ಮುಂಬೈ: ನಟ ಸಲ್ಮಾನ್ ಖಾನ್ (Salman Khan) ಸಿನಿಮಾ ವಿಚಾರ ಅಲ್ಲದೇ ವೈಯಕ್ತಿಕ ವಿಚಾರದಲ್ಲೂ ಸುದ್ದಿಯಾಗುತ್ತಾರೆ. ಇದೀಗ ಸಲ್ಮಾನ್ ಒಂಟಿಯಾಗಿರುವುದಕ್ಕೆ ಕಾರಣ ಏನು, ಸಲ್ಲು ಮದುವೆ ಆಗದಿರುವ ಉದ್ದೇಶ ಏನು? ಎನ್ನುವುದನ್ನು ತಂದೆ ಸಲೀಂ ಖಾನ್ ಬಿಚ್ಚಿಟ್ಟಿದ್ದಾರೆ. ಇನ್ನೂ ಮದುವೆಯಾಗದ ಸಲ್ಮಾನ್ ಸಿಂಗಲ್ ಆಗಿ ಜೀವನ ಸಾಗಿಸುತ್ತಿದ್ದಾರೆ. ಸಲ್ಮಾನ್ ಹುಡುಗಿಯರ ಜೊತೆ ಸ್ನೇಹ ಬೆಳೆಸುತ್ತಾರೆ. ಆದರೆ ಯಾವ ಹುಡುಗಿಯ ಜತೆಗಿನ ಸಂಬಂಧ ಮದುವೆ ಹಂತಕ್ಕೆ ಬರುವುದೇ ಇಲ್ಲ.
ಇನ್ನು ಈ ಬಗ್ಗೆ ಮಾತನಾಡಿರುವ ಸಲೀಂ ಖಾನ್, ಆತ ಹುಡುಗಿಯರಿಗೆ ಹಾಕುವ ಕೆಲವೊಂದು ನಿರ್ಬಂಧಗಳು ಮದುವೆಯಾಗದಿರಲು ಕಾರಣ ಎಂದಿದ್ದಾರೆ. ಸಲ್ಮಾನ್ ಖಾನ್ ಆಲೋಚನೆ ಭಿನ್ನವಾಗಿದೆ. ಆತ ತನ್ನದೇ ಆದ ನಿಯಮಗಳನ್ನು ಹಾಕಲು ಪ್ರಾರಂಭಿಸುತ್ತಾನೆ. ಒಂದು ಸಂಬಂಧದಲ್ಲಿ ಇದ್ದಾಗ ಆ ಹುಡುಗಿಯಲ್ಲಿ ತನ್ನ ತಾಯಿಯ ಗುಣಗಳನ್ನು ಹುಡುಕಲು ಶುರು ಮಾಡ್ತಾನೆ. ಆದರೆ ಇದು ಸಾಧ್ಯವಿಲ್ಲ. ಹೀಗಾಗಿಯೇ ಸಲ್ಮಾನ್‌ಗೆ ಯಾವ ಸಂಬಂಧಗಳು ಹಿಡಿಸಿಲ್ಲ ಎಂದು ಹೇಳಿದ್ದಾರೆ.
ಆತನಿಗೆ ತನ್ನ ಹೆಂಡತಿ ವೃತ್ತಿ ಜೀವನವನ್ನೆಲ್ಲ ಬದಿಗಿಟ್ಟು ಇವನಿಗೆ ಸಮಯ ನೀಡಬೇಕು. ಮನೆಯಲ್ಲೇ ಇರಬೇಕು ಎನ್ನುವುದು ಈತನ ಅಭಿಪ್ರಾಯ. ಹೀಗಾಗಿ ಎಲ್ಲ ನಟಿಯೊಂದಿಗೆ ಬ್ರೇಕಪ್ ಮಾಡಿಕೊಂಡಿದ್ದಾನೆ. ಸಲ್ಮಾ ನ್ ಇವೆಲ್ಲವನ್ನು ನಿರೀಕ್ಷಿಸುವುದು ತಪ್ಪು ಎಂದು ಸಲ್ಲು ತಂದೆ ಸಲೀಂ ಖಾನ್ ಹೇಳಿದ್ದಾರೆ. ಈ ಎಲ್ಲ ಕಂಡೀಷನ್‌ಗಳೇ ಅವನ ಮದುವೆಗೆ ಅಡ್ಡಿಯಾಯ್ತು ಎಂದು ಅವರ ತಂದೆ ಹೇಳಿದ್ದಾರೆ.
ಸಲ್ಮಾನ್ ಬಹು ನಿರೀಕ್ಷಿತ ಸಿಕಂದರ್ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು ತಮಿಳಿನ ಖ್ಯಾತ ನಿರ್ದೇಶಕ ಎಆರ್ ಮುರುಗದಾಸ್ ನಿರ್ದೇಶನದಲ್ಲಿ ಮೂಡಿಬಂದಿರುವ ಸಿಕಂದರ್ ಚಿತ್ರವನ್ನು ಸಾಜಿದ್ ನಾಡಿಯಾಡ್‌ವಾಲಾ ಅದ್ಧೂರಿ ಬಜೆಟ್‌ನಲ್ಲಿ ನಿರ್ಮಾಣ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ಕಾಜಲ್ ಅಗರ್ವಾಲ್ ನಾಯಕಿಯರಾಗಿ ನಟಿಸಿದ್ದು, ಈ ಚಿತ್ರವು 2025ರ ಈದ್ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಆಗಲಿದೆ.
ಈ ಸುದ್ದಿಯನ್ನೂ ಓದಿ:Zee Kannada: ಝೀ ಕನ್ನಡದಲ್ಲಿ ಹಾಡು, ಗೇಮ್, ಸಿನಿಮಾ; ಇದು ಭರ್ಜರಿ ಮನರಂಜನೆಯ ಮಹಾ ಧಮಾಕ