Wednesday, 11th December 2024

Singham Again Trailer: ಬಹುನಿರೀಕ್ಷಿತ ಸಿಂಘಂ ಅಗೇನ್ ಸಿನಿಮಾದ ಟ್ರೇಲರ್ ಬಿಡುಗಡೆ: 5 ನಿಮಿಷದ ವಿಡಿಯೋದಲ್ಲಿ ರಿವೀಲ್ ಆಯ್ತು ಸ್ಟೋರಿ

Singham Again

ರೋಹಿತ್ ಶೆಟ್ಟಿ ನಿರ್ದೇಶನದ ಈ ವರ್ಷದ ಬಹು ನಿರೀಕ್ಷಿತ ‘ಸಿಂಗಂ ಅಗೇನ್’ (Singham Again) ಸಿನಿಮಾ ಟ್ರೈಲರ್ ಕೊನೆಗೂ ಬಿಡುಗಡೆಯಾಗಿದೆ. ಸುಮಾರು  5 ನಿಮಿಷ ಇರುವ ಈ ಅದ್ಭುತ ಸಾಹಸಮಯ ಚಿತ್ರದ ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಅಜಯ್ ದೇವಗನ್, ದೀಪಿಕಾ ಪಡುಕೋಣೆ, ಅಕ್ಷಯ್ ಕುಮಾರ್, ಕರೀನಾ ಕಪೂರ್, ಟೈಗರ್ ಶ್ರಾಫ್, ರಣವೀರ್ ಸಿಂಗ್, ಅರ್ಜುನ್ ಕಪೂರ್ ಮತ್ತು ಜಾಕಿ ಶ್ರಾಫ್ ಅಭಿನಯದ ಈ ಚಿತ್ರದ ಟ್ರೇಲರ್ ನೋಡಿದರೆ ರೋಹಿತ್ ಶೆಟ್ಟಿ ಮತ್ತೊಮ್ಮೆ ತಮ್ಮ ಕಾಪ್ ಟೀಮ್​ ಜೊತೆಗೆ ರಾಮಾಯಣ ಕಥೆ ಲಿಂಕ್ ಮಾಡಿ ಸಂಚಲನ ಮೂಡಿಸಿದ್ದಾರೆ.

ರೋಹಿತ್ ಶೆಟ್ಟಿ ಅವರ ಕಾಪ್ ಯೂನಿವರ್ಸ್ ಚಲನಚಿತ್ರ ಸರಣಿಯಲ್ಲಿ ಇದು ಐದನೇ ಚಿತ್ರವಾಗಿದೆ. ಇದಕ್ಕೂ ಮುನ್ನ ಸಿಂಗಂ, ಸಿಂಗಂ ರಿಟರ್ನ್ಸ್, ಸಿಂಬಾ, ಸೂರ್ಯವಂಶಿ ಚಿತ್ರಗಳನ್ನು ಪ್ರೇಕ್ಷಕರು ಸಖತ್ ಎಂಜಾಯ್ ಮಾಡಿದ್ದರು. ಆ್ಯಕ್ಷನ್ ಚಿತ್ರಗಳ ಲೋಕದಲ್ಲಿ ಪರಿಣತರಾಗಿರುವ ರೋಹಿತ್ ಶೆಟ್ಟಿ ಈ ಸಿನಿಮಾದಲ್ಲಂತು ಒಂದು ಕೈ ಮೇಲೊದಂತಿದೆ.

ಈ ಬಾರಿ ರೋಹಿತ್ ಶೆಟ್ಟಿ ತಮ್ಮ ಚಿತ್ರದಲ್ಲಿ ಎಲ್ಲಾ ಮಸಾಲಾವನ್ನು ಬೆರೆಸಿ ನೀಡಿದ್ದಾರೆ. ನಂಬಿಕೆ, ರಾಮಲೀಲಾ, ದೇಶಭಕ್ತಿ ಮತ್ತು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ ಎಲ್ಲ ವಿಚಾರ ಟ್ರೇಲರ್​ನಲ್ಲಿದೆ. ವಿಶೇಷ ಎಂದರೆ ಈ ಚಿತ್ರದ ಟ್ರೇಲರ್ ಹಿಂದಿ ಚಿತ್ರಗಳ ಇತಿಹಾಸದಲ್ಲಿಯೇ ಅತಿ ಉದ್ದ ಟ್ರೈಲರ್ ಎಂದು ಹೇಳಲಾಗುತ್ತಿದೆ.

ಈ ಸಿನಿಮಾದ ಕಥೆಯು ಸೀತಾಮಾತೆಯ ಅಪಹರಣದ ಕಥೆಯೆಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಅರ್ಜುನ್ ನೆಗೆಟಿವ್ ರೋಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿ ಶಕ್ತಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಇದ್ದಾರೆ. ಜಾಕಿ ಶ್ರಾಫ್ ಕೂಡ ಚಿತ್ರದಲ್ಲಿದ್ದಾರೆ. ಈ ಅದ್ಭುತ ಬಾಲಿವುಡ್ ನಟರನ್ನು ಒಂದೇ ಚೌಕಟ್ಟಿನಲ್ಲಿ ನೋಡಲು ಅಭಿಮಾನಿಗಳಂತು ಕಾದು ಕುಳಿತಿದ್ದಾರೆ.

ಕರೀನಾ ಕಪೂರ್- ದಯಾನಂದ ಶೆಟ್ಟಿ:

ಈ ಟ್ರೇಲರ್​ನಲ್ಲಿ ಗಮನ ಸೆಳೆದ ಮತ್ತೊಂದು ಅಂಶವೆಂದರೆ ಕರೀನಾ ಕಪೂರ್ ಮತ್ತು ದಯಾನಂದ ಶೆಟ್ಟಿ ಅವರ ಮಾತುಕತೆ. ಒಂದು ಆಕ್ಷನ್-ಪ್ಯಾಕ್ಡ್ ಸೀಕ್ವೆನ್ಸ್‌ನಲ್ಲಿ, ಕರೀನಾ ಕಪೂರ್, “ದಯಾ ಬಾಗಿಲನ್ನು ಒಡೆದು ಹಾಕಿ” ಎಂದು ಕಿರುಚುತ್ತಾರೆ. ನಂತರ ಶೆಟ್ಟಿ ಕಾರಿನ ಬಾಗಿಲು ಮುರಿದು ಕರೀನಾ ಖಳನಾಯಕರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತಾರೆ. ಈ ಡೈಲಾಗ್ ಫೇಮಸ್ ಶೋ ಸಿಐಡಿಯಿಂದ ತೆಗೆದುಕೊಳ್ಳಲಾಗಿದೆ. ಈ ಡೈಲಾಗ್ ಕೇಳಿ ನೆಟ್ಟಿಗರು ಫುಲ್ ಫಿದಾ ಆಗಿದ್ದು, ಸಾಮಾಜಿಕ ತಾಣಗಳಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ಸಿಂಘಂ ಅಗೇನ್ ಸಿನಿಮಾ ನವೆಂಬರ್ 1 ರಂದು ದೇಶಾದ್ಯಂತ ಎಲ್ಲ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ.

BBK 11: ಧರ್ಮ-ಐಶ್ವರ್ಯ ಲವ್ ​ಸ್ಟೋರಿಗೆ ಸಿಕ್ತು ಪುಷ್ಟಿ: ಇವರು ಬಿಗ್ ಬಾಸ್ ಮನೆಯ ಮುದ್ದು ಜೋಡಿ ಎಂದ ನೆಟ್ಟಿಗರು