ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada Season 11) ಎರಡನೇ ವಾರ ಸ್ಪರ್ಧಿಗಳು ಫುಲ್ ಟಾಸ್ಕ್ನಲ್ಲೇ ಬ್ಯುಸಿ ಆಗಿದ್ದರು. ಮನೆಯ ನಿಯಮ ಉಲ್ಲಂಘಿಸಿದ್ದಕ್ಕಾಗಿ ಬಿಗ್ ಬಾಸ್ ಎಲ್ಲ ಸ್ಪರ್ಧಿಗಳನ್ನು ನಾಮಿನೇಟ್ ಮಾಡಿದ್ದರು. ನಾಮಿನೇಷನ್ನಿಂದ ಪಾರಾಗಲು ಕಾಲ ಕಾಲಕ್ಕೆ ಟಾಸ್ಕ್ ನೀಡಲಾಗುತ್ತಿತ್ತು. ಇದರಿಂದ ಕೆಲವರು ಈ ವಾರ ಮನೆಯಿಂದ ಹೊರಹೋಗುವವರ ಲಿಸ್ಟ್ನಿಂದ ಬಚಾವ್ ಆದರು. ಸದ್ಯ 11 ಮಂದಿ ನಾಮಿನೇಟ್ ಆಗಿದ್ದಾರೆ.
ಭವ್ಯಾ ಗೌಡ, ಧನರಾಜ್ ಆಚಾರ್, ಧರ್ಮ ಕೀರ್ತಿರಾಜ್, ರಂಜಿತ್, ತ್ರಿವಿಕ್ರಮ್, ಮಾನಸಾ, ಐಶ್ವರ್ಯಾ ಸಿಂಧೋಗಿ, ಗೋಲ್ಡ್ ಸುರೇಶ್, ಹಂಸ, ಜಗದೀಶ್ ಹಾಗೂ ಅನುಷಾ ರೈ ಡೇಂಜರ್ ಝೋನ್ನಲ್ಲಿದ್ದಾರೆ. ಆದರೀಗ ಬಿಗ್ ಬಾಸ್ ಎಲಿಮಿನೇಷನ್ ವಿಚಾರದಲ್ಲಿ ದೊಡ್ಡ ಟ್ವಿಸ್ಟ್ ನೀಡಿದ್ದಾರೆ. ಅದೇ ಈ ವಾರ ನೋ ಎಲಿಮಿನೇಷನ್.
ಈ ವಾರ ವೋಟಿಂಗ್ ಲೈನ್‌ಗಳನ್ನ ಬಿಗ್ ಬಾಸ್ ತೆರೆದಿಲ್ಲ. ಅದು ಅಲ್ಲದೇ ಪ್ರತೀ ಸೀಸನ್‌ನಲ್ಲಿ ನವರಾತ್ರಿ ಸಮಯದಂದು ಯಾವುದೇ ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಕಳುಹಿಸಿಲ್ಲ. ಹೀಗಾಗಿ ಬಿಗ್ ಬಾಸ್ ಎಲ್ಲಾ ಸ್ಪರ್ಧಿಗಳಿಗೆ ಒಂದು ವಾರದ ಇಮ್ಮ್ಯುನಿಟಿ ನೀಡಿದೆ. ಹಬ್ಬದ ಕಾರಣ ಈ ವಾರ ಎಲ್ಲರೂ ಸೇಫ್ ಆಗಿದ್ದಾರೆ. ಆದರೆ, ಮುಂದಿನ ವಾರ ಡಬಲ್ ಎಲಿಮಿನೇಶನ್ ಇರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇಂದು ವಾರದ ಕತೆ ಕಿಚ್ಚನ ಜೊತೆ:
ಇಂದು ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ನಡೆಯಲಿದೆ. ಕಳೆದ ವಾರದ ಪಂಚಾಯಿತಿಯಲ್ಲಿ ಕಿಚ್ಚ ಲಾಯರ್ ಜಗದೀಶ್ ಮೇಲೆ ಗರಂ ಆಗಿದ್ದರು. ಹೀಗಾಗಿ ಈ ವಾರ ಜಗದೀಶ್ ಮಾತು ಕಳೆದ ವಾರಕ್ಕಿಂತ ಕಡಿಮೆ ಇತ್ತು. ಈ ವಾರ ಸುದೀಪ್ ಕ್ಯಾಪ್ಟನ್ ಆಗಿದ್ದ ಹಂಸ ಅವರಿಗೆ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ. ಹಂಸ ಅವರ ಗೊಂದಲದ ನಿರ್ಧಾರದಿಂದ ಈ ವಾರ ಮನೆಯಲ್ಲಿ ಅನೇಕ ತಪ್ಪುಗಳು ನಡೆದಿತ್ತು. ಜೊತೆಗೆ ಲೈನ್ಸ್ ಡೌನ್ ಆಗಿದ್ದಾಗ, ಅದರಿಂದ ಆಚೆಗೆ ಇಣುಕಿ ನೋಡಬಾರದು ಎಂಬ ನಿಯಮವಿದ್ದರೂ ಕೆಲ ಸ್ಪರ್ಧಿಗಳು ಈ ನಿಯಮ ಉಲ್ಲಂಘಿಸಿದ್ದಾರೆ. ಈ ವಿಚಾರ ಕೂಡ ಇಂದು ಚರ್ಚೆಯಾಗಲಿದೆ.
BBK 11: ಇಂದು ಕಿಚ್ಚನ ಎರಡನೇ ಪಂಚಾಯಿತಿ: ವಾರದ ಕತೆಯಲ್ಲಿ ಈ ವಿಷಯ ಡಿಸ್ಕಸ್ ಖಚಿತ