Wednesday, 17th July 2024

ದಸರಾಗೆ ಆರ್ ಆರ್ ಆರ್ ತೆರೆಗೆ

ಬಹುನಿರೀಕ್ಷಿತ ,ಆರ್ ಆರ್ ಆರ್, ರೌದ್ರ ರಣ ರುಧಿರ, ಚಿತ್ರವೂ ದಸರಾ ಹಬ್ಬದಂದು ತೆರೆಗಪ್ಪಳಿಸಲು ಸಿದ್ಧವಾಗಿದೆ. ರಾಜಮೌಳಿ ನಿರ್ದೇಶನದ ಈ ಚಿತ್ರವನ್ನು ಕನ್ನಡಕ್ಕೆ ಕೆ.ಆರ್.ಜಿ ಸ್ಟುಡಿಯೊಸ್ ತರುತ್ತಿದೆ. ಪಂಚಭಾಷೆಗಳಲ್ಲಿ ಏಕಕಾಲಕ್ಕೆ ಅಕ್ಟೋಬರ್ 13 ರಂದು ತೆರೆ ಕಾಣಲಿದೆ.

ಜೂ. ಎನ್.ಟಿ.ಆರ್ , ರಾಮ್ ಚರಣ್, ಅಜಯ್ ದೇವಗನ್,ಆಲಿಯಾ ಭಟ್, ಸಮುಥಿರಕಿಣಿ ಮುಂತಾದವರ ದೊಡ್ಡ ತಾರಾ ಬಳಗವೇ ಈ ಚಿತ್ರದಲ್ಲಿದೆ. ಆಕ್ಷನ್, ಡ್ರಾಮಾ ಸಿನಿಮಾ ಇದಾಗಿದ್ದು, ಇಬ್ಬರು ಸ್ವತಂತ್ರ ಹೋರಾಟಗಾರರ ಕುರಿತ ಕಥೆಯಾಗಿದೆ. ಡಿ.ವಿ.ವಿ. ದಾನಯ್ಯ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈಗಾಗಲೇ ಚಿತ್ರದ ಎರಡು ಟೀಸರ್ ರಿಲೀಸ್ ಆಗಿದ್ದು ಚಿತ್ರವನ್ನು ಕಣ್ತುಂಬಿ ಕೊಳ್ಳಲು ಪ್ರೇಕ್ಷಕರು ಕಾತರರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!