Thursday, 12th December 2024

ಹಿರಿಯ ನಟಿ ಲೀಲಾವತಿ ಕಾಲು ಜಾರಿ ಬಿದ್ದು ಸೊಂಟ, ಕಾಲಿಗೆ ಗಾಯ

ಬೆಂಗಳೂರು : ಸ್ಯಾಂಡಲ್ ವುಡ್ ಹಿರಿಯ ನಟಿ ಲೀಲಾವತಿಯವರು ಬಚ್ಚಲು ಮನೆಯಲ್ಲಿ ಕಾಲು ಜಾರಿ ಬಿದ್ದು, ಸೊಂಟ ಹಾಗೂ ಕಾಲಿಗೆ ಪೆಟ್ಟಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುವುದಾಗಿ ತಿಳಿದು ಬಂದಿದೆ.

ಬೆಂಗಳೂರಿನ ಉತ್ತರ ತಾಲೂಕಿನ ಸೋಲದೇವನಹಳ್ಳಿಯ ತಮ್ಮ ತೋಟದ ಮನೆಯ ಬಚ್ಚಲು ಮನೆಯಲ್ಲಿ ಹಿರಿಯ ನಟಿ ಕಾಲು ಜಾರಿ ಬಿದ್ದಿರುವುದು ತಿಳಿದು ಬಂದಿದೆ. ಈ ವಿಷಯವನ್ನು ಪುತ್ರ, ನಟ ವಿನೋದ್ ರಾಜ್ ಕುಮಾರ್ ತಿಳಿಸಿದ್ದು, ಮನೆಯಲ್ಲಿ ಕಾಲುಜಾರಿ ಬಿದ್ದು ತಾಯಿ ಲೀಲಾವತಿಗೆ ಪೆಟ್ಟಾಗಿದೆ.

ಕೂಡಲೇ ಅವರನ್ನು ವೈದ್ಯರ ಬಳಿ ಚಿಕಿತ್ಸೆಗಾಗಿ ಕರೆದೊಯ್ದು, ಚಿಕಿತ್ಸೆ ಕೊಡಿಸಿದ್ದೇನೆ. ವೈದ್ಯರು ಒಂದು ತಿಂಗಳು ವಿಶ್ರಾಂತಿಯನ್ನು ಅಮ್ಮನಿಗೆ ತೆಗೆದುಕೊಳ್ಳುವು ದಕ್ಕೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ. ಮನೆಯಲ್ಲಿ ಬಚ್ಚಲು ಮನೆಗೆ ಹೋದಾಗ ಕಾಲು ಜಾರಿ ಬಿದ್ದು ಈ ಘಟನೆ ನಡೆದಿದೆ.

ಕಾಲು ಜಾರಿ ಬಿದ್ದು ಎದ್ದೇಳೋದಕ್ಕೂ ಆಗದೇ ಒಂದು ಮುಕ್ಕಾಲು ಗಂಟೆ ಒದ್ದಾಡಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಚಿಕಿತ್ಸೆ ಕೊಡಿಸಿದ್ದೇನೆ. ಯಾವುದೇ ತೊಂದರೆ ಇಲ್ಲ ಎಂಬುದಾಗಿ ಹೇಳಿದರು.