Thursday, 12th December 2024

ಶಾಕುಂತಲಂ – ಏಪ್ರಿಲ್ 14 ರಂದು ವಿಶ್ವದಾದ್ಯಂತ ಬಿಡುಗಡೆ

ಹೈದರಾಬಾದ್: ಯಶೋದಾ ಚಿತ್ರದ ಸೂಪರ್ ಹಿಟ್ ನಂತರ ಸಮಂತಾ ಸದ್ಯ ಶಾಕುಂತಲಂ ಎಂಬ ಪೌರಾಣಿಕ ಚಿತ್ರದಲ್ಲಿ ಮೂಲಕ ತೆರೆಗೆ ಬರಲಿದ್ದಾರೆ.

ಏಪ್ರಿಲ್ 14 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಚಿತ್ರತಂಡ ಪ್ರಚಾರ ಕಾರ್ಯಗಳನ್ನು ಚುರುಕುಗೊಳಿಸಿದೆ.

ಪ್ರಚಾರದ ಅಂಗವಾಗಿ ಈಗಾಗಲೇ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ವೇಳೆ ಸಮಂತಾ ಇತ್ತೀಚೆಗಷ್ಟೇ ಜಿಮ್​ನಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ಸಮಂತಾ ಸಿಕ್ಸ್ ಪ್ಯಾಕ್ ಕಾಣುತ್ತಿದೆ. ಫೋಟೋ ವೈರಲ್ ಆಗಿದ್ದು, ಆ ಫೋಟೋಗಳಿಗೆ ರಾಕುಲ್ ಪ್ರೀತ್ ಕಾಮೆಂಟ್ ಮಾಡಿದ್ದಾರೆ.

ನೆಟ್ಟಿಗರು ವಾವ್, ಸಮಂತಾ ಸಿಕ್ಸ್ ಪ್ಯಾಕ್ ಸೂಪರ್ ಎಂದು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಸಮಂತಾ ಸದ್ಯ ಸಿಟಾಡೆಲ್ ಎಂಬ ವೆಬ್ ಸೀರೀಸ್ ಮಾಡುತ್ತಿದ್ದಾರೆ. ಈ ಫಿಟ್ನೆಸ್ ಈ ವೆಬ್ ಸೀರಿಸ್​ಗೆ ಮಾತ್ರ ಅನಿಸುತ್ತೆ. ಈ ವೆಬ್ ಸೀರಿಸ್​ನಲ್ಲಿ ಕೆಲವು ಸಾಹಸ ದೃಶ್ಯಗಳಿವೆ. ಅದಕ್ಕಾಗೊಯೇ ಸಮಂತಾ ಫುಲ್ ವರ್ಕೌಟ್ ಮಾಡ್ತಿದ್ದಾರೆ.

ಸಮಂತಾ ಶಾಕುಂತಲಂ ಪ್ರಚಾರಕ್ಕಾಗಿ ಚಿತ್ರತಂಡ ಹಾಡುಗಳನ್ನು ರಿಲೀಸ್ ಮಾಡುತ್ತಿದೆ. ಈ ಹಾಡುಗಳನ್ನು ಮಣಿ ಶರ್ಮಾ ಸಂಯೋಜಿಸಿದ್ದಾರೆ. ಸಮಂತಾ ಮೊದಲ ಬಾರಿಗೆ ಪೌರಾಣಿಕ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪೌರಾಣಿಕ ನಾಟಕದಲ್ಲಿ ದೇವ್ ಮೋಹನ್ ರಾಜು ದುಷ್ಯಂತು ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಚಿತ್ರಕ್ಕೆ ಮಣಿ ಶರ್ಮಾ ಸಂಗೀತ ನೀಡಿದ್ದಾರೆ. ಶಾಕುಂತಲಂ ಚಿತ್ರದಲ್ಲಿ ಸಮಂತಾ ಮೊದಲ ಬಾರಿಗೆ ಪೌರಾಣಿಕ ಪಾತ್ರದಲ್ಲಿ ನಟಿಸಿದ್ದಾರೆ. ಈ ಪೌರಾಣಿಕ ನಾಟಕದಲ್ಲಿ ದೇವ್ ಮೋಹನ್ ರಾಜು ದುಷ್ಯಂತು ಪಾತ್ರವನ್ನು ನಿರ್ವಹಿಸಿದ್ದಾರೆ.