Sunday, 15th December 2024

‘ಇಂಡಿಯನ್ ಆಫ್ ದಿ ಇಯರ್’ ಪ್ರಶಸ್ತಿ ಸ್ವೀಕರಿಸಿದ ಶಾರುಖ್‌ ಖಾನ್‌​

ವದೆಹಲಿ: ಬಾಲಿವುಡ್‌ನ ನಟ ಶಾರುಖ್‌ಖಾನ್‌​ ಗುರುವಾರ ‘ಇಂಡಿಯನ್ ಆಫ್ ದಿ ಇಯರ್’  ಪ್ರಶಸ್ತಿ ಸ್ವೀಕರಿಸಿದ್ದಾರೆ.

ನವದೆಹಲಿಯಲ್ಲಿನ ತಾಜ್‌ ಪ್ಯಾಲೇಸ್‌ ನಲ್ಲಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದಿದ್ದು, ಶಾರುಖ್‌ ಈ ಗೌರವವನ್ನು ಅತೀವ ಸಂತಸದಿಂದ ಸ್ವೀಕರಿಸಿದ್ದಾರೆ.

ಏಳು ಬೇರೆ ಬೇರೆ ಕ್ಷೇತ್ರದಲ್ಲಿ ಹೆಸರು ಮಾಡಿದವರಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ. ಮನರಂಜನೆ, ವ್ಯಾಪಾರ, ಕ್ರೀಡೆ, ಯೂತ್ ಐಕಾನ್, ರೈಸಿಂಗ್ ಸ್ಪೋರ್ಟ್ಸ್ ಸ್ಟಾರ್, ಸಾಮಾಜಿಕ ಬದಲಾವಣೆ ಮತ್ತು ಹವಾಮಾನ ವಾರಿಯರ್ಸ್ ನಲ್ಲಿ ಗಮನಾರ್ಹ ಕೊಡುಗೆ ನೀಡಿದವರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುವುದು.

ಈ ಪ್ರಶಸ್ತಿಯನ್ನು ಪತ್ನಿ ಗೌರಿ ಖಾನ್, ಮಗಳು ಸುಹಾನಾ ಖಾನ್ ಮತ್ತು ಪುತ್ರರಾದ ಆರ್ಯನ್ ಮತ್ತು ಅಬ್‌ರಾಮ್ ಖಾನ್‌ಗೆ ಅರ್ಪಿಸುತ್ತೇನೆ ಎಂದರು. ಚಲನಚಿತ್ರ ನಿರ್ಮಾಪಕ ಮಣಿರತ್ನಂ ಅವರು ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.