Sunday, 15th December 2024

ವೈಷ್ಣೋ ದೇವಿ ದೇಗುಲಕ್ಕೆ ಭೇಟಿ ನೀಡಿದ ಶಾರುಖ್ ಖಾನ್

ವದೆಹಲಿ: ಬಾಲಿವುಡ್‌ ನಟ ಶಾರುಖ್ ಖಾನ್ ತಮ್ಮ ಚಲನಚಿತ್ರ ಬಿಡುಗಡೆಯ ಮೊದಲು ವೈಷ್ಣೋದೇವಿ ಭೇಟಿ ಮಾಡುವ ಸಂಪ್ರದಾಯವನ್ನು ಮುಂದುವರೆಸಿದ್ದಾರೆ.

ಹಿಂದಿ ಚಿತ್ರ ಡುಂಕಿ ಬಿಡುಗಡೆಯ ಮೊದಲು ತೀರ್ಥಯಾತ್ರೆ ನಡೆಸಿ ಪ್ರಾರ್ಥನೆ ಸಲ್ಲಿಸಿದರು.

ಮಂಗಳವಾರ ಶಾರುಖ್ ತನ್ನ ಅಂಗರಕ್ಷಕರು ಮತ್ತು ವ್ಯವಸ್ಥಾಪಕರ ತಂಡದೊಂದಿಗೆ ತೀರ್ಥಯಾತ್ರೆ ಕೈಗೊಂಡು ಕಲ್ಲುಮಣ್ಣುಗಳ ಹಾದಿಯಲ್ಲಿ ನಡೆದು ಕೊಂಡು ಜಮ್ಮುವಿನ ಪವಿತ್ರ ದೇಗುಲಕ್ಕೆ ಭೇಟಿ ನೀಡಿದರು.

ಶಾರುಖ್‌ ಖಾನ್ ಕಪ್ಪು ಪಫರ್ ಜಾಕೆಟ್ ಅನ್ನು ಹೂಡಿಯೊಂದಿಗೆ ಧರಿಸಿದ್ದರು. ಅವರ ಮ್ಯಾನೇಜರ್ ಪೂಜಾ ದದ್ಲಾನಿ ಕೂಡ ಅವರೊಂದಿಗೆ ನಡೆದು ಕೊಂಡು ಹೋದರು. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಡುಂಕಿ ಚಿತ್ರದಲ್ಲಿ ವಿಕ್ಕಿ ಕೌಶಲ್, ತಾಪ್ಸಿ ಪನ್ನು ಮತ್ತು ಬೊಮನ್ ಇರಾನಿ ಕೂಡ ನಟಿಸಿದ್ದಾರೆ. ಡುಂಕಿ ಡಿ.21 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಡುಂಕಿ ಡಿ.21 ರಂದು ಬಿಡುಗಡೆಯಾಗಲಿದ್ದು, ಪ್ರಭಾಸ್ ಅವರ ಸಲಾರ್ ಜೊತೆ ಪೈಪೋಟಿ ನಡೆಸಲಿದೆ.

ಡುಂಕಿ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ಬೋಮನ್ ಇರಾನಿ, ತಾಪ್ಸಿ ಪನ್ನು, ವಿಕ್ಕಿ ಕೌಶಲ್, ವಿಕ್ರಮ್ ಕೊಚ್ಚರ್, ಅನಿಲ್ ಗ್ರೋವರ್ ಅವರು ವರ್ಣರಂಜಿತ ಪಾತ್ರಗಳನ್ನು ಮಾಡಿದ್ದಾರೆ. ಇದನ್ನು ರಾಜ್‌ಕುಮಾರ್ ಹಿರಾನಿ ಮತ್ತು ಗೌರಿ ಖಾನ್ ನಿರ್ಮಿಸಿದ್ದಾರೆ.