ನಟ ಸಲ್ಮಾನ್ ಖಾನ್ (Salman Khan) ಅವರಿಗೆ ಇಂದು (ಡಿ.27) ಜನ್ಮದಿನದ ಸಂಭ್ರಮ. ವಿಶ್ವಾದ್ಯಂತ ಇರುವ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಬರ್ತ್ಡೇ ವಿಶ್ ಮಾಡುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಲಾಗುತ್ತಿದೆ. ಸಲ್ಮಾನ್ ಖಾನ್ ಅವರ ಆಪ್ತ ಬಳಗದಲ್ಲೂ ಆಚರಣೆ ಜೋರಾಗಿದೆ. ಸಲ್ಲು ಹುಟ್ಟುಹಬ್ಬದ (Salman Khan Birthday) ಪ್ರಯುಕ್ತ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಳೆ ಸುರಿಸಲಾಗುತ್ತಿದೆ.
ಈಗ ಸಲ್ಮಾನ್ ಖಾನ್ ಅವರಿಗೆ 58 ವರ್ಷ ವಯಸ್ಸು. ಆದರೂ ಅವರ ಎನರ್ಜಿ ಕಮ್ಮಿ ಆಗಿಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆಗಾಗ ಅವರ ಮದುವೆ (Salman Khan Marriage) ಬಗ್ಗೆ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ. ಆದರೆ ಸಲ್ಲು ಯಾಕೋ ಶಾದಿ ಕುರಿತು ತಲೆ ಕೆಡಿಸಿಕೊಂಡಿಲ್ಲ. ಆದರೂ ಕೂಡ ಅವರ ಡೇಟಿಂಗ್ ಇತಿಹಾಸ ದೊಡ್ಡದಿದೆ.
ಸಲ್ಮಾನ್ ಖಾನ್-ಸಂಗೀತಾ ಬಿಜಲಾನಿ:
ಸಲ್ಮಾನ್ ಖಾನ್ ಅವರ ಜೀವನದಲ್ಲಿ ಹಲವು ಹುಡುಗಿಯರು ಬಂದು ಹೋಗಿದ್ದಾರೆ. ಆದರೆ ಯಾರ ಜೊತೆಗೂ ಕಂಕಣ ಭಾಗ್ಯ ಕೂಡಿಬರಲಿಲ್ಲ. 80ರ ದಶಕದಲ್ಲಿ ಸಂಗೀತಾ ಬಿಜಲಾನಿ ಅವರನ್ನು ಸಲ್ಲು ಪ್ರೀತಿಸುತ್ತಿದ್ದರು. ಸುಮಾರು 10 ವರ್ಷಗಳ ಕಾಲ ಅವರು ಡೇಟಿಂಗ್ ಮಾಡುತ್ತಿದ್ದರು. ಇನ್ನೇನು ಮದುವೆ ಆಗಬೇಕು ಎಂಬಷ್ಟರಲ್ಲಿ ಅವರ ಸಂಬಂಧ ಮುರಿದು ಬಿತ್ತು.
ಸೋಮಿ ಅಲಿ ಬಳಿಕ ಐಶ್ವರ್ಯಾ ರೈ ಎಂಟ್ರಿ:
ನಟಿ ಸೋಮಿ ಅಲಿ ಜೊತೆ ಸಲ್ಮಾನ್ ಖಾನ್ ಪ್ರೀತಿಯಲ್ಲಿ ಮುಳುಗಿದ್ದರು. 8 ವರ್ಷ ಜೊತೆಗಿದ್ದ ಈ ಜೋಡಿ ನಂತರ ಬ್ರೇಕಪ್ ಮಾಡಿಕೊಂಡಿತು. ಆ ಬಳಿಕ ಸಲ್ಲು ಬದುಕಿನಲ್ಲಿ ಐಶ್ವರ್ಯಾ ರೈ ಎಂಟ್ರಿ ನೀಡಿದರು. 1999ರಲ್ಲಿ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ನಡುವೆ ಪ್ರೀತಿ ಚಿಗುರಿತು. ಅವರಿಬ್ಬರ ಲವ್ ಸ್ಟೋರಿ ಬಗ್ಗೆ ಇಡೀ ಬಾಲಿವುಡ್ ಗಲ್ಲಿಯಲ್ಲಿ ಸುದ್ದಿ ಹರಡಿತ್ತು. ಆದರೆ ಆ ಪ್ರೀತಿ ಕೂಡ ಬ್ರೇಕಪ್ನಲ್ಲಿ ಅಂತ್ಯವಾಯ್ತು. ಅದಕ್ಕೆ ಸಲ್ಮಾನ್ ಖಾನ್ ಅವರ ಕೋಪವೇ ಕಾರಣ ಎಂಬ ಮಾತಿದೆ.
ಯೂಲಿಯಾ ವಂಟೂರ್ ಜತೆ ಸಲ್ಲು ಓಡಾಟ:
ರೊಮೇನಿಯನ್ ಚೆಲುವೆ ಯೂಲಿಯಾ ವಂಟೂರ್ ಅವರು ಕೂಡ ಸಲ್ಮಾನ್ ಖಾನ್ ಅವರ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಅನೇಕ ಬಾರಿ ಅವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಎಂದಿಗೂ ಕೂಡ ತಮ್ಮ ಪ್ರೀತಿಯ ಬಗ್ಗೆ ಈ ಜೋಡಿ ಬಹಿರಂಗವಾಗಿ ಹೇಳಿಕೊಂಡಿಲ್ಲ. ಅಲ್ಲದೇ
‘ಯೂಲಿಯಾ ವಂಟೂರ್ ಬರ್ತ್ಡೇ ಸೆಲೆಬ್ರೇಷನ್ ಮಾಡಲು ಒಳ್ಳೆಯ ಗೆಟ್ ಟುಗೇದರ್ ಆಯೋಜಿಸಲಾಗಿತ್ತು’ ಎಂದು ಮಿಕಾ ಸಿಂಗ್ ಬರೆದುಕೊಂಡಿದ್ದರು. ಅಲ್ಲದೆ ನಟಿ, ಗಾಯಕಿ ಯೂಲಿಯಾಗೆ ಅವರು ಬರ್ತ್ಡೇ ವಿಶ್ ತಿಳಿಸಿದ್ದರು. ಹಾಗಾಗಿ ಅವರ ಈ ಸಂಬಂಧಕ್ಕೆ ಒಂದು ಸ್ಪಷ್ಟ ಹೆಸರು ಈವರೆಗೂ ಸಿಕ್ಕಿಲ್ಲ.
ಸಲ್ಮಾನ್ ಖಾನ್-ಕತ್ರಿನಾ ಕೈಫ್ ಲವ್ ಸ್ಟೋರಿ:
ನಟಿ ಕತ್ರಿನಾ ಕೈಫ್ ಕೂಡ ಸಲ್ಮಾನ್ ಖಾನ್ ಅವರನ್ನು ಪ್ರೀತಿಸುತ್ತಿದ್ದರು ಎಂಬ ಮಾತಿದೆ. ಕತ್ರಿನಾ ವೃತ್ತಿಬದುಕಿಗೆ ಸಲ್ಲು ಬೆಂಬಲವಾಗಿ ನಿಂತಿದ್ದರು. ನಂತರ ರಣಬೀರ್ ಕಪೂರ್ ಕಡೆಗೆ ಕತ್ರಿನಾ ಮನಸ್ಸು ವಾಲಿತು. ಈಗ ಅವರು ವಿಕ್ಕಿ ಕೌಶಲ್ ಜೊತೆ ಮದುವೆಯಾಗಿ ಖುಷಿಯಾಗಿದ್ದಾರೆ. ಸಲ್ಲು ಮಾತ್ರ ಒಂಟಿಯಾಗಿ ಉಳಿದುಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: BBK 11: ನೀನ್ ಏನುಕ್ಕಮ್ಮಾ ಇದಿಯಾ ಬಿಗ್ ಬಾಸ್ನಲ್ಲಿ: ಚೈತ್ರಾ ತಲೆಗೆ ಬಾಟಲಿಯಿಂದ ಹೊಡೆದ ರಜತ್
ಸಲ್ಲು ಮದುವೆ ಯಾವಾಗ ಎಂಬುದು ಒಂದು ಯಕ್ಷ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ. ಈ ಬಗ್ಗೆ ಕೇಳಿದಾಗಲೆಲ್ಲ ಸಲ್ಮಾನ್ ಖಾನ್ ಅವರು ಜೋರಾಗಿ ನಕ್ಕು ಸುಮ್ಮನಾಗುತ್ತಾರೆ. ಸದ್ಯ ಒಂಟಿಯಾಗಿಯೇ ಹ್ಯಾಪಿ ಆಗಿರುವುದಾಗಿ ಅವರು ಹೇಳುತ್ತಾ ಬಂದಿದ್ದಾರೆ.