ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂ.ಪ್ರ.ಟ್ರಸ್ಟ್ 28ನೇ ವಾರ್ಷಿಕೋತ್ಸವ
ನೆಲಮಂಗಲ: ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ಕಳೆದ 27 ವರ್ಷದಲ್ಲಿ, ಸಾಂಸ್ಕೃತಿಕ ಲೋಕದಲ್ಲಿ ಆನೆಯಂತೆ ನಡೆದು, ಅನೇಕ ದಾಖಲೆ ನಿರ್ಮಿಸಿದೆ.
ಕನ್ನಡ ರಂಗಭೂಮಿ, ಕಿರುತರೆ, ಹಿರಿಯ ಚಲನಚಿತ್ರ ನಟಿ, ಶ್ರೀಮತಿ ಗಿರಿಜಾ ಲೋಕೇಶ್ ಅವರು ರಾಷ್ಟ್ರೀಯ ಕಲಾ ವಿಭೂಷಣ ರಾಷ್ಟ್ರಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರದಾನಕ್ಕೆಂದೆ ಜನಿಸಿದ ಈ ಸಂಸ್ಥೆ ಇದುವರೆಗೆ 10 ಮಕ್ಕಳ ಸಮ್ಮೇಳನ, 5 ರಾಷ್ಟ್ರೀಯ ನೃತ್ಯ ಕಲಾ ಮೇಳ, 5 ಕವಿ ಸಮ್ಮೇ ಳನ, 3 ಚುಟುಕು ಸಾಹಿತ್ಯ ಸಮ್ಮೇಳನ, 2 ಪತ್ರಕರ್ತರ ಸಮಾವೇಶ, 11 ಚಿತ್ರಕಲಾ ಪ್ರದರ್ಶನ, 4 ವ್ಯಂಗ್ಯ ಚಿತ್ರಕಲಾ ಪ್ರದರ್ಶನ, 26 ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಮೂಲಕ 300 ಕನ್ನಡ ಕೃತಿಗಳಿಗೆ 10 ಲಕ್ಷ ರೂ.ಗಳ ನಗದು ಬಹುಮಾನ, 17 ನಾಟಕೋ ತ್ಸವ ಮೂಲಕ 68 ನಾಟಕ ಪ್ರದರ್ಶನ, 160 ಏಕ ನಾಟಕ ಪ್ರದರ್ಶನ, ಪುಸ್ತಕ ಬಿಡುಗಡೆ, 60ಕ್ಕೂ ಹೆಚ್ಚು ವಿಚಾರಸಂಕಿರಣ, ನೂರಾರು ಉಪನ್ಯಾಸ ಸೇರಿದಂತೆ, 64 ವಿವಿಧ ಸಾಂಸ್ಕೃತಿಕ ಸಮ್ಮೇಳನಗಳನ್ನು ನಡೆಯಿಸಿದೆ.
ಜನವರಿ 23ರಂದು ಶನಿವಾರ ಬೆಳಿಗ್ಗೆ 10ಕ್ಕೆ, ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ, 28ನೇ ವಾರ್ಷಿಕೋತ್ಸವದಲ್ಲಿ ಎಸ್.ಪಿ. ಬಾಲ ಸುಬ್ರಮಣ್ಯಂ ಜೀವನ ಚರಿತ್ರೆ ಹಾಗೂ ಹಾಸನ ತಾಲ್ಲೂಕುಗಳ ದೇವಾಲಯಗಳ ದರ್ಶನ ಮಾಹಿತಿ ಕೋಶ ಪುಸ್ತಕ ಬಿಡುಗಡೆ ಹಾಗೂ ಜೀವಮಾನ ಸಾಧನೆಗಾಗಿ ಆರು ಪ್ರಮುಖ ಸಾಧಕರಿಗೆ ಅಭಿನಂದನೆ ಸಮಾರಂಭ ಹಮ್ಮಿಕೊಂಡಿದೆ.