Thursday, 12th December 2024

ರಶ್ಮಿಕಾ ಜ್ಯಾಕ್‌’ಪಾಟ್‌: ಅಮಿತಾಭ್‌ ಬಚ್ಚನ್‌ ಜತೆ ತೆರೆ ಹಂಚಿಕೊಳ್ಳಲಿರುವ ’ನ್ಯಾಷನಲ್‌ ಕ್ರಶ್‌’

ಮುಂಬೈ: ಸ್ಟೂಡೆಂಟ್‌ ಆಫ್‌ ದಿ ಇಯರ್‌ ಖ್ಯಾತಿಯ ನಟ ಸಿದ್ಧಾರ್ಥ್ ಮಲ್ಹೋತ್ರ ನಾಯಕನಾಗಿ ನಟಿಸುತ್ತಿರುವ “ಮಿಷನ್‌ ಮಜ್ನು’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದು ರಶ್ಮಿಕಾಗೆ ಮೊದಲ ಹಿಂದಿ ಸಿನಿಮಾ. ಚಿತ್ರೀಕರಣ ಆರಂಭವಾಗಿದ್ದು, ಮೊದಲ ಹಂತದ ಶೂಟಿಂಗ್‌ ಕೂಡ ಪೂರ್ಣಗೊಂಡಿದೆ.

ಆದರೆ ನಟಿ ರಶ್ಮಿಕಾ ಮತ್ತೊಂದು ಹಿಂದಿ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್‌ನ‌ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಅಮಿತಾಭ್‌ ಬಚ್ಚನ್‌ ಮುಖ್ಯ ಭೂಮಿಕೆಯ “ಗುಡ್‌ ಬೈ’ ಸಿನಿಮಾದಲ್ಲಿ, ರಶ್ಮಿಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಮುಹೂರ್ತ ಸಮಾರಂಭ ಕೂಡ ನೆರವೇರಿದ್ದು, ಚಿತ್ರದ ಶೂಟಿಂಗ್‌ ಕೂಡ ಇದೇ ತಿಂಗಳು ಶುರುವಾಗಲಿದೆ ಎನ್ನಲಾಗು ತ್ತಿದೆ. ವಿಕಾಸ್‌ ಭಾಲ್‌ “ಗುಡ್‌ ಬೈ’ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ವರ್ಷದ ಕೊನೆಯೊಳಗೆ ರಶ್ಮಿಕಾ ಮಂದಣ್ಣ ಹಿಂದಿಯಲ್ಲಿ ಅಭಿನಯಿಸುತ್ತಿರುವ ಎರಡು ಸಿನಿಮಾಗಳು ಬಿಡುಗಡೆಯಾಗಲಿದೆ.