Thursday, 19th September 2024

Ronny Movie: ‘ರಾನಿ’ ಚಿತ್ರದ ಟ್ರೈಲರ್ ರಿಲೀಸ್; ಮಾಸ್‌ ಲುಕ್‌ನಲ್ಲಿ ನಟ ಕಿರಣ್ ರಾಜ್ ಎಂಟ್ರಿ

ಬೆಂಗಳೂರು: ನಟ ಕಿರಣ್ ರಾಜ್ ನಾಯಕರಾಗಿ ನಟಿಸಿರುವ ʼರಾನಿʼ ಚಿತ್ರದ ( Ronny Movie) ಟ್ರೈಲರ್ ಬಿಡುಗಡೆಯಾಗಿದ್ದು, ಮಾಸ್‌ಗೆ ಮಾಸ್, ಕ್ಲಾಸ್‌ಗೆ ಕ್ಲಾಸ್ ಎನ್ನುವಂತೆ ಇರುವ ಟ್ರೈಲರ್ ನೋಡಿ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದ್ಧೂರಿ ಮೇಕಿಂಗ್‌ನಿಂದ ಸದ್ದು ಮಾಡಿರುವ ಈ ಚಿತ್ರ ಸೆಪ್ಟೆಂಬರ್ 12 ಗುರುವಾರ ಬಿಡುಗಡೆಯಾಗಲಿದ್ದು, ಇದೀಗ ರಿಲೀಸ್‌ ಆಗಿರುವ ಟ್ರೈಲರ್ ಪ್ರೇಕ್ಷಕರಲ್ಲಿ ಬಾರಿ ಕುತೂಹಲ ಮೂಡಿಸಿದೆ.

ಕಿರಣ್ ರಾಜ್ ಆ್ಯಕ್ಷನ್, ಲುಕ್, ಬಾಡಿ ಲಾಂಗ್ವೇಜ್, ಡೈಲಾಗ್ ಡೆಲಿವರಿ, ಗುರುತೇಜ್ ಶೆಟ್ಟಿ ಸಂಭಾಷಣೆ, ಸಚಿನ್ ಬಸ್ರೂರು ಹಿನ್ನೆಲೆ ಸಂಗೀತ ಹಾಗೂ ರಾಘವೇಂದ್ರ ಬಿ. ಕೋಲಾರ ಕ್ಯಾಮರಾ ವರ್ಕ್ ಎಲ್ಲವೂ ಚೆನ್ನಾಗಿದೆ. ಸಿನಿಮಾದ ಕ್ವಾಲಿಟಿ ಟ್ರೇಲರ್‌ನಲ್ಲಿ ಕಾಣುತ್ತಿದೆ. ಪ್ರತಿ ಸಾರಿಯು ಚಿತ್ರತಂಡ ನಮ್ಮದು ಫ್ಯಾಮಿಲಿ ಆ್ಯಕ್ಷನ್ ಜಾನರ್ ಸಿನಿಮಾ ಎಂದು ಹೇಳಿಕೊಂಡು ಬಂದಿದೆ. ಟ್ರೈಲರ್‌ನಲ್ಲೂ ಆ ಅಂಶ ಕಾಣುತ್ತಿದೆ. ಇದೇ ರೀತಿ ಸಿನಿಮಾದಲ್ಲೂ ʼರಾನಿʼ ಪ್ರೇಕ್ಷಕನ ಮನ ಗೆಲ್ಲುತ್ತಾನಾ ? ಎಂಬುದನ್ನು ತಿಳಿಯಲು ಸೆಪ್ಟೆಂಬರ್ 12 ರ ವರೆಗೆ ಕಾದು ನೋಡಬೇಕಾಗಿದೆ. ʼರಾನಿʼ ಚಿತ್ರಕ್ಕೆ ಗುರುತೇಜ್ ಶೆಟ್ಟಿ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿದೇಶನ ಮಾಡಿದ್ದಾರೆ. ಸ್ಟಾರ್ ಕ್ರಿಯೇಷನ್ ಬ್ಯಾನರ್‌ನಲ್ಲಿ ಚಂದ್ರಕಾಂತ್ ಪೂಜಾರಿ ಉಮೇಶ್ ಹೆಗ್ಡೆ ನಿರ್ಮಾಣ ಮಾಡಿದ್ದಾರೆ.

‘ಕನ್ನಡತಿ’ ಧಾರಾವಾಹಿ ಮುಗಿಯುತ್ತಿದ್ದಂತೆ ಕಿರಣ್ ರಾಜ್ ಸಿನಿಮಾಗಳಲ್ಲೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿರುವ ಕಿರಣ್ ರಾಜ್ ಈಗ ‘ರಾನಿ’ಯಾಗಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಾರಾ? ಎಂಬುದನ್ನು ನೋಡಬೇಕಾಗಿದೆ.

ನಾಗಿನಿ ದೀಪಿಕಾ ದಾಸ್‌ ಈಗ ʼಪಾರು ಪಾರ್ವತಿʼ; ಚಿತ್ರಕ್ಕಾಗಿ 10 ಕೆಜಿ ತೂಕ ಇಳಿಸಿದ ಬಿಗ್‌ಬಾಸ್‌ ಚೆಲುವೆ

Deepika Das

ಬೆಂಗಳೂರು: EIGHTEEN THIRTY SIX ಪಿಕ್ಚರ್ಸ್ ಲಾಂಛನದಲ್ಲಿ ಪಿ.ಬಿ.ಪ್ರೇಮನಾಥ್ ಅವರು ನಿರ್ಮಿಸಿರುವ, ರೋಹಿತ್ ಕೀರ್ತಿ ನಿರ್ದೇಶನದಲ್ಲಿ, ‘ಬಿಗ್ ಬಾಸ್’, ‘ನಾಗಿನಿ ಖ್ಯಾತಿಯ ದೀಪಿಕಾ ದಾಸ್ (Deepika Das), ಪೂನಂ ಸರ್ ನಾಯಕ್ ಹಾಗೂ ಫವಾಜ್ ಅಶ್ರಫ್ ಅವರು ಪ್ರಮುಖಪಾತ್ರದಲ್ಲಿ ನಟಿಸಿರುವ ʼ#ಪಾರು ಪಾರ್ವತಿʼ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ EIGHTEEN THIRTY SIX ಪಿಕ್ಚರ್ಸ್ ನಿರ್ಮಾಣ ಸಂಸ್ಥೆ ಉದ್ಘಾಟನೆ ಇತ್ತೀಚೆಗೆ ನೆರವೇರಿತು.

ನಿರ್ಮಾಪಕ ಪ್ರೇಮನಾಥ್ ಮಾತನಾಡಿ, ʼʼನಾನು ಮೂಲತಃ ಐಟಿ ಉದ್ಯೋಗಿ. ಚಿಕ್ಕವಯಸ್ಸಿನಿಂದಲೂ ಸಿನಿಮಾ ನೋಡುತ್ತಿದ್ದ ನನಗೆ, ಸಿನಿಮಾ ನಿರ್ಮಾಣ ಮಾಡುವ ಕನಸಿತ್ತು. ಅದು ಈಗ ನೆರವೇರಿದೆ‌.‌ ನಿರ್ದೇಶಕರು ಒಳ್ಳೆಯ ಕಥೆ ಮಾಡಿದ್ದಾರೆ. ನಾನು ಕೆಲಸದ ಮೇಲೆ ಅನೇಕ ಊರುಗಳಲ್ಲಿ ವಾಸವಾಗಿದ್ದೆ. ಇದು ಕೂಡ ಒಂದು ಪ್ರವಾಸದ ಕಥೆಯಾಗಿರುವುದರಿಂದ ಇಷ್ಟವಾಯಿತು. ಇನ್ನು ನಮ್ಮ EIGHTEEN THIRTY SIX ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ ಮೊದಲ ಚಿತ್ರವೂ ಹೌದು. EIGHTEEN THIRTY SIX ಕೂಡಿದಾಗ 9 ಬರುತ್ತದೆ. ಅದು ನನ್ನ ಲಕ್ಕಿ ನಂಬರ್ʼʼ ಎಂದರು.

ʼʼಹತ್ತು ವರ್ಷಗಳಿಂದ ಪಿ.ವಾಸು, ಎಂ.ಮನೋನ್, ಅರವಿಂದ್ ಶಾಸ್ತ್ರಿ, ಸುನಿ ಮುಂತಾದ ನಿರ್ದೇಶಕರ ಸಿನಿಮಾಗಳಿಗೆ ಕೆಲಸ ಮಾಡಿರುವ ನನಗೆ ಇದು ಮೊದಲ ಸ್ವತಂತ್ರ ನಿರ್ದೇಶನದ ಚಿತ್ರ. ಇದೊಂದು ಅಡ್ವೆಂಚರ್ಸ್ ಮತ್ತು ಪ್ರವಾಸ ಕಥನ. ಬೆಂಗಳೂರು, ಗೋವಾ, ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಉತ್ತರಾಖಂಡದಲ್ಲಿ ಚಿತ್ರೀಕರಣ ನಡೆದಿದೆ. ಮೂರು ಮುಖ್ಯಪಾತ್ರಗಳ ಸುತ್ತ ಸಿನಿಮಾ ಕಥೆ ಸಾಗುತ್ತದೆ. ಪಾಯಲ್ ಎಂಬ ಪಾತ್ರದಲ್ಲಿ ದೀಪಿಕಾ ದಾಸ್ ಕಾಣಿಸಿಕೊಂಡಿದ್ದಾರೆ. ನಿಜಜೀವನದಲ್ಲೂ ಅಡ್ವೆಂಚರ್ಸ್ ಹಾಗೂ ಜರ್ನಿಯಲ್ಲಿ ಆಸಕ್ತಿಯಿರುವ ದೀಪಿಕಾ ದಾಸ್ ಅವರಿಗೆ ಇದು ಹೇಳಿ ಮಾಡಿಸಿದ ಪಾತ್ರ. ಈವರೆಗೂ ನೀವು ನೋಡಿರದ ದೀಪಿಕಾ ದಾಸ್ ಅವರನ್ನು ಈ ಚಿತ್ರದಲ್ಲಿ ನೋಡಬಹುದು. ಇನ್ನೆರಡು ಪ್ರಮುಖ ಪಾತ್ರಗಳ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ. ಚಿತ್ರೀಕರಣ ಮುಗಿಸಿರುವ ನಮ್ಮ ಚಿತ್ರ ಈಗ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ನಿರತವಾಗಿದೆʼʼ ಎಂದು ನಿರ್ದೇಶಕ ರೋಹಿತ್ ಕೀರ್ತಿ ತಿಳಿಸಿದರು.

https://www.instagram.com/p/C_asislhnBN/?utm_source=ig_web_copy_link

ʼʼನನಗೆ ಮೊದಲಿನಿಂದಲೂ ಪ್ರವಾಸ ಹಾಗೂ ಅಡ್ವೆಂಚರ್ಸ್ ನಲ್ಲಿ ಆಸಕ್ತಿ. ಈ ಚಿತ್ರದಲ್ಲಿ ನಾನು ಏಕಾಂಗಿ ಸಂಚಾರಿ. ಪಾಯಲ್ ನನ್ನ ಪಾತ್ರದ ಹೆಸರು. ಪ್ರಯಾಣದಲ್ಲೇ ಚಿತ್ರದ ಹೆಚ್ಚು ಕಥೆ ನಡೆಯುತ್ತದೆ. ಈ ಚಿತ್ರಕ್ಕಾಗಿ ನಾನು ಒಂದು ತಿಂಗಳಲ್ಲಿ ಹತ್ತು ಕೆಜಿ ತೂಕ ಇಳಿಸಿಕೊಂಡಿದ್ದೇನೆ‌ ಹಾಗೂ ಉದ್ದವಾದ ಕೂದಲನ್ನು ಗಿಡ್ಡ ಕೂದಲು ಮಾಡಿಕೊಂಡಿದ್ದೇನೆ. ನನ್ನ ಪಾತ್ರ ಕೇಳಿದ್ದನ್ನು ಮಾಡಿದ್ದೇನೆ. ಈ ಚಿತ್ರದಲ್ಲಿ ನಮ್ಮಷ್ಟೇ ಮುಖ್ಯ ಪಾತ್ರ ವಹಿಸಿರುವುದು ಚಿತ್ರದಲ್ಲಿ ನಾವು ಸಂಚಾರಿಸಿರುವ ಕಾರುʼʼ ಎಂದು ದೀಪಿಕಾ ದಾಸ್ ವಿವರಿಸಿದರು.

ಚಿತ್ರದಲ್ಲಿ ನಟಿಸಿರುವ ಪೂನಂ ಸರ್ ನಾಯಕ್ ಮತ್ತು ಫವಾಜ್ ಅಶ್ರಫ್ ಮಾತನಾಡಿ, ಈ ಚಿತ್ರದಲ್ಲಿ ಅಭಿನಯಿಸಿದ್ದು ಖುಷಿಯಾಗಿದೆ. ಮುಂದಿನ ದಿನಗಳಲ್ಲಿ ನಿರ್ದೇಶಕರು ನಮ್ಮ ಪಾತ್ರಗಳನ್ನು ಪರಿಚಯಿಸುವ ಯೋಜನೆ ಹಾಕಿಕೊಂಡಿದ್ದಾರೆ ಎಂದರು. ಛಾಯಾಗ್ರಾಹಕ ಅಬಿನ್ ರಾಜೇಶ್, ಸಂಗೀತ ನಿರ್ದೇಶಕ ಅರ್ ಹರಿ, ಸಂಕಲನಕಾರ ಸಿ‌.ಕೆ.ಕುಮಾರ್, ಗೀತರಚನೆಕಾರ ನಾಗಾರ್ಜುನ ಶರ್ಮ ಹಾಗೂ ಕಲಾ ನಿರ್ದೇಶಕ ರಾಘು ಮೈಸೂರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಚೇತನ್ ಡಿಸೋಜ ಸಾಹಸ ನಿರ್ದೇಶನ ಹಾಗೂ ರಾಜಾಕೃಷ್ಣನ್ ಆಡಿಯೋಗ್ರಫಿ ಇರುವ ಈ ಚಿತ್ರದ ಡಿಸೈನರ್ ಆಗಿ ಮಹಮ್ಮದ್ ಹಮ್ಜ ಕಾರ್ಯ ನಿರ್ವಹಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Sandalwood News: ವಜ್ರಮುನಿ ಲುಕ್‌ನಲ್ಲಿ ಕೋಮಲ್; ‘ಯಲಾಕುನ್ನಿ’ ಚಿತ್ರೀಕರಣ ಪೂರ್ಣ