Monday, 6th January 2025

ಅವರಿಗಿಂತ ಇದು ಡೇಂಜರ್ ಅಲ್ಲ ಎಂದು ಮೈಮೇಲೆ ಓತಿಕ್ಯಾತ ಬಿಟ್ಕೊಂಡ ನಿವೇದಿತಾ ಗೌಡ! ಬಾರ್ಬಿ ಡಾಲ್ ಟಾಂಗ್ ಕೊಟ್ಟಿದು ಯಾರಿಗೆ?

ಬೆಂಗಳೂರು: ನಿವೇದಿತಾ ಗೌಡ (Niveditha Gowda) ತನ್ನ ವೈಯುಕ್ತಿಕ ಬದುಕಿನ ಕಾರಣಕ್ಕೆ ಸದಾ ಸುದ್ದಿಯಲ್ಲಿದ್ದವರು. ಬಿಗ್‌ ಬಾಸ್‌ಗೆ ಎಂಟ್ರಿ ಕೊಟ್ಟಿದ್ದೇ ನಿವೇದಿತಾ ಗೌಡ ಅನ್ನೋ ಬಾರ್ಬಿ ಡಾಲ್‌ನಂಥಾ ಹುಡುಗಿಯ ಲೈಫೇ ಚೇಂಜ್ ಆಗಿ ಹೋಯ್ತು. ಈ ಹುಡುಗಿ ಬಿಗ್‌ಬಾಸ್‌ಗೆ ಬಂದಾಗ ಈಕೆಯ ಮುಗ್ಧತೆ ನೋಡಿ ಸುದೀಪ್, ‘ನೀವಿಲ್ಲಿ ಹೇಗೆ ಸರ್ವೈವ್ ಆಗ್ತಿರೋ ಅನ್ನೋ ಬಗ್ಗೆ ನಂಗೇ ಭಯ ಇದೆ’ ಅನ್ನೋ ರೀತಿ ಮಾತನಾಡಿದ್ರು. ನಿವೇದಿತಾ ಗೌಡ ಬಿಗ್‌ಬಾಸ್‌ನಂಥಾ ಬಿಗ್‌ ಬಾಸ್‌ ಮನೆಯಲ್ಲೂ ಹೆಚ್ಚಿನ ಸಮಸ್ಯೆಯಾಗದ ಹಾಗೆ ಇದ್ದು ಬಂದರು. ಆದರೆ ಯಾವಾಗ ಆಕೆಯ ಪರ್ಸನಲ್ ಲೈಫ್ ಪಬ್ಲಿಕ್‌ಗೆ ತೆರೆದುಕೊಂಡಿತೋ ಅಂದಿನಿಂದ ಅವರನ್ನು ಟ್ರೀಟ್‌ ಮಾಡುವ ರೀತಿಯೇ ಬದಲಾಯಿತು.

ಹೌದು, ಬಿಗ್ ಬಾಸ್ ಅಲ್ಲಿ ನಿವೇದಿತಾ ಗೌಡ ಅವರನ್ನ ಬಾರ್ಬಿ ಡಾಲ್ ಅಂತಲೇ ಕರೆದರು. ನಿವಿ ಕೂಡ ಹಾಗೆ ಇದ್ದರು. ಆದರೆ ಇದೀಗ ನಿವಿ ಲುಕ್ ಚೇಂಜ್ ಆಗಿದೆ. ಹಾವ-ಭಾವಗಳೂ ಬದಲಾಗಿವೆ. ತೊಡೋ ಡ್ರೆಸ್ ಕೂಡ ಚೇಂಜ್ ಆಗಿವೆ. ಬೋಲ್ಡ್ ಅನಿಸುವ ಹಾಗೆ ಡ್ರೆಸ್ ತೊಡ್ತಾರೆ. ಬಾರ್ಬಿ ಡಾಲ್ ನಿವಿ ಎಲ್ಲಿ ಅನ್ನುವ ಪ್ರಶ್ನೆ ಕೂಡ ಎದ್ದಿದೆ. ಕಾರಣ ಬೋಲ್ಡ್ ಅನಿಸೋ ಫೋಸ್, ಬೋಲ್ಡ್ ಅನಿಸೋ ವಿಡಿಯೊಗಳನ್ನು ಶೇರ್ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ನಿವೇದಿತಾ ಗೌಡ ಈಗ ಕಾಣಿಸುತ್ತಿದ್ದಾರೆ.

ಅಲ್ಲದೇ ಚಂದನ್‌ ಶೆಟ್ಟಿ (Chandan shetty) jತೆಗಿನ ವಿಚ್ಛೇದನದ ಬಳಿಕ ನಿವೇದಿತಾ ಗೌಡ ಸಖತ್‌ ಖುಷಿಯಲ್ಲಿದ್ದಾರೆ. ಸೋಶಿಯಲ್‌ ಮೀಡಿಯಾ (Social Media)ದಲ್ಲಿ ಅವರು ಸಾಲು ಸಾಲು ರೀಲ್ಸ್‌ (Reels)ಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ಎದೆಗೆ ಇಳಿಯುತ್ತಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಕುರಿತಾಗಿ ಬರುವ ಯಾವ ಕಾಮೆಂಟ್‌ಗೂ ತಲೆಕೆಡಿಸಿಕೊಳ್ಳದ ನಿವೇದಿತಾ ಗೌಡ, ತಾವಾಯಿತು ತಮ್ಮ ಚಿಕ್ಕ ಡ್ರೆಸ್‌ಗಳಾಯಿತು ಎಂದುಕೊಂಡು ಬೆನ್ನುಬೆನ್ನಿಗೆ ಪೋಸ್ಟ್ ಮಾಡುತ್ತಲೇ ಇರುತ್ತಾರೆ.

ಇದೀಗ ಅವರು ಹಾಕಿದ ಪೋಸ್ಟರ್ ಕ್ಯಾಪ್ಷನ್ ಸಖತ್ ಸದ್ದು ಮಾಡುತ್ತಿದ್ದು, ಪರೋಕ್ಷವಾಗಿ ಯಾರಿಗೋ ಟಾಂಗ್‌ ನೀಡಿದ್ದಾರೆ.

ಹೌದು, ವಿದೇಶದಲ್ಲಿ ಕ್ರಿಸ್‌ಮಸ್- ಹೊಸ ವರ್ಷ ಆಚರಿಸಿದ ನಿವಿ, ನ್ಯೂಯಾರ್ಕ್​, ಲಂಡನ್​ ಎಂದು ಊರೂರು ಸುತ್ತುತ್ತ ಎಂಜಾಯ್ ಮಾಡುತ್ತಿದ್ದಾರೆ. ತಮ್ಮ ಮೋಜು -ಮಸ್ತಿಯ ಹಲವು ವಿಡಿಯೊಗಳನ್ನು ಶೇರ್ ಮಾಡುತ್ತಿದ್ದಾರೆ. 10-12 ದಿನಗಳಿಂದ ನ್ಯೂಯಾರ್ಕ್‌ನಲ್ಲಿ ಕಾಲ ಕಳಿಯುತ್ತಿರುವ ನಿವಿ ಸುಂದರ ಕ್ಷಣಗಳನ್ನು ಪೋಸ್ಟ್‌ ಮಾಡಿ ತಮ್ಮ ಅಭಿಮಾನಿಗಳ ಜತೆ ಹಂಚಿಕೊಳ್ಳುತ್ತಿದ್ದಾರೆ. ಕ್ರಿಸ್‌ಮಸ್ ಹಬ್ಬದ ದಿನ ವಿದೇಶಿ ಹುಡುಗನ ಜತೆ ಆಕಾಶ ಬುಟ್ಟಿಯನ್ನು ತೇಲಿ ಬಿಟ್ಟು ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌ ಆಗಿದ್ದರು. ನಿಮ್ಮ ಜತೆ ಇರುವ ಆ ಸಿಕ್ಸ್‌ ಪ್ಯಾಕ್‌ ಹುಡುಗ ಯಾರು ಎಂದು ನೆಟ್ಟಿಗರು ಪ್ರಶ್ನಿಸಲು ಆರಂಭಿಸಿದ್ದರು.

ಇದೀಗ ಇದರ ಬೆನ್ನಲ್ಲೇ ನಿವೇದಿತಾ ಗೌಡ ಮತ್ತೊಂದು ಪೋಸ್ಟ್‌ ಹಂಚಿಕೊಂಡಿದ್ದು, ಮೈ ಮೇಲೆ ಓತಿಕ್ಯಾತ ಪ್ರಭೇದಕ್ಕೆ ಸೇರಿದ ಪ್ರಾಣಿಗಳನ್ನು ಮೈಮೇಲೆ ಬಿಟ್ಟುಕೊಂಡ ನಿವಿ, ʼʼನಾನು ಭೇಟಿಯಾದ ಕೆಲವು ಜನರಂತೆ ಖಂಡಿತವಾಗಿಯೂ ಇದು ಭಯಾನಕವಲ್ಲ!ʼʼ ಎಂದು ಬರೆದುಕೊಂಡಿದ್ದಾರೆ.

ನಿವೇದಿತಾ ಗೌಡ ತಮ್ಮ ರೀಲ್ಸ್‌ಗಳನ್ನ, ವಿಶೇಷ ಫೋಟೊಗಳನ್ನು ಶೇರ್ ಮಾಡಿಕೊಳ್ತಾನೆ ಇರ್ತಾರೆ. ಅದೇ ರೀತಿ ತಮ್ಮ ಟ್ರಿಪ್‌ನ ಫೋಟೊವನ್ನು ಪೋಸ್ಟ್ ಮಾಡಿದ್ದು, ಆ ಫೋಟೊಕ್ಕೆ ನೀಡಿದ ಶೀರ್ಷಿಕೆ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ. ಅಲ್ಲದೇ ನೆಟ್ಟಿಗರು ಈ ಪೋಸ್ಟ್‌ಗೆ ತರಹೇವಾರಿ ಕಮೆಂಟ್‌ ಮಾಡುತ್ತಿದ್ದು, ಇನ್ನು ಕೆಲವರು ಈ ವಿಡಿಯೊವನ್ನೂ ಮಾಮೂಲಿನಂತೆ ಟ್ರೋಲ್​ ಮಾಡುತ್ತಿದ್ದಾರೆ. ಕೆಲವರು ಚಂದನ್ ಶೆಟ್ಟಿಗೆ ಪರೋಕ್ಷವಾಗಿ ಟಾಂಗ್‌ ನೀಡಿದ್ದಾರೆ ಎಂಬ ಅಭಿಪ್ರಾಯವನ್ನು ಹೊರ ಹಾಕುತ್ತಿದ್ದಾರೆ.

ಈ ಸುದ್ದಿಯನ್ನು ಓದಿ: Bhagya Lakshmi Serial: ಮನೆಯವರ ಎದುರು ಬಯಲಾಯ್ತು ಶ್ರೇಷ್ಠಾ ಕಳ್ಳಾಟ: ಅತ್ತೆಯಿಂದ ಸಖತ್ ಕ್ಲಾಸ್