Thursday, 28th November 2024

BBK 11: ಮಂಜು ರೋಗಿಷ್ಟ ರಾಜ: ಮತ್ತೆ ನಾಲಿಗೆ ಹರಿಬಿಟ್ಟ ರಜತ್

Ugramm Manju and Rajath (1)

ಈ ವಾರ ಬಿಗ್ ಬಾಸ್ ಮನೆ ಬಿಗ್ ಬಾಸ್ (Bigg Boss Kannada 11) ಸಾಮ್ರಾಜ್ಯವಾಗಿ ಬದಲಾಗಿದೆ. ಉಗ್ರಂ ಮಂಜು ರಾಜನಾಗಿ ಹಾಗೂ ಮೋಕ್ಷಿತಾ ಪೈ ಯುವರಾಣಿಯಾಗಿ ಆಳುತ್ತಿದ್ದಾರೆ. ಸಾಮ್ರಾಜ್ಯಕ್ಕಾಗಿ ಇಬ್ಬರ ಮಧ್ಯೆ ಕಿತ್ತಾಟ ಜೋರಾಗಿದೆ. ಇಡೀ ಮನೆ ಇಬ್ಭಾಗವಾಗಿದ್ದು, ಎರಡು ಬಣಗಳಾಗಿ ವಿಂಗಡಿಸಲಾಗಿದೆ. ಒಂದು ಯುವರಾಣಿ ಮೋಕ್ಷಿತಾ ಅವರ ಬಣವಾದರೆ, ಇನ್ನೊಂದು ರಾಜ ಮಂಜಣ್ಣ ಬಣವಾಗಿದೆ.

ಈ ಎರಡು ಬಣಗಳಿಗೆ ಬಿಗ್ ಬಾಸ್ ಕಾಲ ಕಾಲಕ್ಕೆ ಟಾಸ್ಕ್ ನೀಡುತ್ತಾರೆ. ಇದರಲ್ಲಿ ಅತಿ ಹೆಚ್ಚು ಟಾಸ್ಕ್ ಗೆದ್ದ ಬಣ ಕ್ಯಾಪ್ಟನ್ಸಿ ಓಟಕ್ಕೆ ಅರ್ಹತೆ ಪಡೆಯುತ್ತಾರೆ. ಇದರ ನಡುವೆ ಬಿಗ್ ಬಾಸ್ ರಾಜ ಹಾಗೂ ಯುವರಾಣಿಗೆ ಶಾಕ್ ಕೊಟ್ಟಿದ್ದಾರೆ. ಮಹಾರಾಜ ಮಂಜಣ್ಣ, ಯುವರಾಣಿ ಮೋಕ್ಷಿತಾ ಒಬ್ಬ ಪ್ರಜೆಯನ್ನು ಈ ವಾರದ ಕ್ಯಾಪ್ಟನ್ಸಿ ಟಾಸ್ಕ್​ನಿಂದ ಹೊರಗಿಡಿ ಎಂದು ಬಿಗ್​ ಬಾಸ್​ ಸೂಚಿಸಿದ್ದಾರೆ.

ಅದರಂತೆ ಮೋಕ್ಷಿತಾ ಅವರು ತ್ರಿವಿಕ್ರಮ್​ ಅವರನ್ನು ಮತ್ತು ಮಂಜು ಅವರು ರಜತ್​ ಅವರ ಹೆಸರನ್ನು ಸೂಚಿಸಿ ತಮ್ಮ ಕಾರಣಗಳನ್ನು ಒದಗಿಸಿದ್ದಾರೆ. ತ್ರಿವಿಕ್ರಮ್​ ಅವರು ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಹೇಳೋವಂತ ಬುದ್ಧಿ ಇದೆ ಎಂದು ಮೋಕ್ಷಿತಾ ತಮ್ಮ ಕಾರಣಗಳನ್ನು ಒದಗಿಸಿದ್ದಾರೆ. ಅತ್ತ ಮಂಜಣ್ಣ ರಾಜ ಅವರು ರಜತ್​ ಹೆಸರು ತೆಗೆದುಕೊಂಡಿದ್ದಾರೆ. ಅವರಿಗೆ ಸರಿಸಮಾನ ಯಾರೂ ಇಲ್ಲ ಅಂದುಕೊಂಡಿದ್ದಾರೆ. ಎಲ್ಲರೂ ಚಿಕ್ಕವರೇ ಎಂದು ಕಾಣುವಂತಹ ಮನೋಭಾವನೆ ಇದೆ ಎಂದಿದ್ದಾರೆ.

ಈ ಪ್ರಕ್ರಿಯೆ ಮುಗಿದ ಬಳಿಕ ಮಂಜು ನೀಡಿದ ಹೇಳಿಕೆಗೆ ರಜತ್ ಸಿಟ್ಟಾಗಿದ್ದಾರೆ. ಇವರು ಆಗ್ಲೆ ಫಿಕ್ಸ್​​ ಆಗ್ಬಿಟ್ಟಿದ್ದಾರೆ, ವಿನ್ನರ್​​ ಇವ್ರು, ರನ್ನರ್​​-ಅಪ್ ಅವರು ಅಂತ. ಈಗ ರೂಮ್ ಯಿಂದ ಆಚೆ ಬರೋಕೆ ಅವರಿಗೆ ಎಲ್ಲಿದೆ ಮುಖ. ಅಲ್ಲೇ ಕೂತಿರುತ್ತಾರೆ ಬೆಡ್​ ಶೀಟ್​ ಹಾಕಿಕೊಂಡು, ಒಳ್ಳೆ ರೋಗಿಷ್ಟನ ತರ. ರೋಗಿಷ್ಟ ರಾಜ ಎಂದು ಹೇಳಿದ್ದಾರೆ.

ಕಳೆದ ವಾರ ಗೋಲ್ಡ್ ಸುರೇಶ್ ಅವರಿಗೆ ರಜತ್ ಕಿಶನ್ ಬಳಸಿದ ಪದ ಸಾಕಷ್ಟು ಸದ್ದು ಮಾಡಿತು. ಈ ವಿಚಾರದ ಬಗ್ಗೆ ಸುದೀಪ್ ವೀಕೆಂಡ್​ನಲ್ಲಿ ಸಖತ್ ಕ್ಲಾಸ್ ತೆಗೆದುಕೊಂಡಿದ್ದರು. ಒಬ್ಬ ಮಷ್ಯನ ಬಾಯಿಂದ ಬರುವ ಪದಗಳು ಬರೀ ಮಾತಲ್ಲ. ಅವನ ವ್ಯಕ್ತಿತ್ವದ ವರ್ಚಸ್ಸು. ಒಂದು ಮಾತು ಗೆಲುವಿನ ಪಟ್ಟ ಏರಿಸುತ್ತೆ, ಒಂದು ಮಾತು ಸೋಲಿನ ದಾರಿನೂ ತೋರಿಸುತ್ತೆ. ಕನ್ನಡದಲ್ಲಿ ತುಂಬಾ ಇದೆ ಸರ್ ಮಾತಾಡೋಕೆ, ನಿಮ್ಗೆ ಎಲ್ಲರಿಗೂ ಕೆಲವು ತೂಕಗಳಿವೆ ಎಂದಿದ್ದರು.

ಇದನ್ನು ಕೇಳಿ ರಜತ್ ಅವರು ಇನ್ನೊಂದ್ಸಲಿ ಆ ತಪ್ಪನ್ನ ರಿಪೀಟ್ ಮಾಡಲ್ಲ ಎಂದು ಹೇಳಿದ್ದರು. ಆದರೆ, ಈ ಬಾರಿ ಮತ್ತದೆ ಕೆಲ ಪದ ಬಳಕೆ ಮಾಡುತ್ತಿದ್ದಾರೆ. ಇದರ ಬಗ್ಗೆ ಪುನಃ ಈ ವಾರದ ಅಂತ್ಯದಲ್ಲಿ ಸುದೀಪ್ ಕ್ಲಾಸ್ ತೆಗೆದುಕೊಳ್ಳುತ್ತಾರ ಎಂಬುದು ನೋಡಬೇಕಿದೆ.

BBK 11: ಧನರಾಜ್ ರಾಜ, ಭವ್ಯ ಯುವರಾಣಿ: ಬಿಗ್ ಬಾಸ್ ಸಾಮ್ರಾಜ್ಯದಲ್ಲಿ ಮತ್ತೊಂದು ಟ್ವಿಸ್ಟ್ ಕೊಡ್ತಾರ ಬಿಗ್ ಬಾಸ್