Thursday, 31st October 2024

Salman Khan: ʻಸಲ್ಮಾನ್‌ ಖಾನ್‌ಗಿಂತ ಲಾರೆನ್ಸ್‌ ಬಿಷ್ಣೋಯ್‌ ಬೆಟರ್‌ʼ- ಮಾಜಿ ಪ್ರೇಯಸಿ ಬಿಚ್ಚಿಟ್ಳು ಭಾಯ್‌ಜಾನ್‌ ಕುರಿತ ಶಾಕಿಂಗ್‌ ಸಂಗತಿ

SALMAN KHAN

ಮುಂಬೈ: ದೇಶದಲ್ಲಿ ಇತ್ತೀಚಿನ ಕೆಲವು ದಿನಗಳಿಂದ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌(Lawrence Bishnoi) ಗ್ಯಾಂಗ್‌ನದ್ದೇ ಸುದ್ದಿ. ನಟ ಸಲ್ಮಾನ್‌ ಖಾನ್‌(Salman Khan) ಅವರನ್ನು ತನ್ನ ಹಿಟ್‌ಲಿಸ್ಟ್‌ನಲ್ಲಿಟ್ಟಿರುವ ಲಾರೆನ್ಸ್‌ ಬಿಷ್ಣೋಯ್‌ನನ್ನು ಕೆಲವರುವ ಸಾಮಾಜಿಕ ಜಾಲತಾಣದಲ್ಲಿ ಹಿರೋ ಎಂಬಂತೆ ಬಿಂಬಿಸುತ್ತಿದ್ದಾರೆ. ಇದೀಗ ಇದೇ ವಿಚಾರವಾಗಿ ಸಲ್ಮಾನ್‌ ಖಾನ್‌ ಮಾಜಿ ಪ್ರೇಯಸಿ ಸೋಮಿ ಅಲಿ(Somy Ali)ಯೂ ರಿಯಾಕ್ಟ್‌ ಮಾಡಿದ್ದಾರೆ. ಸಲ್ಮಾನ್‌ ಖಾನ್‌ಗಿಂತ ಲಾರೆನ್ಸ್‌ ಬಿಷ್ಣೋಯ್‌ ಉತ್ತರಮ ಅಂತ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಸೋಮಿ ಅಲಿ ತಮ್ಮ ಮತ್ತು ಸಲ್ಮಾನ್‌ ಖಾನ್‌ ನಡುವೆ ಇದ್ದ ರಿಲೇಶನ್‌ಶಿಪ್‌ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಅವರು ಸಂಗೀತಾ ಬಿಜಲಾನಿ, ಐಶ್ವರ್ಯ ರೈ ಸೇರಿದಂತೆ ಸಲ್ಮಾನ್‌ ಖಾನ್‌ರ ಮಾಜಿ ಗೆಳತಿರ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಸಲ್ಮಾನ್‌ ಖಾನ್‌ ತಾನು ರಿಲೇಶನ್‌ಶಿಪ್‌ನಲ್ಲಿದ್ದ ಎಲ್ಲಾ ಗೆಳತಿರನ್ನೂ ಬಹಳ ಕೆಟ್ಟದಾಗಿ ನಡೆಸಿಕೊಂಡಿದ್ದ. ನನ್ನನ್ನೂ ಬಹಳ ಕೆಟ್ಟದಾಗಿ ನಡೆಸಿಕೊಂಡಿದ್ದ. ಅಲ್ಲದೇ ಬಹಳ ಹಿಂಸೆ ನೀಡಿದ್ದ. ಆತ ನಡೆ ನುಡಿ ಉತ್ತಮವಾಗಿದ್ದರೆ ಸಂಗೀತಾ, ಕತ್ರಿನಾ, ಐಶ್ವರ್ಯ ಜತೆಗೆ ಏಕೆ ಸಂಬಂಧ ಮುರಿದು ಬೀಳುತ್ತಿತ್ತು ಎಂದು ಪ್ರಶ್ನಿಸಿದ್ದಾರೆ.

ಸಲ್ಮಾನ್‌ ಖಾನ್‌ ತನ್ನ ಇತರ ಗೆಳತಿಯರಿಗಿಂತಲೂ ಹೆಚ್ಚಾಗಿ ನನ್ನನ್ನು ಮತ್ತು ಐಶ್ವರ್ಯ ರೈ ಅವರನ್ನು ಬಹಳ ಕೆಟ್ಟದಾಗಿ ನಡೆಸಿಕೊಂಡಿದ್ದ. ಐಶ್ವರ್ಯಾ ಅವರನ್ನು ತುಂಬಾ ಕೆಟ್ಟದಾಗಿ ನಿಂದಿಸಿದ್ದಾರೆ. ಆತ ಒಮ್ಮೆ ಐಶ್ವರ್ಯಾ ಅವರ ಭುಜವನ್ನೂ ಮುರಿದಿದ್ದ. ಆದರೆ ಅವನು ಕತ್ರಿನಾಗೆ ಏನು ಮಾಡಿದನೆಂಬ ಬಗ್ಗೆ ತಿಳಿದಿಲ್ಲ ಎಂದಿದ್ದಾರೆ. ಇನ್ನು ಇದೇ ವೇಳೆ ಸಲ್ಮಾನ್ ಅವರನ್ನು ಲಾರೆನ್ಸ್ ಬಿಷ್ಣೋಯ್‌ಗೆ ಹೋಲಿಸಿದ್ದು,”ಸಲ್ಮಾನ್ ನನಗೆ ಮಾಡಿದ್ದನ್ನು ಪರಿಗಣಿಸಿದರೆ, ಆತನಿಗಿಂತ ಲಾರೆನ್ಸ್‌ ಬಿಷ್ಣೋಯ್ ಉತ್ತಮ ಎಂದು ನಾನು ಹೇಳಬಲ್ಲೆ” ಎಂದು ಹೇಳಿದ್ದಾರೆ.

ಒಮ್ಮೆ ಸಲ್ಮಾನ್ ತನ್ನನ್ನು ಹೇಗೆ ಹೊಡೆಯುತ್ತಿದ್ದನೆಂದು ಸೋಮಿ ನೆನಪಿಸಿಕೊಂಡರು. ಸಲ್ಮಾನ್‌ ಖಾನ್‌ ನನ್ನನ್ನು ಒಮ್ಮೆ ಮನಸ್ಸೋ ಇಚ್ಛೆ ಥಳಿಸಿದ್ದ. ಆಗ ಮನೆಯ ಸಹಾಯಕನು ಓಡಿ ಬಂದು ಹೊಡೆಯಬೇಡಿ ಎಂದು ಬೇಡಿಕೊಂಡಿದ್ದಳು. ಒಮ್ಮೆ ನಟಿ ಟಬು ನನ್ನ ಸ್ಥಿತಿಯನ್ನು ನೋಡಿ ಅತ್ತಿದ್ದಾರೆ. ನಾನು ತೀವ್ರವಾದ ಬೆನ್ನುನೋವಿನಿಂದ ಬಳಲುತ್ತಿದೆ ಮತ್ತು ನಾನು ದೀರ್ಘಕಾಲ ಹಾಸಿಗೆ ಹಿಡಿದಿದ್ದೆ. ಆಗಲೂ ಸಲ್ಮಾನ್ ನನ್ನನ್ನು ನೋಡಲು ಬರಲಿಲ್ಲ. ಸಲ್ಮಾನ್‌ನೊಂದಿಗಿನ ನನಗೆ ಬದುಕಲು ಎಷ್ಟು ಕಷ್ಟವಾಯಿತು ಎಂಬುದು ತನ್ನ ತಾಯಿ ಮತ್ತು ಆಪ್ತ ಸ್ನೇಹಿತರನ್ನು ಹೊರತುಪಡಿಸಿ ಯಾರಿಗೂ ತಿಳಿದಿಲ್ಲ ಎಂದು ಸೋಮಿ ಬಹಿರಂಗಪಡಿಸಿದ್ದಾರೆ. ಸಲ್ಮಾನ್ ಜೊತೆಗಿನ ತನ್ನ ಹಿಂದಿನ ಸಂಬಂಧದ ಬಗ್ಗೆ ಪುಸ್ತಕವನ್ನು ಬರೆಯುತ್ತಿರುವುದಾಗಿಯೂ, ಅದರಲ್ಲಿ ಎಲ್ಲವನ್ನೂ ವಿವರಿಸುತ್ತಿರುವುದಾಗಿಯೂ ತಿಳಿಸಿದ್ದಾಳೆ.

ಈ ಸುದ್ದಿಯನ್ನೂ ಓದಿ: Lawrence Bishnoi : ಸಲ್ಮಾನ್‌ ಖಾನ್‌ ಮುಟ್ಟಿದರೆ ತಲೆ ಹಾರಿಸುತ್ತೇನೆ; ವಿಡಿಯೊ ಮೂಲಕ ಗ್ಯಾಂಗ್‌ಸ್ಟರ್‌ ಬಿಷ್ಣೋಯ್‌ಗೇ ಬೆದರಿಕೆ!