ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಸೀತಾ ರಾಮ ಧಾರವಾಹಿ (Seetha Rama Srial) ಅದ್ಭುತವಾಗಿ ಮೂಡಿ ಬರುತ್ತಿದೆ. ಇದೇ ಸಮಯಕ್ಕೆ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರ ಆಗುತ್ತಿದ್ದರೂ ಸೀತಾ ರಾಮ ಸೀರಿಯಲ್ಗೆ ಯಾವುದೇ ಹೊಡೆತ ಬಿದ್ದಿಲ್ಲ. ಜನರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿರುವ ಸೀತಾ ರಾಮ ಧಾರಾವಾಹಿಯ ಮುಂದಿನ ಏಪಿಸೋಡ್‌ಗಳು ಹೇಗಿರಬಹುದು ಎಂಬ ಕುತೂಹಲಕ್ಕೆ ಪ್ರೋಮೋಗಳ ಮೂಲಕ ಉತ್ತರ ನೀಡುತ್ತಿದೆ.
ಸದ್ಯ ಸೀತಾ ರಾಮದಲ್ಲಿ ಸಿಹಿಯ ಅಂತ್ಯ ಮಾಡಲಾಗಿದೆ. ಸಿಹಿ ಈಗ ಆತ್ಮವಾಗಿ ಮಾತ್ರ ಇದ್ದಾಳೆ. ಅವಳ ಅವಳಿ ಸಹೋದರಿ ಸುಬ್ಬಿಯ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. ಸಿಹಿಯ ಆತ್ಮ ಸುಬ್ಬಿಗೆ ಮಾತ್ರ ಕಾಣಿಸುತ್ತದೆ. ಇದರ ನಡುವೆ ಕೋಮಾಕ್ಕೆ ಹೋಗಿದ್ದ ಸೀತಾಳಿಗೆ ಎಚ್ಚರವಾಗಿದೆ. ಸಿಹಿಯ ಆತ್ಮ ಆಸ್ಪತ್ರೆಗೆ ಬಂದು ಸೀತಾಳನ್ನು ಎಬ್ಬಿಸುತ್ತಿದೆ. ಮಗಳ ದನಿ ಕೇಳಿ ಸೀತಾಳಿಗೆ ಎಚ್ಚರ ಆಗುತ್ತಿದೆ.
ಅತ್ತ ಮಗಳ ಸಾವಿನ ನೋವಿನಿಂದ ಹೊರಕ್ಕೆ ಬರಲಾಗದ ಸ್ಥಿತಿಯಲ್ಲಿ ರಾಮ ಇದ್ದಾನೆ. ಕೋಮಾದಿಂದ ಹೊರಬಂದಿರುವ ಸೀತಾ ಈಗ ಡಿಸ್ಚಾರ್ಜ್ ಆಗಲು ತಯಾರಾಗಿದ್ದಾಳೆ. ಆದರೆ, ಸಿಹಿ ದೂರವಾಗಿರುವ ವಿಚಾರ ಸೀತಾಗೆ ಇನ್ನೂ ಯಾರು ಹೇಳಿಲ್ಲ. ಬೆಡ್ ಮೇಲೆ ಮಲಗಿರುವ ಸೀತಾ ಜೊತೆ ರಾಮ ಮಾತನಾಡುತ್ತಿರುವಾಗ ಅಲ್ಲಿಗೆ ಅಶೋಕ್ ಬರುತ್ತಾನೆ. ಸೀತಾ ಎದ್ದಮೇಲೆ ಮನೆಗೆ ಕರ್ಕೊಂಡು ಹೋಗಬಹುದು ಎಂತ ಹೇಳಿದ್ರಲ್ಲ, ಸಿಹಿ ಬೇರೆ ಸೀತಮ್ಮನ ವೆಲ್ಕಂ ಮಾಡಲು ಕಾಯುತ್ತಿದ್ದಾಳೆ ಎಂದು ಹೇಳುತ್ತಾನೆ.
ಇದನ್ನು ಕೇಳಿ ಖುಷಿಯಾದ ಸೀತಾ, ಸಿಹಿ ಮನೆಯಲ್ಲಿದ್ದಾಳಾ? ಎಂದು ಕೇಳಿದ್ದಾಳೆ. ಅತ್ತ ಭಾರ್ಗವಿ ಮತ್ತೊಂದು ಸಂಚು ರೂಪಿಸಿದಂತಿದೆ. ತಾನು ಮಾಡಿದ ಪ್ಲಾನ್ಗೆ ಸಿಹಿ ಬಲಿಯಾಗಿದ್ದಾಳೆ ಎಂಬುದನ್ನು ಅರಿತು ಇದೀಗ ಸೀತಾಳನ್ನ ಕೊಲ್ಲೋಕೆ ಮತ್ತೊಂದು ಪಿತೂರಿ ಮಾಡುತ್ತಿದ್ದಾಳೆ. ಸಿಹಿಯ ಫೋಟೋ ಎದುರು ಕುಳುತುಕೊಂಡು ಭಾರ್ಗವಿ, ನಿನ್ನ ಸೀತಮ್ಮ ಜೀವಕ್ಕೋಸ್ಕರ ಹೋರಾಡುತ್ತಿದ್ದಾಳಂತೆ. ನೀನು ಹೋಗಿರುವ (ಸಾವನ್ನಪ್ಪಿರುವ) ವಿಚಾರ ಅವರಿಗೆ ಗೊತ್ತಾದ್ರೆ ಅವಳೂ ನಿನ್ನ ಹತ್ರ ಬರ್ತಾಳಂತೆ ಎಂದು ಹೇಳುತ್ತಾಳೆ.
BBK 11: ನಾಮಿನೇಷನ್ ಪ್ರಕ್ರಿಯೆ ವೇಳೆ ಕೈ-ಕೈ ಮಿಲಾಯಿಸಿದ ರಜತ್-ಧನರಾಜ್