Thursday, 12th December 2024

ಭಯಾನೋ, ನಾಚಿಕೆನೋ…ಮುಖ ಮುಚ್ಚಿ ವ್ಯಾಕ್ಸಿನೇಶನ್‌ ಹಾಕಿಸಿಕೊಂಡ ಪ್ರಶಾಂತ್‌ ನೀಲ್‌

ಬೆಂಗಳೂರು: ಇತ್ತೀಚೆಗೆ “ಉಗ್ರಂ’ ಮತ್ತು “ಕೆಜಿಎಫ್’ ಖ್ಯಾತಿಯ ನಿರ್ದೇಶಕ ಪ್ರಶಾಂತ್‌ ನೀಲ್‌ ಕೂಡ ಕರೋನಾ ಮೊದಲ ಡೋಸ್‌ ವ್ಯಾಕ್ಸಿನೇಶನ್‌ ಪಡೆದುಕೊಂಡಿದ್ದಾರೆ.

ಆದರೆ, ಪ್ರಶಾಂತ್‌ ನೀಲ್‌, “ಕೊನೆಗೂ ಲಸಿಕೆ ಪಡೆದುಕೊಂಡಿದ್ದೇನೆ. ನೀವು ಕೂಡ ಇನ್ನೂ ಲಸಿಕೆ ಪಡೆದುಕೊಂಡಿಲ್ಲವಾದರೆ, ಆದಷ್ಟು ಬೇಗ ಸಮಯ ನಿಗದಿ ಮಾಡಿಕೊಳ್ಳಿ. ನೀವು ಮತ್ತು ನಿಮ್ಮ ಕುಟುಂಬದವರು ಲಸಿಕೆ ಪಡೆದುಕೊಳ್ಳಿ’ ಎಂದು ಮನವಿ ಮಾಡಿದ್ದಾರೆ.

ತಾನು ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿರುವ ಫೋಟೋದಲ್ಲಿ ಇಂಜೆಕ್ಷನ್‌ ಹಾಕುತ್ತಿರುವ ಸಮಯದಲ್ಲಿ ಭಯಪಟ್ಟಿರುವಂತೆ ಕಾಣುವ ಪ್ರಶಾಂತ್‌ ನೀಲ್‌ ಮುಖ ಮುಚ್ಚಿಕೊಂಡಿದ್ದರು. ಈ ಫೋಟೋಗೆ ಟ್ವಿಟ್ಟರ್‌ನಲ್ಲಿ ಹಾಸ್ಯ ಚಟಾಕಿಗಳು, ಕಾಮೆಂಟ್ಸ್‌ ಹರಿದು ಬರುತ್ತಿದೆ.

“ಸಿನಿಮಾದಲ್ಲಿ ಅಷ್ಟು ಹಿಂಸಾಚಾರ ತೋರಿಸುವ ನಿಮಗೆ ಇಂಜೆಕ್ಷನ್‌ ಅಂದ್ರೆ ಭಯನಾ?’ ಎಂದು ನೆಟ್ಟಿಗರೊಬ್ಬರು ಕೇಳಿದರೆ, “ಬಹುಶಃ ನರ್ಸ್‌ ಕಂಡ್ರೆ ನಾಚಿಕೆ ಇರಬೇಕು. ಒಂದು ರೋಮ್ಯಾನ್ಸ್‌ ಸಿನಿಮಾ ಮಾಡಿ’ ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿ ದ್ದಾರೆ.

“ಮಚ್ಚು ಇಲ್ಲ, ಕೊಡಲಿ ಇಲ್ಲ, ಆದರೂ ಒಂದು ಸೂಜಿಗೆ ಇಷ್ಟು ಭಯವೇ. ಜಸ್ಟ್‌ ಕಿಡ್ಡಿಂಗ್‌. ಪೋಸ್‌ ತುಂಬಾ ಚೆನ್ನಾಗಿದೆ.