ಹೈದರಾಬಾದ್: ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ʼಪುಷ್ಪ 2ʼ (Pushpa 2) ಬಿಡುಗಡೆಗೆ ಸಜ್ಜಾಗಿದೆ. 2021ರಲ್ಲಿ ತೆರೆಕಂಡು ಇಡೀ ದೇಶವೇ ತನ್ನತ್ತ ತಿರುಗುವಂತೆ ಮಾಡಿದ ಸುಕುಮಾರ್ ನಿರ್ದೇಶನದ ʼಪುಷ್ಪʼ (Pushpa) ಚಿತ್ರದ ಸೀಕ್ವೆಲ್ ಆಗಿರುವ ಇದು ಸೆಟ್ಟೇರಿದಾಗಿನಿಂದಲೇ ಅಭಿಮಾನಿಗಳ ಗಮನ ಸೆಳೆದಿದೆ. ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅವರ ಪಾತ್ರ ಇಲ್ಲಿ ಮುಂದುವರಿದಿದ್ದು ಈಗಾಗಲೇ ರಿಲೀಸ್ ಆಗಿರುವ ಹಾಡು, ಟೀಸರ್, ಟ್ರೈಲರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಬಾನೆತ್ತರಕ್ಕೆ ಏರಿಸಿದೆ. ಇತ್ತೀಚೆಗಷ್ಟೇ ಶ್ರೀಲೀಲಾ ಕಾಣಿಸಿಕೊಂಡ ಐಟಂ ಸಾಂಗ್ ಬಿಡುಗಡೆ ಮಾಡಿ ಯೂಟ್ಯೂಬ್ನಲ್ಲಿ ಬಿರುಗಾಳಿ ಎಬ್ಬಿಸಿದ್ದ ಚಿತ್ರತಂಡ ಇದೀಗ ಮತ್ತೊಂದು ಸಾಂಗ್ ರಿಲೀಸ್ ಮಾಡಿ ಅಭಿಮಾನಿಗಳ ನಿದ್ದೆಗೆಡಿಸಿದೆ.
ಟಾಲಿವುಡ್ನ ಮಾಸ್ ನಿರ್ದೇಶಕ ಸುಕುಮಾರ್ ಚಿತ್ರಗಳಲ್ಲಿ ಹಾಡುಗಳಿಗೆ ಬಹಳ ಪ್ರಾಮುಖ್ಯತೆ ಇರುತ್ತದೆ. ʼಪುಷ್ಪʼ ಚಿತ್ರದ ಗೆಲುವಿನಲ್ಲಿ ಅದರ ಸಂಗೀತ ಮುಖ್ಯ ಪಾತ್ರ ವಹಿಸಿತ್ತು. ದೇವಿಶ್ರೀ ಪ್ರಸಾದ್ ಅವರ ಮ್ಯೂಸಿಕ್ ಮೋಡಿ ಮಾಡಿತ್ತು. ಅದರಲ್ಲಿನ ಎಲ್ಲ ಹಾಡುಗಳು ಸೂಪರ್ ಹಿಟ್ ಎಣಿಸಿಕೊಂಡಿದ್ದವು. ಈಗಲೂ ಪಡ್ಡೆಗಳಿಗೆ ʼಪುಷ್ಪʼ ಸಿನಿಮಾದ ಹಾಡುಗಳು ಫೆವರೇಟ್. ಹೀಗಾಗಿ ಸುಕುಮಾರ್ ʼಪುಷ್ಪ 2ʼ ಕೈಗೆತ್ತಿಕೊಂಡಾಗಲೂ ಹಾಡುಗಳತ್ತ ಗಮನ ಹರಿಸಿದ್ದರು.
It's time for the Mass Blockbuster Song to energize your playlist 🔥🔥#Peelings song out now❤🔥
— Pushpa (@PushpaMovie) December 1, 2024
Telugu – https://t.co/KKjHhKVHEL
Hindi – https://t.co/mjxCtLbI4O
Tamil – https://t.co/JzOzsPsppJ
Malayalam – https://t.co/ARN6bvtknb
Kannada – https://t.co/t1eEwkYnV9
Bengali -… pic.twitter.com/co3k7drqam
ʼಪುಷ್ಪ 2ʼ ಸಿನಿಮಾಕ್ಕೂ ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ. ಇಲ್ಲೂ ರೊಮ್ಯಾಂಟಿಕ್, ಮೆಲೋಡಿ, ಟಪ್ಪಾಂಗುಚ್ಚಿ ಹಾಡುಗಳನ್ನು ಅವರು ಕಂಪೋಸ್ ಮಾಡಿದ್ದಾರೆ. ಇದೀಗ ರಿಲೀಸ್ ಆಗಿರುವ ʼಪೀಲಿಂಗ್ಸ್ʼ ಟಪ್ಪಾಂಗುಚ್ಚಿ ಶೈಲಿಯ ಹಾಡಾಗಿದ್ದು, ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮೈ ಚಳಿ ಬಿಟ್ಟು ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ. ರಶ್ಮಿಕಾ ಮತ್ತೊಮ್ಮೆ ಗ್ಲಾಮರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಅಂದು ʼಸಾಮಿʼ; ಇಂದು ʼಪೀಲಿಂಗ್ಸ್ʼ
ʼಪುಷ್ಪʼ ಚಿತ್ರದ ʼಸಾಮಿ ಸಾಮಿʼ ಎನ್ನುವ ಹಾಡಿನಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಬೋಲ್ಡ್ ಆಗಿ ಡ್ಯಾನ್ಸ್ ಮಾಡಿದ್ದರು. ಇವರಿಬ್ಬರ ಕೆಮಿಸ್ಟ್ರಿಗೆ ಪ್ಯಾನ್ಸ್ ಫಿದಾ ಆಗಿದ್ದರು. ಇದೀಗ ರಿಲೀಸ್ ಆಗಿರುವ ʼಪೀಲಿಂಗ್ಸ್ʼ ಹಾಡಿನಲ್ಲಿ ಇವರಿಬ್ಬರು ಮೈಮರೆತು ಸ್ಟೆಪ್ ಹಾಕಿದ್ದು, ಅಭಿಮಾನಿಗಳು ಕಣ್ಣು ಮಿಟುಕಿಸದೆ ನೋಡುತ್ತಿದ್ದಾರೆ. ಮತ್ತೊಮ್ಮೆ ಇವರಿಬ್ಬರ ಡ್ಯಾನ್ಸ್ ಟ್ಯಾಲೆಂಟ್ ಅನಾವರಣಗೊಂಡಿದೆ.
ಚಿತ್ರ ಬಿಡುಗಡೆಗೆ ದಿನಗಣನೆ
ʼಪುಷ್ಪ 2ʼ ಡಿ. 5ರಂದು ಅದ್ಧೂರಿಯಾಗಿ ತೆರೆ ಕಾಣಲಿದ್ದು, ಚಿತ್ರತಂಡ ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ವಿವಿಧ ಕಡೆಗಳಲ್ಲಿ ಪ್ರಮೋಷನ್ ಕಾರ್ಯಕ್ರಮ ಆಯೋಜಿಸಿ ವೀಕ್ಷಕರ ಗಮನ ಸೆಳೆಯುತ್ತಿದೆ. ಚಿತ್ರಕ್ಕೆ ಸಿಗುತ್ತಿರುವ ಸ್ಪಂದನೆ ಗಮನಿಸಿದರೆ ಬಿಡುಗಡೆಯಾದ ಮೊದಲ ದಿನವೇ 300 ಕೋಟಿ ರೂ. ಗಳಿಸಲಿದೆ ಎನ್ನುವ ಲೆಕ್ಕಾಚಾರ ಹಾಕಲಾಗುತ್ತಿದೆ. ಭಾರತವೊಂದರಲ್ಲೇ ಸುಮಾರು 233 ಕೋಟಿ ಕಲೆಕ್ಟ್ ಮಾಡಲಿದೆ. ಆಂಧ್ರ ಪ್ರದೇಶದಲ್ಲಿ 105 ಕೋಟಿ ರೂ., ಕರ್ನಾಟಕದಲ್ಲಿ 20 ಕೋಟಿ ರೂ., ತಮಿಳುನಾಡಿನಲ್ಲಿ 15 ಕೋಟಿ ರೂ. ಮತ್ತು ಕೇರಳದಲ್ಲಿ 8 ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆ ಇದೆ.
ಈ ಸುದ್ದಿಯನ್ನೂ ಓದಿ: Pushpa 2 Movie: ‘ಕಿಸಿಕ್’ ಎನ್ನುತ್ತಲೇ ಅಲ್ಲು ಅರ್ಜುನ್ ಜತೆ ಸೊಂಟ ಬಳುಕಿಸಿದ ಶ್ರೀಲೀಲಾ; ‘ಪುಷ್ಪ 2’ ಚಿತ್ರದ ಐಟಂ ಸಾಂಗ್ ಔಟ್