ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pramila Joshai: ನಟಿ ಪ್ರಮೀಳಾ ಜೋಷಾಯ್ ಹುಟ್ಟುಹಬ್ಬದಲ್ಲಿ ಸ್ಯಾಂಡಲ್‌ವುಡ್ ನಟಿಯರ ದಂಡು

ಅನೇಕ ಹಿರಿ ಕಿರಿ ಕಲಾವಿದರ ಜತೆ ಉತ್ತಮ ನಂಟು ಹೊಂದಿರುವ ಸ್ಯಾಂಡವುಡ್‌ ನಟಿ ಪ್ರಮೀಳಾ ಜೋಷಾಯ್ ತಮ್ಮ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಇದೀಗ ಅವರ ಹುಟ್ಟುಹಬ್ಬ ಆಚರಣೆಯ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ನಟಿ ಪ್ರಮೀಳಾ ಜೋಷಾಯ್ ಹುಟ್ಟುಹಬ್ಬಕ್ಕೆ ಹಿರಿಯ ಕಲಾವಿದರ ಸಂಗಮ

ಕಲಾವಿದರೊಂದಿಗೆ ಪ್ರಮೀಳಾ ಜೋಷಾಯ್.

Profile Pushpa Kumari Mar 5, 2025 6:34 PM

ಬೆಂಗಳೂರು: ಕನ್ನಡ ಸಿನಿಮಾ ರಂಗದಲ್ಲಿ ಸಕ್ರಿಯ ಪೋಷಕ ನಟಿ ಪ್ರಮೀಳಾ ಜೋಷಾಯ್ (Pramila Joshai) 30 ವರ್ಷಕ್ಕೂ ಅಧಿಕ ಕಾಲ ಬೆಳ್ಳಿ ಪರದೆ ಮೇಲೆ ಮಿಂಚುತ್ತಿದ್ದಾರೆ. ಸಿನಿಪರದೆಯಲ್ಲಿ ಅಷ್ಟೇ ಅಲ್ಲದೆ ಸಾಕಷ್ಟು ಕಲಾವಿದರ ಜತೆಗೆ ಉತ್ತಮ ಬಾಂಧವ್ಯವನ್ನೂ ಹೊಂದಿದ್ದಾರೆ. ಇದೀಗ ನಟಿ ಪ್ರಮೀಳಾ ಜೋಷಾಯ್ ತಮ್ಮ ಹುಟ್ಟುಹಬ್ಬವನ್ನು ಹಿರಿಯ ಕಲಾವಿದರ ಜತೆಗೆ ಆಚರಿಸಿಕೊಂಡಿದ್ದಾರೆ. ಚಿತ್ರರಂಗದ ಅನೇಕ ಕಲಾವಿದರು ಪ್ರಮೀಳಾ ಜನ್ಮದಿನದ ಕಾರ್ಯಕ್ರಮದಲ್ಲಿ ಸಕತ್ತಾಗಿ ಮಿಂಚಿದ್ದಾರೆ. ಇದೀಗ ನಟಿಯ ಹುಟ್ಟುಹಬ್ಬ ಆಚರಣೆಯ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ನಟಿ ಪ್ರಮಿಳಾ ಜೋಷಾಯಿ ಅವರು 80-90 ರ ದಶಕಗಳಿಂದಲೂ ಸಿನಿಮಾರಂಗದಲ್ಲಿ ಸಕ್ರಿಯ ನಟಿಯಾಗಿದ್ದು, ಅನೇಕ ಕಲಾವಿದರ ಜತೆ ನಟಿಸಿರುವ ಜತೆಗೆ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದೀಗ ಹುಟ್ಟುಹಬ್ಬದ ಸಂಭ್ರಮಕ್ಕೂ ಅನೇಕ ಹಿರಿಯ ನಟಿಯರು ಜೋಶ್‌ನಲ್ಲಿ ಆಗಮಿಸಿ‌ ನಟಿ ಪ್ರಮಿಳಾ ಜೋಶಿ ಅವರಿಗೆ ಮನಸಾರೆ ಹರಸಿದ್ದಾರೆ. ಸದ್ಯ ಅವರ ಬರ್ತ್‌ಡೇ ವೈಬ್‌ನ ಕಲಾವಿದರ ಸಂಗಮದ ಫೋಟೊ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

pramila joshi

ನಟಿ ಪ್ರಮಿಳಾ ಜೋಷಾಯ್ ಜನ್ಮ ದಿನವನ್ನು ಆಚರಿಸಲು ಹಿರಿಯ ನಟಿಯರನ್ನು ಅವರ ಪುತ್ರಿ ಮೇಘನಾ ರಾಜ್ ಆಹ್ವಾನಿಸಿದ್ದಾರೆ. ಹಾಗಾಗಿ ಹುಟ್ಟುಹಬ್ಬ ಸಂಭ್ರಮಿಸಲು ವಿನಯಾ ಪ್ರಸಾದ್, ಮಾಳವಿಕಾ, ಭಾರತಿ ವಿಷ್ಣುವರ್ಧನ್, ಶ್ರುತಿ, ಸುಧಾರಾಣಿ, ಪ್ರಿಯಾಂಕಾ ಉಪೇಂದ್ರ, ಜಯಮಾಲಾ, ಮಾಲಾಶ್ರೀ ಮತ್ತು ಅವರ ಪುತ್ರಿ ಆರಾಧನಾ ರಾಮ್, ಉಮಾಶ್ರೀ, ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಪಾಲ್ಗೊಂಡು ಸಂಭ್ರಮಿಸಿದ್ದಾರೆ. ನಟಿ ಪ್ರಮಿಳಾ ಜೋಷಾಯಿ ಮನೆಯಲ್ಲಿಯೇ ಸಿಂಪಲ್ ಆಗಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು ಹಿರಿಯ ನಟಿಯರ ಸಂಗಮ ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಇದನ್ನು ಓದಿ: Hema Malini: ಅಮಿತಾಬ್‌ ಬಚ್ಚನ್‌ ಜೊತೆ ʻಆʼ ಸೀನ್‌ಗಾಗಿ ಟೈಟ್‌ ಆಗಿ ಬ್ಲೌಸ್‌ ಹೊಲಿಯೋಕೆ ಹೇಳಿದ್ರಂತೆ ಹೇಮಾ ಮಾಲಿನಿ!

pramila (1)

ಪ್ರಮೀಳಾ ಜೋಷಾಯ್ ಮಗಳು ಮೇಘನಾ ರಾಜ್ ಕೂಡ ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಸಾಕಷ್ಟು ಸಿನೆಮಾಗಳಲ್ಲಿ ನಟಿಸಿದ್ದಾರೆ. ನಟಿ ಮೇಘನಾ ರಾಜ್ ಅವರ ‌ ಪತಿ ಚಿರಂಜೀವಿ ಸರ್ಜಾ ಅವರ ದಿಢೀರ್‌ ಅಗಲುವಿಕೆ ಈ ಕುಟುಂಬಕ್ಕೆ ದೊಡ್ಡ ಆಘಾತವನ್ನೇ ತಂದಿತ್ತಿತ್ತು. ಬಳಿಕ ಚಿರು- ಮೇಘನಾ ಪುತ್ರ ರಾಯನ್ ಸರ್ಜಾ ಇವರ ಬದುಕಿಗೆ ಹೊಸ ಆಶಾಕಿರಣವಾಗಿದ್ದಾನೆ. ಮೊಮ್ಮಗ ರಾಯನ್ ಜತೆ ಪ್ರಮೀಳಾ ಜೋಷಾಯ್ ತಮ್ಮ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ. ಪ್ರಮೀಳಾ ಅವರು ಪತಿ, ನಟ ಸಿಂದರ್‌ ರಾಜ್‌ ಕೂಡ ಈ ವೇಳೆ ಉಪಸ್ಥಿತರಿದ್ದರು.