ಬೆಂಗಳೂರು: ಬ್ಯಾಂಕ್ ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, ಅತ್ಯಾಚಾರ ವೆಸಗಿ, ಹಣ ಕೂಡ ಪಡೆದು ವಂಚಿಸಿದ ಆರೋಪ ದಲ್ಲಿ ನಟ ಶೇಷಗಿರಿ ಬಸವರಾಜ್ ಅವರನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ.
ಯುವತಿಯೊಬ್ಬಳು ಕಳೆದ ತಿಂಗಳು ತಮಗೆ ನಟ ಶೇಷಗಿರಿ ಬಸವರಾಜ್ ಬ್ಯಾಂಕ್ ನಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂಬುದಾಗಿ ನಂಬಿಸಿದ್ದರು. ಇದಕ್ಕಾಗಿ ಹಣ ಕೂಡ ಪಡೆದಿ ದ್ದರು. ಅಲ್ಲದೇ ಅತ್ಯಾಚಾರ ಕೂಡ ಎಸಗಿದ್ದಾರೆ. ಹಲ್ಲೆ ಕೂಡ ನಡೆಸಿದ್ದಾರೆ ಎಂಬು ದಾಗಿ ಬೆಂಗಳೂರಿನ ಸುಬ್ರಹ್ಮಣ್ಯ ನಗರ ಠಾಣೆಗೆ ದೂರು ನೀಡಿದ್ದರು.
ಈ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ದೂರವಾಣಿ ಕರೆಗಳ ಮಾಹಿತಿ ಆಧಾರದ ಮೇಲೆ ಮೈಸೂರಿನಲ್ಲಿ ಬಂಧಿಸಿದ್ದಾರೆ.
ಶೇಷಗಿರಿ ಬಸವರಾಜ್ ಅವರು, ಈ ಹಿಂದೆ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಕನ್ನಡದ ಡಾರ್ಕ್, ಸಸ್ಪೆನ್ಸ್, ಕಿಲಾಡಿಗಳು ಹಾಗೂ ಆಶಿಕಿ-3 ಚಿತ್ರಗಳಲ್ಲಿ ಖಳ ನಟ, ಪೋಷಕ ನಟನಾಗಿ ಕಾಣಿಸಿಕೊಂಡಿದ್ದರು.