ಮುಂಬೈ: ಕಳೆದ ವರ್ಷ ಸಾವಿಗೀಡಾದ ಯುವ ನಟ ಸುಶಾಂತ್ ಸಿಂಗ್ ರಾಜಪೂತ್ ಅವರ 35ನೇ ವರ್ಷದ ಹುಟ್ಟುಹಬ್ಬದ ನೆನಪಿಗಾಗಿ, ಆತನ ಸಹೋದರಿ ತೆಗೆದುಕೊಂಡ ನಿರ್ಧಾರವೊಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಆತನ ನೆನಪಿಗಾಗಿ, ಯುಸಿ ಬರ್ಕ್ ಲೀಯಲ್ಲಿ 35 ಸಾವಿರ ಡಾಲರ್ ಧನ ಸಹಾಯ ಮಾಡುವುದಾಗಿ ತಮ್ಮ ಟ್ವಿಟರ್ ಖಾತೆಯಲ್ಲಿ
ಹೇಳಿಕೊಂಡಿದ್ದಾರೆ. ಈ ಆರ್ಥಿಕ ಸಹಾಯವು ಭೌತಶಾಸ್ತ್ರ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕಾಗಿ ವಿನಿಯೋಗಿಸಲಾಗುವುದು ಎಂದು ಹೇಳಲಾಗಿದೆ. ಸಿನಿ ಪ್ರೇಕ್ಷಕರು ಇಂದಿನ ದಿನ ನಟ ಸುಶಾಂತ್‍ರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲೂ ಈ ಕುರಿತಂತೆ ಹಲವು ಸಂದೇಶಗಳು ಹರಿದಾಡುತ್ತಿವೆ.
ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ತರುವ ಬಗ್ಗೆ ಸುಶಾಂತ್ ಮಾತನಾಡಿದ್ದ ಇನ್‍ಸ್ಟಾಗ್ರಾಂ ಪೋಸ್ಟ್ ವೊಂದನ್ನು ಆತನ ಸಹೋದರಿ ಇದೇ ಸಂದರ್ಭದಲ್ಲಿ ಶೇರ್ ಮಾಡಿದ್ದಾರೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ದಿ ಸುಶಾಂತ್ ಸಿಂಗ್ ರಾಜಪೂತ್ ಮೆಮೋರಿಯಲ್ ಫಂಡ್ ಸಹಾಯ ಹಸ್ತ ನೀಡಲಿದೆ ಎಂದು ಯುಸಿ ಬರ್ಕ್ ಲೀ ವೆಬ್‍ಸೈಟ್ ಕುರಿತು ತಿಳಿಸಿದ್ದಾರೆ.