅಲ್ಲು ಅರ್ಜುನ್, ಮಹೇಶ್ ಬಾಬು, ನಮ್ರತಾ ಶಿರೋಡ್ಕರ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಉಪಸ್ಥಿತರಿದ್ದರು.

ನಾಗ ಚೈತನ್ಯ ಮತ್ತು ಸೋಭಿತಾ ಧೂಳಿಪಾಲಾ ದಂಪತಿಯ ವಿವಾಹದ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಸೋಭಿತಾ ಹಳದಿ ಕಾಂಚೀವರಂ ಸೀರೆಯಲ್ಲಿ ಸುಂದರವಾಗಿ ಕಾಣುತ್ತಿದ್ದರು ಮತ್ತು ಚಿನ್ನಾಭರಣಗಳನ್ನು ಧರಿಸಿದ್ದರು. ಹೊರ ಬಂದ ಶೋಭಿತಾ ಮೊದಲ ಫೋಟೋದಲ್ಲಿ ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡಿದ್ದಾರೆ. ನಾಗ ಚೈತನ್ಯ ಅವರು ಪಂಚೆ ಮತ್ತು ಕುರ್ತಾದೊಂದಿಗೆ ಮದುವೆ ಮಂಟಪದಲ್ಲಿ ಕುಳಿತಿರುವ ಫೋಟೋ ಕೂಡ ವೈರಲ್ ಆಗಿದೆ.

ಈ ಮದುವೆಗೆ ಸಂಬಂಧಿಸಿದ ವಿಡಿಯೋಗಳಿಗಾಗಿ ಅಕ್ಕಿನೇನಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ನಾಗ ಚೈತನ್ಯ ಅವರಿಗೆ ಇದು ಎರಡನೇ ಮದುವೆ. ಈ ಹಿಂದೆ ಸಮಂತಾ ಅವರನ್ನು ನಾಗ ಚೈತನ್ಯ ಅವರು ವಿವಾಹವಾಗಿದ್ದರು ಆದರೆ, ಮೂರು ವರ್ಷಗಳ ನಂತರ ಕೆಲ ಕಾರಣದಿಂದ ಈ ಇಬ್ಬರೂ ಬೇರ್ಪಟ್ಟಿದ್ದರು.

ಕಳೆದ ಆಗಸ್ಟ್‌ನಲ್ಲಿ ನಾಗ ಚೈತನ್ಯ ಮತ್ತು ಸೋಭಿತಾ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು. ಈ ವಿಷಯವನ್ನು ತಂದೆ ನಾಗಾರ್ಜುನ ಇತ್ತೀಚೆಗೆ ಸೋಶಿಯಲ್‌ ಮೀಡಿಯಾ ಖಾತೆಗಳ ಮೂಲಕ ಹಂಚಿಕೊಂಡಿದ್ದರು. ಅತಿ ಶೀಘ್ರದಲ್ಲಿಯೇ ನಾಗ ಚೈತನ್ಯ ಅವರ ಸಹೋದರ ಅಖಿಲ್ ಮದುವೆಯೂ ನಡೆಯಲಿದೆ.

ಇನು ನಾಗ ಚೈತನ್ಯ ಅವರ ಸಿನಿಮಾ ವೃತ್ತಿ ಜೀವನಕ್ಕೆ ಬಂದರೆ ಸದ್ಯ ನಾಗ ಚೈತನ್ಯ ತಾಂಡೇಲ್‌ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ವರ್ಷ ಫೆಬ್ರವರಿಯಲ್ಲಿಈ ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಈ ಸಿನಿಮಾದ ಬುಜ್ಜಿ ತಲ್ಲಿ ಹಾಡು ಪ್ರೇಕ್ಷಕರ ಮನಗೆದ್ದಿದೆ. ಮತ್ತೊಂದೆಡೆ, ಅಖಿಲ್ ತಮ್ಮ ಮುಂದಿನ ಚಿತ್ರದ ಬಗ್ಗೆ ಇನ್ನೂ ಸ್ಪಷ್ಟತೆ ನೀಡಿಲ್ಲ.

ಈ ಸುದ್ದಿಯನ್ನು ಓದಿ: ನಾಗ ಚೈತನ್ಯ -ನಟಿ ಸೋಭಿತಾ ಧೂಳಿಪಾಲ ನಿಶ್ಚಿತಾರ್ಥ