Friday, 22nd November 2024

Salman Khan: ವೆಡ್ಡಿಂಗ್‌ ಕಾರ್ಡ್‌ ಹಂಚಿ ಆಗಿತ್ತು; ಮತ್ತೊಬ್ಬಳ ಜತೆ ಬೆಡ್‌ರೂಂನಲ್ಲಿ ರೆಡ್‌ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದ ಸಲ್ಲು; ಸಂಗೀತಾ ಜತೆ ಬ್ರೇಕಪ್‌ ಆಗಿದ್ದೇಕೆ?

Salman Khan

ಮುಂಬೈ: ಸಿನಿಮಾಗಳಿಗಿಂತ ಹೆಚ್ಚು ಇತರ ವಿಚಾರಗಳಿಂದಲೇ ಈಗಲೂ ಸದಾ ಸುದ್ದಿಯಲ್ಲಿರುವ ಸಲ್ಮಾನ್‌ ಖಾನ್‌(Salman Khan) ಸ್ಟಿಲ್‌ ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌ ಎಂದೇ ಖ್ಯಾತಿ ಪಡೆದವರು. ಹಲವು ಬ್ರೇಕಪ್‌ಗಳ ನಂತರ ಸಿಂಗಲ್‌ ಆಗಿಯೇ ಉಳಿದಿರುವ ಸಲ್ಲು ಮದುವೆಗೆ ಒಂದು ಕಾಲದಲ್ಲಿ ಎಲ್ಲಾ ಸಿದ್ದತೆ ನಡೆದಿತ್ತು, ಇನ್ವಿಟೇಶನ್‌ ಕಾರ್ಡ್‌ ಕೂಡ ರೆಡಿಯಾಗಿ ಕೆಲವೊಂದಷ್ಟು ಮಂದಿಗೆ ಹಂಚಿಯೂ ಆಗಿದ್ದು ಎಂದರೆ ನಂಬಲೇಬೇಕು. ಹೌದು ನಟಿ ಸಂಗೀತಾ ಬಿಜ್ಲಾನಿ(Sangeetha Bijlani) ಮತ್ತು ಸಲ್ಲು ಹಸೆಮಣೆ ಏರೋಕೆ ರೆಡಿ ಆಗಿದ್ರು. ಮದ್ವೆಗೆ ಇನ್ನೇನು ಕೆಲವೇ ದಿನಗಳಿವೆ ಎನ್ನುವಾಗಲೇ ಇವರಿಬ್ಬರ ಸಂಬಂಧ ಮುರಿದುಬಿದ್ದಿತ್ತು. ಇದಕ್ಕೆ ಕಾರಣ ಸೋಮಿ ಅಲಿ(Somy Ali).

ಇತ್ತೀಚೆಗೆ ಸಂದರ್ಶನವೊಂದಲ್ಲಿ ಈ ವಿಚಾರವನ್ನು ಸ್ವತಃ ಸೋಮಿ ಹಂಚಿಕೊಂಡಿದ್ದಾರೆ. ಸಲ್ಮಾನ್ ಖಾನ್ ನಟಿ ಸಂಗೀತಾ ಬಿಜಲಾನಿ ಅವರೊಂದಿಗೆ ರಿಲೇಶನ್‌ಶಿಪ್‌ನಲ್ಲಿದ್ದರು ಅಲ್ಲದೇ ಮದುವೆಗೂ ಎಲ್ಲಾ ತಯಾರಿ ಮಾಡಿಕೊಂಡಿದ್ದರು. ಅಂದುಕೊಂಡಂತೆ ಆಗಿದ್ರೆ ಮೇ. 27, 1994ರಲ್ಲಿ ಸಲ್ಮಾನ್ ಖಾನ್ ಮದುವೆ ಅದ್ಧೂರಿಯಾಗಿ ನಡೆಯಬೇಕಿತ್ತು. ಆದಾಗ್ಯೂ, ಒಟ್ಟಿಗೆ ಕೆಲಸ ಮಾಡುವಾಗ ಸಲ್ಮಾನ್ ಸೋಮಿ ಅಲಿಯಿಂದ ಆಕರ್ಷಿತರಾದರು ಮತ್ತು ಸಂಗೀತಾ ಅವರಿಗೆ ತಿಳಿಯದಂತೆ ಪರಸ್ಪರ ಭೇಟಿಯಾಗಲು ಶುರು ಮಾಡಿದರು. ಸೋಮಿ ಮನೆಯಲ್ಲಿ ಸಂಗೀತಾ ಸಲ್ಮಾನ್‌ನನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದರು ಎಂದು ಹೇಳಿಕೊಂಡಿದ್ದಾರೆ.

ಆ ಸಮಯದಲ್ಲಿ ನಾನು ವಿಂದ್ಯಾಚಲದಲ್ಲಿ (ಉತ್ತರ ಪ್ರದೇಶ) ವಾಸಿಸುತ್ತಿದ್ದೆ. ಸಲ್ಮಾನ್ ಪೈಪ್‌ಗಳನ್ನು ಹತ್ತಿ ಕಿಟಕಿಯ ಮೂಲಕ ನನ್ನ ಕೋಣೆಗೆ ಬರುತ್ತಿದ್ದರು. ಅದು ಬಹಳ ರೊಮ್ಯಾಂಟಿಕ್‌ ಆಗಿತ್ತು. ಅದು ಎರಡು ಬೆಡ್ ರೂಂಗಳ ಅಪಾರ್ಟ್ಮೆಂಟ್ ಆಗಿತ್ತು. ಒಂದು ದಿನ ಸಲ್ಮಾನ್ ಖಾನ್, ಸೋಮಿ ರೂಮಿನಲ್ಲಿರುವಾಗ ಸಂಗೀತಾ ಅಲ್ಲಿಗೆ ಬಂದಿದ್ರು. ಸೋಮಿ ಬಳಿ 10 ನಿಮಿಷ ಕೇಳಿದ್ದ ಸಲ್ಮಾನ್, ಸಂಗೀತಾ ಜೊತೆ ಮಾತುಕತೆ ನಡೆಸಿದ್ದರು. ಸಲ್ಮಾನ್ ಹಾಗೂ ನನ್ನ ಸಂಬಂಧ ಮುರಿದುಕೊಳ್ಳುವ ಸಲ್ಮಾನ್, ಸಂಗೀತಾ ಮದುವೆ ಆಗ್ತಾರೆ ಅಂತ ಸೋಮಿ ಭಾವಿಸಿದ್ರು. ಆದ್ರೆ ಆಗಿದ್ದು ಉಲ್ಟಾ. ಸಂಗೀತಾ ಹಾಗೂ ಸಲ್ಮಾನ್ ಬ್ರೇಕ್ ಅಪ್ ಆಗಿತ್ತು.

ವರ್ಷಗಳ ನಂತರ, ‘ತಮ್ಮ ಮದುವೆಯನ್ನು ಮುರಿದಿದ್ದಕ್ಕಾಗಿ’ ಸಂಗೀತಾಗೆ ಕ್ಷಮೆಯಾಚಿಸಿದೆ ಎಂದು ಸೋಮಿ ಹೇಳಿದ್ದಾರೆ. ನನ್ನ ಹೃದಯಂತರಾಳದಿಂದ ಕ್ಷಮೆಯಾಚಿಸುತ್ತಿದ್ದೇನೆ ಎಂದು ನಾನು ಆಕೆಗೆ ಹೇಳಿದ್ದೆ. ಆಗ ನಾನು ಚಿಕ್ಕವನಾಗಿದ್ದೆ ಮತ್ತು ನಾನು ಏನು ಮಾಡುತ್ತಿದ್ದೇನೆ ಎಂದು ನನಗೆ ತಿಳಿದಿರಲಿಲ್ಲ ಎಂದು ತಿಳಿಸಿದೆ. ಅದಕ್ಕೆ ಆಕೆ, ನನಗೆ ಏನು ಬೇಸರ ಇಲ್ಲ. ತಾನು ಕ್ರಿಕೆಟಿಗ ಅಜರುದ್ದೀನ್‌ ಅವರನ್ನು ಮದುವೆಯಾಗಿ ಸಂತೋಷವಾಗಿದ್ಧೇನೆ ಎಂದು ಹೇಳಿದ್ದಳು. ಆದರೆ ಅದರ ನಂತರ ಕೆಲವೇ ದಿನಗಳಲ್ಲಿ ಆತನಿಂದಲೂ ವಿಚ್ಛೇದನಾ ಪಡೆದಳು. ನಾನು ಮಾಡಿದ್ದು ತಪ್ಪು. ಸಲ್ಮಾನ್‌-ಸಂಗೀತಾ ಮದುವೆಯನ್ನು ಮುರಿದು ತಪ್ಪು ಮಾಡಿದೆ. ಮತ್ತೊಮ್ಮೆ ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.

ಅದೇ ಸಂದರ್ಶನದಲ್ಲಿ, ಹಮ್ ದಿಲ್ ದೇ ಚುಕೆ ಸನಮ್ ಚಿತ್ರದಲ್ಲಿ ಸಲ್ಮಾನ್ ಖಾನ್ ಐಶ್ವರ್ಯಾ ರೈ ಅವರೊಂದಿಗೆ ರಿಲೇಶನ್‌ಶಿಪ್‌ನಲ್ಲಿದ್ದಾರೆಂದು ತಿಳಿದಾಗ ನಾನು ಜಾಗ ಖಾಲಿ ಮಾಡಬೇಕೆಂಬುದು ಅರ್ಥವಾಯಿತು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Salman-Aishwarya: ಸಲ್ಲು-ಐಶ್ವರ್ಯ ಪ್ರೇಮ್‌ ಕಹಾನಿ ಶುರುವಾಗಿದ್ದು ಹೇಗೆ ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್‌ ಸ್ಟೋರಿ