ಮುಂಬೈ: ಬಾಲಿವುಡ್ ಬೇಬಿ ಡಾಲ್, ಅಭಿಮಾನಿಗಳ ಪ್ರಿಯ ನಟಿ ಸನ್ನಿ ಲಿಯೋನ್ (Sunny Leone) ಸೋಮವಾರ (ಡಿ. 9) ಸಂಜೆ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದಿದ್ದರು. ಸನ್ನಿ ಲಿಯೋನ್ ಬಂದಿದ್ದು ಯಾವುದೇ ಸಿನಿಮಾ ಶೂಟಿಂಗ್‌ಗಾಗಿ ಅಲ್ಲ. ಬದಲಿಗೆ ಬೆಂಗಳೂರಿನಲ್ಲಿ ಪಾರ್ಟಿ ಮಾಡಲು. ಹೌದು, ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ IGNITE ಸೂಪರ್ ಕ್ಲಬ್‌ನಲ್ಲಿ ನಡೆದ ಡಿಜೆ ಪಾರ್ಟಿಗೆ ಸನ್ನಿ ಲಿಯೋನ್ ಮುಖ್ಯ ಅತಿಥಿಯಾಗಿದ್ದರು.
ಸೋಮವಾರ ಪಾರ್ಟಿ ಬಲು ಅದ್ಧೂರಿಯಾಗಿ ನಡೆದಿಯಿತು. ಪಾರ್ಟಿಯಲ್ಲಿ ಸನ್ನಿ ಲಿಯೋನ್ ಅವರು ಡ್ಯಾನ್ಸ್ ಪ್ರದರ್ಶನ ಸಹ ನೀಡಿದರು. ಬೆಂಗಳೂರು ಜನತೆ ಸನ್ನಿ ಲಿಯೋನಿ ಜತೆ ಹಾಡಿ ಕುಣಿದು ಎಂಜಾಯ್ ಮಾಡಿದರು.
ಬುಕ್ ಮೈ ಶೋನಲ್ಲಿ ಈ ಪಾರ್ಟಿಯ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಪಾರ್ಟಿಗೆ ಹೋಗುವ ಮುಂಚೆ ಮಾಧ್ಯಮದ ಜತೆ ಸನ್ನಿ ಲಿಯೋನಿ ಸಂವಾದ ನಡೆಸಿದರು. ಈ ಸಮಯದಲ್ಲಿ ಬೆಂಗಳೂರಿನ ಬಗ್ಗೆ, ಪಾರ್ಟಿ ಬಗ್ಗೆ ನಟಿ ಮಾತನಾಡಿದರು.
ʼʼನನಗೆ ಬೆಂಗಳೂರು ಎಂದರೆ ಇಷ್ಟ. ನಾನು ಇಲ್ಲಿ ಬಂದಿರುವುದು. ಈ ಡಿಜೆ ಪಾರ್ಟಿಯಲ್ಲಿ ಭಾಗವಹಿಸುತ್ತಿರುವುದಕ್ಕೆ ಎಕ್ಸೈಟ್ ಆಗಿದ್ದೇನೆ. ಕನ್ನಡದಲ್ಲಿ ಅವಕಾಶಗಳು ಬಂದರೆ ಸಿನಿಮಾ ಮಾಡುತ್ತೇನೆ. ಡಿಜೆ ಪಾರ್ಟಿಯಲ್ಲಿ ಎಲ್ಲರೂ ಎಂಜಾಯ್ ಮಾಡೋಣ. ಫನ್ ಮಾಡೋಣʼʼ ಎಂದು ಸನ್ನಿ ಲಿಯೋನ್ ಹೇಳಿದರು.
2012ರಲ್ಲಿ ತೆರೆಕಂಡ ಬಾಲಿವುಡ್‌ನ ʼಜಿಸ್ಮ್ 2ʼ ಚಿತ್ರದ ಮೂಲಕ ಸನ್ನಿ ಲಿಯೋನ್ ಬಾಲಿವುಡ್ ಪ್ರವೇಶಿಸಿದರು. ಹಿಂದಿ ಜತೆಗೆ ತಮಿಳು, ತೆಲುಗು ಮತ್ತು ಕನ್ನಡ ಹಿಂದಿ ಜತೆಗೆ ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಬಂಗಾಳಿ ಚಿತ್ರಗಳಲ್ಲಿ ನಟಿಸಿದ್ದಾರೆ. ಜತೆಗೆ ವಿವಿಧ ಭಾಷೆಯ ಚಿತ್ರಗಳಲ್ಲಿ ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. 2015ರಲ್ಲಿ ರಿಲೀಸ್ ಆದ ಕನ್ನಡ ʼಡಿಕೆʼ ಚಿತ್ರದಲ್ಲಿ ಮೊದಲ ಬಾರಿ ಕಾಣಿಸಿಕೊಂಡ ಅವರು ಬಳಿಕ ʼಲವ್ ಯೂ ಆಲಿಯಾʼ, ʼಚಾಂಪಿಯನ್ʼ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಬಹು ನಿರೀಕ್ಷಿತ ಉಪೇಂದ್ರ ಅವರ ʼಯುಐʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Pushpa 2 Collection: ‘ಪುಷ್ಪ 2’ ಅಬ್ಬರಕ್ಕೆ ಬಾಕ್ಸ್ ಆಫೀಸ್ ಶೇಕ್; 2 ದಿನಗಳಲ್ಲಿ ಬರೋಬ್ಬರಿ 417 ಕೋಟಿ ರೂ. ಬಾಚಿಕೊಂಡ ಅಲ್ಲು ಅರ್ಜುನ್ ಚಿತ್ರ