Saturday, 21st December 2024

Seetha Rama Serial: ಅಶೋಕನ ಎದುರು ಬಯಲಾಯ್ತು ಭಾರ್ಗವಿ ಆಟ: ರಾಮ್​ಗೆ ಗೊತ್ತಾಗುತ್ತ ಎಲ್ಲಾ ಸತ್ಯ?

Seetharama serial

ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಸೀತಾ ರಾಮ ಧಾರಾವಾಹಿ (Seetha Rama Serial) ಅದ್ಭುತವಾಗಿ ಮೂಡಿ ಬರುತ್ತಿದೆ. ಇದೇ ಸಮಯಕ್ಕೆ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರ ಆಗುತ್ತಿದ್ದರೂ ಸೀತಾ ರಾಮ ಸೀರಿಯಲ್​ಗೆ ಯಾವುದೇ ಹೊಡೆತ ಬಿದ್ದಿಲ್ಲ. ಜನರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿರುವ ಸೀತಾ ರಾಮ ಧಾರಾವಾಹಿಯ ಮುಂದಿನ ಏಪಿಸೋಡ್‌ಗಳು ಹೇಗಿರಬಹುದು ಎಂಬ ಕುತೂಹಲಕ್ಕೆ ಪ್ರೋಮೋಗಳ ಮೂಲಕ ಉತ್ತರ ನೀಡುತ್ತಿದೆ.

ಈಗ ಸೀತಾ ರಾಮ ಧಾರಾವಾಹಿಯಲ್ಲಿ ಭಾರ್ಗವಿಯ ಪಿತೂರಿ ಜಗಜ್ಜಾಹೀರಾಗುವ ಎಲ್ಲ ಲಕ್ಷಣ ಕಾಣುತ್ತಿದೆ. ರಾಮ್ ಸ್ನೇಹತ ಅಶೋಕನ ಮುಂದೆ ಮಾತನಾಡುವ ಬರದಲ್ಲಿ ಬಹುದೊಡ್ಡ ಸತ್ಯ ಹೇಳಿಬಿಟ್ಟಿದ್ದಾಳೆ ಭಾರ್ಗವಿ. ಸದ್ಯ ಸದ್ಯ ಸೀತಾ ರಾಮದಲ್ಲಿ ಸಿಹಿಯ ಅಂತ್ಯ ಮಾಡಲಾಗಿದೆ. ಸಿಹಿ ಈಗ ಆತ್ಮವಾಗಿ ಮಾತ್ರ ಇದ್ದಾಳೆ. ತಾನು ಮಾಡಿದ ಪ್ಲಾನ್​ಗೆ ಸಿಹಿ ಬಲಿಯಾಗಿದ್ದಾಳೆ ಎಂಬುದನ್ನು ಅರಿತು ಇದೀಗ ಸೀತಾಳನ್ನ ಕೊಲ್ಲೋಕೆ ಭಾರ್ಗವಿ ಮತ್ತೊಂದು ಪಿತೂರಿ ಮಾಡುತ್ತಿದ್ದಾಳೆ.

ಇದರ ನಡುವೆ ಸೀತಾಳ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಕೋಮಾದಿಂದ ಹೊರಬಂದಿರುವ ಸೀತಾ ತನ್ನ ಬಳಿ ಇರುವ ಗೊಂಬೆಯನ್ನೇ ಸಿಹಿ ಅಂದುಕೊಂಡು ದಿನ ಕಳೆಯುತ್ತಿದ್ದಾಳೆ. ಹೀಗಿರುವಾಗ ಸೀತಾಳನ್ನು ಮನೆಯಿಂದ ಆಚೆ ಹಾಕಿ, ಹುಚ್ಚಾಸ್ಪತ್ರೆಗೆ ಸೇರಿಸಲು ಭಾರ್ಗವಿ ಪ್ಲ್ಯಾನ್ ಮಾಡುತ್ತಿದ್ದಾಳೆ. ಆದರೆ, ಇದರ ಹಿಂದಿನ ರಹಸ್ಯ ಅಶೋಕನಿಗೆ ತಿಳಿದಂತಿದೆ.

ಭಾರ್ಗವಿ ಬಳಿ ಬಂದು ಅಶೋಕ, ರಾಮನಿಂದ ಸೀತಾಳನ್ನು ದೂರ ಮಾಡಬೇಕು ಅಂದುಕೊಂಡಿದ್ದೀರಾ?, ಸಿಹಿ ಇಲ್ಲ ಅನ್ನೋ ವಿಚಾರ ಸೀತಾಳಿಗೆ ಗೊತ್ತಾಗ್ಬಾರ್ದು ಎಂದು ನಾವು ಟ್ರೈ ಮಾಡ್ತಾ ಇದ್ರೆ ನೀವು ಗೊತ್ತು ಮಾಡಬೇಕು ಅಂತ ಟ್ರೈ ಮಾಡ್ತಾ ಇದ್ದೀರ. ಜೊತೆಗೆ ಸೂರಿ ತಲೇಲಿ ಸೀತಾಳಿಂದ ರಾಮ್ ಜೀವನ ಹಾಳಾಗ್ತಿದೆ ಅಂತ ಭಾವನೆ ಕ್ರಿಯೇಟ್ ಮಾಡ್ತಾ ಇದ್ದೀರ. ಯಾರಿಗೋಸ್ಕರ ಇದೆಲ್ಲ, ಇದರ ಹಿಂದೆ ಯಾವುದಾದರು ಒಂದು ಒಳ್ಳೆ ಉದ್ದೇಶ ಇದೆ ಅಂತ ನನಗೆ ಕಾಣಿಸ್ತಿಲ್ಲ ಎಂದು ಹೇಳಿದ್ದಾನೆ.

ಅಶೋಕನ ಮಾತಿಗೆ ಕೆರಳಿದ ಭಾರ್ಗವಿ, ಇದು ನನ್ನ ಮನೆ ವಿಚಾರ, ನಿನಗೆ ಸಂಬಂಧ ಪಟ್ಟಿದ್ದಲ್ಲ, ನೀನು ಇದರಿಂದ ದೂರವಿರು ಎಂದು ಹೇಳುತ್ತಾಳೆ. ಇದಕ್ಕೆ ತಿರುಗೇಟು ನೀಡಿದ ಅಶೋಕ್, ಈ ವಿಷಯ ನನಗೆ ಸಂಬಂಧವಿದೆ. ಇದು ನನ್ನ ಗೆಳೆಯನ ವಿಚಾರ. ನನ್ನ ಗೆಳೆಯನಿಗೆ ಏನಾದ್ರೂ ತೊಂದರೆ ಆದ್ರೆ ಅವನಿಗೂ ನಿಮ್ಗೂ ಅಲ್ಲ, ನನ್ಗೂ ನಿಮ್ಗೂ ಶುರುವಾಗುತ್ತೆ ಎಂದು ಹೇಳಿದ್ದಾನೆ.

ಇದಕ್ಕೆ ಭಾರ್ಗವಿ, ಏನೋ ಶುರುವಾಗುತ್ತೆ.. ಗಾದೆ ಕೇಳಿದ್ದೀಯಾ ಕೈಲಾಗದವನು ಮೈ ಎಲ್ಲ ಪರಚ್ಕೊಂಡಂತೆ, ಆ ತರ ಮೈ ಎಲ್ಲ ಪರಚ್ಕೋಬೇಕಾಗುಂತೆ ನನ್ ತಂಟೆಗೆ ಬರ್ಬೇಡ ಎಂದು ಹೇಳಿದ್ದಾಳೆ. ಇದರಿಂದ ಕೆರಳಿದ ಅಶೋಕ್, ರಾಮ್​ನ ಮಗ.. ಮಗ.. ಅಂತೀರಾ ಆ ಮಗನ ಮೇಲೆ ಯಾಕೆ ಅಷ್ಟೊಂದು ದ್ವೇಷ ಎಂದು ಕೇಳುತ್ತಾನೆ.

ಆಗ, ನನ್ ದಾರಿಗೆ ಅಡ್ಡ ಬರ್ತಾ ಇದ್ರೆ ನಿನ್ ಗೆಳೆಯನಿಗೂ ಸೇರಿ ಗುರಿ ಇಡ್ಬೇಕಾಗುತ್ತೆ ಎಂದು ಭಾರ್ಗವಿ ಬಾಯಿತಪ್ಪಿ ಹೇಳುತ್ತಾಳೆ. ಈ ಮಾತಿನ ಮರ್ಮವನ್ನು ಅರಿತ ಅಶೋಕ್, ಏನಂದ್ರಿ ನೀವು, ಗೆಳೆಯನಿಗೂ ಸೇರಿ ಗುರಿ ಇಡ್ಬೇಕಾಗುತ್ತೆ ಅಂತನಾ?. ಅಂದ್ರೆ ನೀವು ಈಗ್ಲೇ ಯಾರಿಗೋ ಗುರಿ ಇಟ್ಟೀದೀರಿ ಅಂತ ಆಯ್ತು. ಸಿಹಿಗೆ ಹೀಗೆ ಆಗೋದಕ್ಕೆ ಕಾರಣ ಯಾರು..? ಎಂದು ಅಶೋಕ ಪ್ರಶ್ನಿಸುತ್ತಾನೆ. ಸದ್ಯ ಈ ಪ್ರಶ್ನೆಗೆ ಭಾರ್ಗವಿ ಏನು ಉತ್ತರ ಕೊಡುತ್ತಾಳೆ ಎಂಬುದು ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

BBK 11: ಹ್ಯಾಟ್ರಿಕ್ ಕಳಪೆ: ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೊಸ ರೆಕಾರ್ಡ್