ಹೈದರಾಬಾದ್: ತೆಲುಗು ಸಾಂಪ್ರದಾಯದ ಪ್ರಕಾರ ಎರಡು ದಿನಗಳ ಹಿಂದೆ ಹಸೆಮಣೆ ಏರಿದ್ದ ನಾಗ ಚೈತನ್ಯ- ಶೋಭಿತಾ ಧೂಳಿಪಾಲ ಜೋಡಿ(Sobhita & Naga Chaitanya) ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದಾರೆ. ನವದಂಪತಿ ಶ್ರೀಶೈಲಂ ಶ್ರೀ ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಈ ವೇಳೆ ನಾಗಾರ್ಜುನ ಕೂಡ ದಂಪತಿ ಜೊತೆಗಿದ್ದರು. ಈ ಮುದ್ದಾದ ಜೋಡಿಗಳ ವಿವಾಹದ ನಂತರದ ಫಸ್ಟ್ ಲುಕ್ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ನಾಗ ಚೈತನ್ಯ ಸಾಂಪ್ರದಾಯಿಕ ಬಣ್ಣದ ಶರ್ಟ್ ಮತ್ತು ಧೋತಿ ಉಟ್ಟಿದ್ದರೆ, ಮತ್ತು ಶೋಭಿತಾ ಹಳದಿ ಸೀರೆಯನ್ನು ಧರಿಸಿದ್ದರು. ಇಬ್ಬರೂ ನಗು ನಗುತ್ತಾ ಪಾಪರಾಜಿಗಳತ್ತ ಕೈ ಬೀಸುತ್ತಾ ಮಾತನಾಡಿದ್ದ ಸಂವಹನ ನಡೆಸುವುದನ್ನು ಕಾಣಬಹುದು. ಈ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನವದಂಪತಿಗಳಾದ ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರು ಇಂದು ಶ್ರೀಶೈಲ ಶ್ರೀ ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದಾರೆ ಎಂದು ಎಕ್ಸ್ ಪೋಸ್ಟ್ ಮಾಡಲಾಗಿದೆ.
Newlyweds #NagaChaithanya and #SobhitaDhulipalla visited the Srisailam Sri Bhramarambha Mallikharjuna Swami temple today to seek divine blessings. Wishing the couple a blissful journey ahead!#SoChay pic.twitter.com/mHkG1me7Yi
— Telugu Chitraalu (@TeluguChitraalu) December 6, 2024
ನಾಗ ಚೈತನ್ಯ ಮತ್ತು ಸೋಭಿತಾ ಧೂಳಿಪಾಲಾ ಅವರ ವಿವಾಹವು (Naga Chaitanya wedding) ಬುಧವಾರ (ಡಿಸೆಂಬರ್ 4) ಹೈದರಾಬಾದ್‌ನ ಅನಪೂರ್ಣ ಸ್ಟುಡಿಯೋದಲ್ಲಿ ನಡೆಯಿತು. ತೆಲುಗು ಸಾಂಪ್ರದಾಯದಂತೆ ಕುಟುಂಬ ಸದಸ್ಯರು ಮತ್ತು ಆತ್ಮೀಯ ಸ್ನೇಹಿತರ ವಿವಾಹ ಕಾರ್ಯಕ್ರಮ ನಡೆಯಿತು. ಮೆಗಾ ಸ್ಟಾರ್ ಚಿರಂಜೀವಿ, ಪವನ್ ಕಲ್ಯಾಣ್, ಅಲ್ಲು ಅರ್ಜುನ್, ಮಹೇಶ್ ಬಾಬು, ನಮ್ರತಾ ಶಿರೋಡ್ಕರ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಉಪಸ್ಥಿತರಿದ್ದರು.
My heart is overflowing with gratitude. 🙏
— Nagarjuna Akkineni (@iamnagarjuna) December 5, 2024
To the media, thank you for your understanding and for giving us the space to cherish this beautiful moment. Your thoughtful respect and kind wishes have added to our joy.
To our dear friends, family, and fans, your love and blessings… pic.twitter.com/1rntU4tDQP
ಈ ಸುದ್ದಿಯನ್ನೂ ಓದಿ: Viral News: ನಾಗ ಚೈತನ್ಯನ ಬಗ್ಗೆ ಮೌನ ಮುರಿದ ಸಮಂತಾ – ಮಾಜಿ ಪತಿ ಕೊಟ್ಟಿದ್ದ ಗಿಫ್ಟ್‌ಗಳ ಬಗ್ಗೆ ನಟಿ ಹೇಳಿದ್ದೇನು?