Friday, 8th November 2024

ಪೂಜಾ ಹೆಗ್ಡೆಗೆ ಜನುಮದಿನದ ಸಂಭ್ರಮ: ಸಲ್ಮಾನ್, ವೆಂಕಟೇಶ್ ಸಾಥ್‌

ಮುಂಬೈ: ನಟಿ ಪೂಜಾ ಹೆಗ್ಡೆ  ಜನುಮದಿನದ ಅಂಗವಾಗಿ ಗುರುವಾರ ʻಕಿಸಿ ಕಾ ಭಾಯಿ ಕಿಸಿ ಕಿ ಜಾನ್’ ಸಿನಿಮಾ ಸೆಟ್‌ನಲ್ಲಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಮತ್ತು ಸೌತ್ ಸ್ಟಾರ್ ವೆಂಕಟೇಶ್ ದಗ್ಗುಬಾಟಿ ಕೇಕ್‌ ತಿನ್ನಿಸಿದ್ದಾರೆ.

ಸಂಭ್ರಮ ಕ್ಷಣದ ವಿಡಿಯೊ ವೈರಲ್‌ ಆಗಿದ್ದು, ಸಲ್ಮಾನ್‌ ಖಾನ್‌ ಇನ್‌ಸ್ಟಾ ಮೂಲಕ ಹಂಚಿಕೊಂಡಿದ್ದಾರೆ.

ಕೇಕ್‌ ತಿನ್ನಿಸಲು ಪೂಜಾ ಹೆಗ್ಡೆ ಮುಂದಾದಾಗ ಸಲ್ಮಾನ್‌ ಖಾನ್‌, ನಟ ವೆಂಕಟೇಶ್‌ ಕಡೆ ತಿರುಗಿ ʻʻಸೀನಿಯರ್‌ ಫಸ್ಟ್‌ʼʼ ಎಂದು ಲುಕ್‌ ಕೊಟ್ಟಿದ್ದಾರೆ. ನಂತರ ಖುಷಿಯಿಂದ ಕೇಕ್‌ ತಿಂದು ಪೂಜಾ ಹೆಗ್ಡೆಯನ್ನು ಹಗ್‌ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಇದೀಗ ಈ ವಿಡಿಯೊ ವೈರಲ್‌ ಆಗಿದೆ.

ರಣವೀರ್ ಸಿಂಗ್ ಹಾಗೂ ರೋಹಿತ್ ಶೆಟ್ಟಿ ನಟನೆಯ ʻಸರ್ಕಸ್ʼ ಚಿತ್ರದಲ್ಲಿ ಪೂಜಾ ಕಾಣಿಸಿಕೊಳ್ಳಲಿದ್ದಾರೆ. ಸಲ್ಮಾನ್ ಇತ್ತೀಚೆಗೆ ಮೆಗಾಸ್ಟಾರ್‌ ಚಿರಂಜೀವಿ ನಟನೆಯ ʻಗಾಡ್ ಫಾದರ್‌ʼನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ʻಟೈಗರ್ 3ʼನಲ್ಲಿ ಕತ್ರಿನಾ ಕೈಫ್ ಜತೆಗೆ ಕಾಣಿಸಿಕೊಳ್ಳಲಿದ್ದಾರೆ.