Wednesday, 4th December 2024

BBK 11: ‘ನಾನು ಕುಗ್ಗೋ ಮಗಳೇ ಅಲ್ಲ’: ಮಂಜು ಮೈಂಡ್​ ಗೇಮ್​ಗೆ ಟಕ್ಕರ್ ಕೊಟ್ಟ ಐಶ್ವರ್ಯಾ

Manju and Aishwarya

ಹತ್ತನೇ ವಾರ ತಲುಪಿರುವ ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮಹತ್ವದ ಸದ್ಯ ಘಟ್ಟಕ್ಕೆ ಬಂದು ನಿಂತಿದೆ. ಟಾಸ್ಕ್​ಗಳ ಕಾವು ಏರುತ್ತಿದ್ದು ಕಠಿಣ ಆಟವನ್ನೇ ಬಿಗ್ ಬಾಸ್ ನೀಡುತ್ತಿದ್ದಾರೆ. ಈ ವಾರ ಬಿಗ್ ಬಾಸ್ ಮನೆ ಎರಡು ಟಿವಿ ವಾಹಿನಿಯಾಗಿ ಪರಿವರ್ತನೆಯಾಗಿರುವುದು ಗೊತ್ತೇ ಇದೆ. ಈ ಎರಡು ಟಿವಿ ಚಾನೆಲ್​ ಪೈಕಿ ಯಾರು ಹೆಚ್ಚು ಮನೋರಂಜನೆ ನೀಡುತ್ತಾರೆ ಆ ತಂಡ ಕ್ಯಾಪ್ಟನ್ಸಿ ಟಾಸ್ಕ್​ಗೆ ಅರ್ಹತೆ ಪಡೆಯುತ್ತಾರೆ. ಇದರ ನಡುವೆ ನಾಮಿನೇಷನ್ ಬೆಂಕಿ ಹಚ್ಚಿಕೊಂಡಿದೆ.

ಇಂದು ಬಿಗ್ ಬಾಸ್ ಸ್ಪರ್ಧಿಗಳಿಗೆ ನಾಮಿನೇಷನ್​ಗೆ ಸಂಬಂಧಿಸಿದಂತೆ ವಿಶೇಷ ಟಾಸ್ಕ್ ನೀಡಿದ್ದಾರೆ. ಬೆನ್ನಿಗೆ ಒಂದು ಬೆಂಡಿನ ತುಂಡನ್ನು ಕಟ್ಟಿರುತ್ತಾರೆ. ಅದಕ್ಕೆ ಯಾರೆಲ್ಲಾ ನಾಮಿನೇಟ್ ಮಾಡಲು ಬಯಸುತ್ತಾರೋ ಅವರೆಲ್ಲರೂ ಚೂರಿ ಚುಚ್ಚಬೇಕಿರುತ್ತದೆ. ಈ ಟಾಸ್ಕ್​​ನಲ್ಲಿ ಬಹುತೇಕ ಸ್ಪರ್ಧಿಗಳು ಮಂಜು ಅವರ ಬೆನ್ನಿಗೆ ಚೂರಿ ಚುಚ್ಚಿದ್ದಾರೆ. ವಿಡಿಯೋದಲ್ಲಿ ಕಾಣುವಂತೆ ಸುಮಾರು 8 ಚೂರಿಗಳು ಮಂಜು ಬೆನ್ನಿಗೆ ಬಿದ್ದಿವೆ.

ಇದರಲ್ಲಿ ಐಶ್ವರ್ಯಾ ಶಿಂಧೋಗಿ ಕೂಡ ಮಂಜು ಅವರ ಬೆನ್ನಿಗೆ ಚೂರಿ ಚುಚ್ಚಿ ನಾಮಿನೇಟ್ ಮಾಡಿದ್ದಾರೆ. ಆದರೆ, ನಾಮಿನೇಷನ್ ಮಾಡುವ ಸಂದರ್ಭ ಐಶ್ವರ್ಯಾ ಅವರು ಕೊಟ್ಟ ಕಾರಣ ಮಂಜು ಅವರನ್ನು ಕೆರಳಿಸಿದೆ. ನೀವು ಆ ಕಾರಣ ಕೊಡೋದು ತಪ್ಪು ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. ಹೀಗಿರುವಾಗ ಅವರು ಇಬ್ಬರೂ ಜಗಳ ಮಾಡಿಕೊಂಡಿದ್ದಾರೆ.

ಈ ಹಿಂದೆ ರಾಜನ ಟಾಸ್ಕ್‌ ವೇಳೆಯಲ್ಲಿ ತಾನು ಮಹಾರಾಜ ಎಂಬ ಧರ್ಪದಲ್ಲಿ ಉಗ್ರಂ ಮಂಜು ಅವರು ಜನರನ್ನು ಅಂದರೆ ಪ್ರಜೆಗಳನ್ನು ಎತ್ತಿ ಬಿಸಾಡಿದ್ದಾರೆ. ದೈಹಿಕವಾಗಿ ಅವರು ಅಟ್ಯಾಕ್ ಮಾಡಿದ್ದಾರೆ ಎಂದು ಕಾರಣ ಕೊಟ್ಟಿದ್ದಾರೆ. ಆಗ ಮಂಜು ಅವರು ನಾನು ನನ್ನ ಸಿಂಹಾಸನವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದೆ. ಅದನ್ನು ನೀವು ನಾಮಿನೇಷನ್ ಕಾರಣವಾಗಿ ನೀಡುವಹಾಗಿಲ್ಲ ಎಂದು ಹೇಳಿದ್ದಾರೆ. ಇದೇ ಮಾತಿಗೆ ಮಾತು ಬೆಳೆದಿದೆ.

ನೀವು ಮಾನಸಿಕವಾಗಿ ನನ್ನನ್ನು ಕುಗ್ಗಿಸಲು ನೋಡಿದ್ರೆ, ನಾನು ಕುಗ್ಗುವಂತಹ ಮಗಳೇ ಅಲ್ಲ. ಅದು ಏನೇನು ಚುಚ್ಚಿ ಮಾತನಾಡ್ತಿರೋ ಆಡಿ ಎಂದು ಐಶ್ವರ್ಯ ಸವಾಲ್ ಹಾಕಿದ್ದಾರೆ. ರಜತ್ ಕಿಶನ್ ಕೂಡ ಮಂಜು ಅವರಿಗೇ ಚೂರಿ ಹಾಕಿ ನಾಮಿನೇಟ್ ಮಾಡಿದ್ದಾರೆ.

BBK 111: ಸುದೀಪ್​ಗೆ ಟ್ಯಾಗ್ ಮಾಡಿ ಇನ್​ಸ್ಟಾದಲ್ಲಿ ಪೋಸ್ಟ್ ಹಂಚಿಕೊಂಡ ಶೋಭಾ ಶೆಟ್ಟಿ