ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮೂರನೇ ವಾರಕ್ಕೆ ಕಾಲಿಟ್ಟಿದೆ. ಆದರೆ, ಈ ಬಾರಿಯ ಸೀಸನ್ ಆರಂಭವಾಗಿನಿಂದ ಕಾರ್ಯಕ್ರಮ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿ ಆಗುತ್ತಲೇ ಇದೆ. ಸ್ವರ್ಗ ಮತ್ತು ನರಕ ಎಂಬ ವಿಶೇಷ ಕಾನ್ಸೆಪ್ಟ್ನೊಂದಿಗೆ ಶುರುವಾದ ಶೋ ಬಗ್ಗೆ ಆರಂಭದಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಹೋಗಿತ್ತು. ಬಳಿಕ ಸುದೀಪ್ ಅವರು ಇದು ನನ್ನ ಕೊನೆಯ ಬಿಗ್ ಬಾಸ್ ಸೀಸನ್ ಎಂದರು. ಇವುಗಳ ನಡುವೆ ರೂಪೇಶ್ ರಾಜಣ್ಣ ಬಾಂಬ್ ಸಿಡಿಸಿದ್ದರು.
ಮುಂದಿನ ಸೀಸನ್ನಿಂದ ನಾನು ಬಿಗ್ ಬಾಸ್ ನಡೆಸಿಕೊಡುವುದಿಲ್ಲ ಎಂದು ಸುದೀಪ್ ಟ್ವೀಟ್ ಮಾಡಿದ ಬೆನ್ನಲ್ಲೇ, ಬಿಗ್ ಬಾಸ್ ಮಾಜಿ ಸ್ಪರ್ಧಿ, ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಮತ್ತೊಂದು ಬಾಣ ಬಿಟ್ಟಿದ್ದರು. ‘‘ಬಿಗ್ ಬಾಸ್ ಎಂಬ ಕಾರ್ಯಕ್ರಮ ನಡೆಸುವ ಕೆಲವು ಕನ್ನಡ ದ್ರೋಹಿಗಳ ನಿಮ್ಮ ಕಿತ್ತೋದ್ ಆಟಕ್ಕೆ @KicchaSudeep ಬಿಗ್ ಬಾಸ್ ನಿರೂಪಕರಾಗಿ ನಿಲ್ಲಿಸಬೇಕಾಗಿದೆ. ಅವರಿಗೆ ಮಾಡಿದ ಅವಮಾನ ಸಹಿಸೋಲ್ಲ. ಎ ಮುಂಬೈ ಮರಾಠಿ ಹಾಗೂ ತಮಿಳ್ ನಿರ್ದೇಶಕ ಮೊದಲು ಬಿಗ್ ಬಾಸ್ ಬಿಡಿ. ಇಲ್ಲ ಬಿಗ್ ಬಾಸ್ ನಿಲ್ಲಬೇಕು. ಅಸಲಿ ವಿಷಯ ನಾಳೆ ಮಾತಾಡ್ತೀನಿ’’ ಎಂದು ಭಾನುವಾರ ಟ್ವೀಟ್ ಮಾಡಿ ಚಕ್ರವರ್ತಿ ಚಂದ್ರಚೂಡ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ಅದರಂತೆ ಇದೀಗ ರೂಪೇಶ್ ರಾಜಣ್ಣ ಈ ಕುರಿತು ಮತ್ತೊಂದು ಟ್ವೀಟ್ ಮಾಡಿದ್ದಾರೆ. ‘‘ಕನ್ನಡ. ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಒಪ್ಪಿದ ಬಿಗ್ ಬಾಸ್ ಆಯೋಜಕರು. ಧನ್ಯವಾದಗಳು ತಮಗೂ ಹಾಗೂ #ಕನ್ನಡದ ಪರವಾಗಿ ನಿಂತ @KicchaSudeep ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದಗಳು. ನಾನು ಸಹ ನಾಡಿನ ಪರವಾದ ವಿಚಾರವಾಗಿ ಧ್ವನಿ ಎತ್ತಿದ್ದೇನೆ. ಬದಲಾವಣೆ ನೀವೇ ನೋಡುವಿರಿ,’’ ಎಂದು ಬರೆದುಕೊಂಡಿದ್ದಾರೆ.
ಕನ್ನಡ💛❤️
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) October 14, 2024
ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಒಪ್ಪಿದ ಬಿಗ್ ಬಾಸ್ ಆಯೋಜಕರು
ಧನ್ಯವಾದಗಳು ತಮಗೂ
ಹಾಗೂ #ಕನ್ನಡದ ಪರವಾಗಿ ನಿಂತ @KicchaSudeep ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದಗಳು.💛❤️
ನಾನು ಸಹ ನಾಡಿನ ಪರವಾದ ವಿಚಾರವಾಗಿ ಧ್ವನಿ ಎತ್ತಿದ್ದೇನೆ.
ಬದಲಾವಣೆ ನೀವೇ ನೋಡುವಿರಿ.
ಜೈ ಕರ್ನಾಟಕ 💛❤️@Chakravarthy_dj
ರೂಪೇಶ್ ರಾಜಣ್ಣ ಮಾಡಿರುವ ಈ ಟ್ವೀಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇವರಿಗೆ ಗೊತ್ತಿರುವ ವಿಚಾರ ಏನು? ಅವರು ಏನು ಹೇಳಲು ಹೊರಟಿದ್ದರು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಅಲ್ಲದೆ ಸದ್ಯ ಬಿಗ್ ಬಾಸ್ ಆಯೋಜಕರು ಒಪ್ಪಿರುವುದರಿಂದ ಕಿಚ್ಚ ಸುದೀಪ್ ಅವರ ನಿರ್ಧಾರ ಬದಲಾಗುತ್ತಾ?, ಮುಂದಿನ ಸೀಸನ್‌ನಲ್ಲಿ ನಿರೂಪಕನಾಗಿ ಮುಂದುವರೆಯುತ್ತಾರಾ? ಎಂಬ ಕುತೂಹಲ ಕೂಡ ಮೂಡಿದೆ.
BBK 11: ಬಕೆಟ್ ಹಿಡಿಯೋದು ಬಿಡು: ಬಿಗ್ ಬಾಸ್ ಮನೆಯಲ್ಲಿ ಅನುಷಾ-ಐಶ್ವರ್ಯ ನಡುವೆ ದೊಡ್ಡ ಜಗಳ