ಈ ವಾರದ ಬಿಗ್ ಬಾಸ್ ಕನ್ನಡ (Bigg Boss Kannada) ಸೀಸನ್ 11ರ ವೀಕೆಂಡ್ಗೆ ಎಲ್ಲರೂ ಕಾದು ಕುಳುತಿದ್ದರು. ಮೂರನೇ ವಾರ ಮನೆಯೊಳಗೆ ದೊಡ್ಡ ಹೈ-ಡ್ರಾಮವೇ ನಡೆದಿತ್ತು. ಶೋ ಶುರುವಾದಾಗಿನಿಂದ ಮನೆಯೊಳಗೆ ಬರೀ ಜಗಳವೇ ನಡೆಯುತ್ತಿದೆ. ಈ ವಾರ ಅದು ಅತಿರೇಕಕ್ಕೆ ಹೋಯಿತು. ಜಗದೀಶ್ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ವಾದ ನಡೆಯುತ್ತಿರುವಾಗ ರಂಜಿತ್ ಅವರನ್ನು ತಳ್ಳಿದರು. ಹೀಗಾಗಿ ವಾರದ ಮಧ್ಯೆಯೇ ಜಗದೀಶ್ ಹಾಗೂ ರಂಜಿತ್ ಅವರನ್ನು ಬಿಗ್ ಬಾಸ್ ಹೊರಹಾಕಿದ್ದರು.
ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಈ ಎಲ್ಲ ವಿಚಾರ ಚರ್ಚೆ ಆಗಲಿದೆ ಎಂದು ನಂಬಲಾಗಿತ್ತು. ಅದರಂತೆ ಮನೆಯ ಎಲ್ಲ ಸ್ಪರ್ಧಿಗಳ ಮೇಲೆ ಸಿಟ್ಟಾಗಿರುವ ಸುದೀಪ್ ಖಡಕ್ ಆಗಿ ಮಾತನಾಡಿದ್ದಾರೆ. ತಪ್ಪು ಮಾಡಿದವರು ಹೊರಗೆ ಹೋದರು. ಆದರೆ ಇಲ್ಲಿ ಇರೋರು ಎಷ್ಟು ಜನ ಸರಿ ಇದ್ದೀರಿ? ಎಂದು ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಕೇಳಿದ್ದಾರೆ.
ಒಬ್ಬರು ಚಪ್ಪಲ್ ಎಸಿದು ಬಿಸಾಡುತ್ತಾರೆ ಅಂದರೆ ಅದು ಓಕೆನಾ? ಎಂದು ಉಗ್ರಂ ಮಂಜು ಅವರಿಗೆ ನೇರವಾಗಿ ಕೇಳಿದ್ದಾರೆ. ಈ ಮನೆಗೆ ಪ್ರಾಮಾಣಿಕತೆ ಎನ್ನುವ ವರ್ಡ್ ಸೂಟ್ ಆಗಲ್ಲ ಎಂದು ಗರಂ ಆಗಿದ್ದಾರೆ. ಚೈತ್ರಾ ಕುಂದಾಪುರ ಆಡಿದ ಮಾತಿಗೆ ಸುದೀಪ್ ಅವರು ರೋಷಾವೇಶದಲ್ಲಿ ಮಾತನಾಡಿದ್ದಾರೆ. ಚೈತ್ರಾ ಅವರೇ ಹೆಣ್ಣು ಮಕ್ಕಳ ಬಗ್ಗೆ ಮಾತನಾಡಬೇಡಿ ಅಂತೀರಾ. ಒಬ್ಬ ಅಪ್ಪನಿಗೆ ಹುಟ್ಟಿದ್ಯಾ ಅಂದ್ರೆ ಯಾವ ನನ್ಮಗನು ಅಪ್ಪನಿಗೆ ಬೈಯುತ್ತಿಲ್ಲ ಮೇಡಂ ತಾಯಿಗೆ ಬೈಯುತ್ತಾ ಇರೋದು ಎಂದು ಸುದೀಪ್ ಹೇಳಿದ್ದಾರೆ.
ಪಂಚಾಯ್ತಿ ಕಟ್ಟೇಲಿ ನ್ಯಾಯ ಎತ್ತಿ ಹಿಡಿದ ಕಿಚ್ಚ!
— Colors Kannada (@ColorsKannada) October 19, 2024
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9
#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/hlpGSm2BvY
ಇನ್ನು ಮಾನಸ ಅವರಿಗೂ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಮಾತುಗಳಿಂದ ಮನೆಯಿಂದ ಒಬ್ಬ ವ್ಯಕ್ತಿ ಹೊರಗೆ ಹೋದರು ಅಂತಾದರೆ, ಆದರೆ ನೀವು ಮಾತನಾಡಿರುವ ಕೆಲವು ತಪ್ಪು ಮಾತುಗಳನ್ನು ಇಟ್ಟುಕೊಂಡು ನಿಮ್ಮನ್ನು ಯಾಕೆ ಮನೆಯೊಳಗೆ ಇಟ್ಟುಕೊಂಡಿರಬೇಕು? ಎಂದು ಪ್ರಶ್ನಿಸಿದ್ದಾರೆ.
BBK 11: ಶಿಶಿರ್ Loves ಐಶ್ವರ್ಯ: ಬಿಗ್ ಬಾಸ್ ಮನೆಯಲ್ಲಿ ಶುರುವಾಯಿತು ಮತ್ತೊಂದು ಲವ್ ಸ್ಟೋರಿ?