ನವದೆಹಲಿ: ಬಾಲಿವುಡ್ ನಟ ರಾಹುಲ್ ಮೋದಿ (Rahul Mody) ಹಾಗೂ ನಟಿ ಶ್ರದ್ಧಾ ಕಪೂರ್ (Shraddha Kapoor) ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಕಳೆದ ಕೆಲವು ತಿಂಗಳಿಂದ ಹರಿದಾಡುತ್ತಲೇ ಇದೆ. ಇವರಿಬ್ಬರು ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರೂ ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿಲ್ಲ. ಇದೀಗ ನಟಿಯ ಫೋನ್ ವಾಲ್‌ಪೇಪರ್‌ನಲ್ಲಿ ಗೆಳೆಯ ರಾಹುಲ್ ಮೋದಿ ಫೋಟೋ ಕಾಣಿಸಿಕೊಂಡಿದ್ದು ಗಾಳಿ ಸುದ್ದಿಗೆ ರೆಕ್ಕ-ಪುಕ್ಕ ದೊರೆತಿದೆ. ಅಭಿಮಾನಿಗಳು ಶ್ರದ್ಧಾ ಕಪೂರ್ – ರಾಹುಲ್ ಮೋದಿ ರಿಲೇಶನ್‌ಶಿಪ್ ಖಚಿತ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.
ಮುಂಬೈನಲ್ಲಿ ಇತ್ತೀಚೆಗೆ ಶ್ರದ್ಧಾ ಕ್ಯಾಶುಯಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ನಟಿಯ ವಿಡಿಯೊ ರೆಕಾರ್ಡ್ ಮಾಡುವ ಸಂದರ್ಭದಲ್ಲಿ ಅವರ ಫೋನ್ ವಾಲ್ ಪೇಪರ್ ಸಹ ಕ್ಯಾಮೆರಾದಲ್ಲಿ ಸೆರೆಹಿಡಿಯಲ್ಪಟ್ಟಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಶ್ರದ್ಧಾ ಕಪೂರ್ ಅವರ ಫೋನ್ ವಾಲ್ ಪೇಪರ್‌ನಲ್ಲಿ ಕಂಡು ಆಕೆಯ ಗೆಳೆಯ ರಾಹುಲ್ ಮೋದಿ ಅವರ ಫೋಟೋ ಎಂದು ಅಭಿಮಾಮಿಗಳು ಕಾಮೆಂಟ್ ಮಾಡಿದ್ದಾರೆ.
ಇತ್ತೀಚಿಗೆ ಶ್ರದ್ಧಾ ಅವರು ರಿಲೇಷನ್‌ಶಿಪ್ ಬಗ್ಗೆ ಮಾತನಾಡಿದ್ದರು. ಸಂಗಾತಿಯೊಂದಿಗೆ ಸಮಯ ಕಳೆಯುವುದು, ಸಿನಿಮಾ ನೋಡುವುದು, ಡಿನ್ನರ್ ಹೋಗುವುದು ಅಥವಾ ಪ್ರವಾಸ ಹೋಗುವುದು ನನಗೆ ತುಂಬಾ ಇಷ್ಟ ಎಂದು ಶ್ರದ್ಧಾ ಹೇಳಿಕೊಂಡಿದ್ದರು. ಇದೀಗ ವಾಲ್ ಪೇಪರ್‌ನಲ್ಲಿ ಅವರ ಬಾಯ್ ಪ್ರೆಂಡ್ ಫೋಟೊ ನೋಡಿ ಶ್ರದ್ದಾ ಮದುವೆಯಾಗುವ ಹುಡುಗ ಇವರೇ ಎಂದು ಅಭಿಮಾನಿಗಳು ಚರ್ಚೆ ನಡೆಸಿದ್ದಾರೆ.
ರಾಹುಲ್ ಮೋದಿ ʼತೂ ಜೂಥಿ ಮೈನ್ ಮಕ್ಕರ್’ ಚಿತ್ರದಲ್ಲಿ ಕೆಲಸ ಮಾಡಿದ್ದು ಇದರಲ್ಲಿ ಶ್ರದ್ಧಾ ಕಪೂರ್ ನಟಿಸಿದ್ದಾರೆ. ಇವರಿಬ್ಬರ ಮೊದಲ ಭೇಟಿಯು ʼತೂ ಜೂಥಿ ಮೈನ್ ಮಕ್ಕರ್ʼ ಚಿತ್ರದ ಸೆಟ್‌ನಲ್ಲಿ ನಡೆದಿದ್ದು ನಂತರ ಇಬ್ಬರ ನಡುವೆ ಸ್ನೇಹ ಬೆಳೆದು ನಂತರ ಪ್ರೀತಿಗೆ ತಿರುಗಿತು ಎನ್ನಲಾಗಿದೆ. ಇವರಿಬ್ಬರ ಮದುವೆ ವದಂತಿ ಹಲವು ಭಾರೀ ಹಬ್ಬಿದರೂ ನಟಿ ಸಂಬಂಧ ಬಗ್ಗೆ ದೃಢಪಡಿಸಿರಲಿಲ್ಲ. ಸದ್ಯ ರಾಹುಲ್ ಮೋದಿಯ ಫೋಟೊವನ್ನು ಶ್ರದ್ಧಾ ಕಪೂರ್ ಮೊಬೈಲ್ ವಾಲ್ ಪೇಪರ್‌ನಲ್ಲಿ ಕಂಡು ಅಭಿಮಾನಿಗಳು ಈ ಜೋಡಿಯನ್ನು ಅಭಿನಂದಿಸುತ್ತಿದೆ.
ಇದನ್ನು ಓದಿ:Viral Video: ಕಂಠಪೂರ್ತಿ ಕುಡಿದು ಮಂಟಪದಲ್ಲೇ ವರನ ರಂಪಾಟ; ಮದುವೆ ಕ್ಯಾನ್ಸಲ್ ಮಾಡಿದ ವಧುವಿನ ತಾಯಿ: ವಿಡಿಯೊ ವೈರಲ್