Friday, 18th October 2024

ನಟಿ ದೀಪಿಕಾ ಮ್ಯಾನೇಜರ್‌ ಕರೀಷ್ಮಾ ಪ್ರಕಾಶ್’ಗೆ ಎನ್​ಸಿಬಿ ವಿಚಾರಣೆ

ಮುಂಬೈ: ಬಾಲಿವುಡ್ ಸೆಲೆಬ್ರಿಟಿಗಳು ಹಾಗೂ ಡ್ರಗ್ ಪೆಡ್ಲರ್​​ಗಳ ನಡುವಿನ ಸಂಬಂಧದ ನಟಿ ದೀಪಿಕಾ ಪಡುಕೋಣೆ ಮ್ಯಾನೇಜರ್ ಕರೀಷ್ಮಾ ಪ್ರಕಾಶ್​ಗೆ ವಿಚಾರಣೆಗೆ ಹಾಜರಾಗುವಂತೆ ಎನ್​ಸಿಬಿ ನೋಟಿಸ್ ನೀಡಿದೆ. ಕರೀಷ್ಮಾ ಬುಧವಾರ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ.

ಕಳೆದ ಮಂಗಳವಾರ ಕರೀಷ್ಮಾ ಪ್ರಕಾಶ್ ಅವರ ವರ್ಸೋವಾ ನಿವಾಸದ ಮೇಲೆ ಎನ್​ಸಿಬಿ ದಾಳಿ ನಡೆಸಿ 1.8 ಗ್ರಾಂ ಹಶೀಶ್ ಅನ್ನು ವಶಪಡಿಸಿಕೊಂಡಿತ್ತು. ಬಳಿಕ ಹೆಚ್ಚಿನ ತನಿಖೆಗಾಗಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು.

ಕಳೆದ ತಿಂಗಳು ಡ್ರಗ್​ ನಂಟು ವಿಚಾರವಾಗಿ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಮತ್ತು ರಕುಲ್ ಪ್ರೀತ್​ ಸಿಂಗ್​ ಸೇರಿ ಹಲವರನ್ನು ಎನ್​ಸಿಬಿ ವಿಚಾರಣೆ ನಡೆಸಿತ್ತು.