Friday, 13th December 2024

ಸೆ.23, 24 ರಂದು ರಾಘವ್ ಚಡ್ಡಾ -ಪರಿಣಿತಿ ಚೋಪ್ರಾ ವಿವಾಹ ಸಮಾರಂಭ

ಬೆಂಗಳೂರು: ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಮತ್ತು ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಜೋಡಿ ಸೆಪ್ಟೆಂಬರ್ 23 ಮತ್ತು 24 ರಂದು ರಾಜಸ್ಥಾನದ ಉದಯಪುರದಲ್ಲಿ ವಿವಾಹವಾಗಲಿದೆ.

ಲೀಲಾ ಪ್ಯಾಲೆಸ್ ಮತ್ತು ದಿ ಒಬೆರಾಯ್ ಉದಯವಿಲಾಸ್‌ನಲ್ಲಿ ವಿವಾಹದ ವಿಧಿವಿಧಾನಗಳು ನಡೆಯಲಿವೆ ಎಂದು ವರದಿಯಾಗಿದೆ.

ರಾಜಸ್ಥಾನ ತಲುಪುವ ಮುನ್ನ ಜೋಡಿ ದೆಹಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಸೆ.23ರಂದು ಅವರ ಹಳದಿ ಸಮಾರಂಭ, ಮೆಹೆಂದಿ ಇತರ ವಿವಾಹ ಪೂರ್ವ ಸಂಭ್ರಮಗಳು ನಡೆಯಲಿದೆ. ಸೆ.24ರಂದು ಮಾಂಗಲ್ಯ ಧಾರಣೆ ಶಾಸ್ತ್ರ ನಡೆಯಲಿದೆ.

ಮೆಹೆಂದಿ ಕಾರ್ಯಕ್ರಮದಲ್ಲಿ ಅವರ ಆಪ್ತರು ಮತ್ತು ಕುಟುಂಬದವರು ಮಾತ್ರ ಪಾಲ್ಗೊಳ್ಳಲಿದ್ದಾರೆ.

ಮದುವೆಗೆ 20ಕ್ಕೂ ಹೆಚ್ಚು ಅತಿಥಿಗಳಿಗೆ ಸ್ಥಳಾವಕಾಶ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ. 50ಕ್ಕೂ ಹೆಚ್ಚು ವಿವಿಐಪಿಗಳು ಭಾಗಿಯಾಗಲಿದ್ದಾರೆ ಎಂದು ವರದಿಯಾಗಿದೆ. ವಿವಾಹದಲ್ಲಿ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಸೇರಿದಂತೆ ಹಲವರು ಇರಲಿದ್ದಾರೆ. ಪರಿಣಿತಿ ಚೋಪ್ರಾ ಅವರ ಸೋದರಸಂಬಂಧಿ ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ನಿಕ್ ಜೋನಾಸ್ ಕೂಡ ಭಾಗಿಯಾಗಲಿದ್ದಾರೆ.