ಬಿಗ್ ಬಾಸ್ (Bigg Boss Kannada 11) ಮನೆಗೆ ಕಾಲಿಟ್ಟಾಗಿನಿಂದ ರಜತ್ ಹಾಗೂ ಚೈತ್ರಾ ಕುಂದಾಪುರ ನಡುವೆ ಜಗಳ ನಡೆಯುತ್ತಲೇ ಇದೆ. ಹೆಚ್ಚಿನ ಟಾಸ್ಕ್ ಮಧ್ಯೆ ಇವರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಶನಿವಾರ ಕೂಡ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ನ ಬ್ರೇಕ್ ಮಧ್ಯೆಯೂ ಇವರು ಕಿತ್ತಾಡಿಕೊಂಡಿದ್ದರು. ನಾಮಿನೇಷನ್ ವಿಚಾರದಲ್ಲಿ ಪ್ರತಿ ಬಾರಿ ಚೈತ್ರಾ ಹೆಸರು ರಜತ್ ತೆಗೆದುಕೊಂಡರೆ, ರಜತ್ ಅವರು ಚೈತ್ರಾ ಹೆಸರು ತೆಗೆದುಕೊಳ್ಳುತ್ತಾರೆ.
ಇವರಿಬ್ಬರ ಕಿತ್ತಾಟ ಭಾನುವಾರ ಸೂಪರ್ ಸಂಡೇ ವಿಥ್ ಸುದೀಪ್ ಎಪಿಸೋಡ್ನಲ್ಲೂ ಮುಂದುವರೆಯಿತು. ಸೂಪರ್ ಸಂಡೇ ಕಾರ್ಯಕ್ರಮದಲ್ಲಿ ಕಿಚ್ಚ ಸದೀಪ್ ಮನೆಯವರಿಗೆ ಒಂದು ಚಟುವಟಿಕೆ ಕೊಟ್ಟಿದ್ದಾರೆ. ಸುದೀಪ್ ಸ್ಪರ್ಧಿಗಳ ಮುಂದೆ ಅವರಲ್ಲಿ ಇದು ಇಷ್ಟ ಇಲ್ಲ, ಇದನ್ನು ಅವರು ಬದಲಾಯಿಸಿಕೊಳ್ಳಬೇಕು ಎಂಬುವುದನ್ನು ಹೇಳಿ ಆ ತಟ್ಟೆಯನ್ನು ಸುತ್ತಿಗೆಯಿಂದ ಹೊಡೆದು ಬ್ರೇಕ್ ಮಾಡಬೇಕು.
ಹೊಸ ವರ್ಷದ ಪ್ರಯುಕ್ತ ಮಾಡಿರುವ ಟಾಸ್ಕ್ ಇದಾಗಿದೆ. ಇದರಲ್ಲಿ ಚೈತ್ರಾ ಕುಂದಾಪುರ ಅವರು ರಜತ್ ಹೆಸರು ತೆಗೆದುಕೊಂಡಿದ್ದಾರೆ. ತಮಾಷೆಗೂ ಮತ್ತು ವ್ಯಂಗ್ಯ, ಅಪಹಾಸ್ಯಕ್ಕೂ ಬಹಳ ವ್ಯತ್ಯಾಸ ಇದೆ ಎಂದು ಚೈತ್ರಾ ನೇರವಾಗಿ ರಜತ್‌ಗೆ ಹೇಳಿ ಸುತ್ತಿಗೆಯಿಂದ ತಟ್ಟೆಯನ್ನು ಒಡೆದಿದ್ದಾರೆ. ಹಾಗೆಯೆ ನೀವು ಇನ್ನೊಬ್ಬರ ತಪ್ಪುಗಳನ್ನು ತೆಗೆದುಕೊಳ್ಳುತ್ತೀರಿ, ಅದೇ ಥರ ಇನ್ನೊಬ್ಬರು ಹೇಳಿದ್ದನ್ನ ತೆಗೆದುಕೊಳ್ಳಿ ಎಂದು ಗೌತಮಿ ಹೇಳಿದ್ದಾರೆ.
ಅತ್ತ ಹನುಮಂತ ಇವರೆಲ್ಲರಿಗಿಂತ ಭಿನ್ನವಾಗಿ ಹಾಡು ಹೇಳುವ ಮೂಲಕ ರಜತ್‌ಗೆ ಬದಲಾಗು ಎಂದು ಹೇಳಿದ್ದಾರೆ. ಸಿಟ್ಟು ಬಂದಾಗ ನಿಧಾನ ಮಾಡಣ್ಣ.. ಸಿಟ್ಟಿನ ಕೈಯಾಗ ಬುದ್ದಿ ಕೊಟ್ಟರೆ, ಅದೇ ಒಂದು ಮುಳ್ಳಾಗಬಹುದಣ್ಣ ಎಂದು ಹಾಡು ಹೇಳಿದ್ದಾರೆ ಹನುಮಂತ. ಅತ್ತ ಮೋಕ್ಷಿತಾ ಪೈ, ಗೌತಮಿ ಜಾಧವ್, ಮಂಜು ಹೆಸರು ತೆಗೆದುಕೊಂಡಿದ್ದಾರೆ. ಎಲ್ಲರ ಮುಂದೆ ಗೌತಮಿ ಅವರು ಮಂಜಣ್ಣನಿಗೆ ಜೋರು ಮಾಡುತ್ತಾರೆ. ಆ ಟೈಮಲ್ಲಿ ಮಂಜಣ್ಣ ಏನೂ ಮಾತಾನಾಡೋದೇ ಇಲ್ಲ. ತಮ್ಮನ್ನು ತಾವು ಯಾಕೆ ಅಷ್ಟು ಕೆಳಗೆ ಹಾಕಿಕೊಳ್ತಾ ಇದ್ದಾರೆ ಅಂತ ಗೊತ್ತಾಗ್ತಾ ಇಲ್ಲ ಎಂದು ಮೋಕ್ಷಿತಾ ನೇರವಾಗಿ ಹೇಳಿದ್ದಾರೆ.
BBK 11: 90ನೇ ದಿನಕ್ಕೆ ಬಿಗ್ ಬಾಸ್ ಪ್ರಯಾಣ ಕೊನೆಗೊಳಿಸಿದ ಐಶ್ವರ್ಯಾ ಸಿಂಧೋಗಿ