ಚೆನ್ನೈ: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಸ್ಪಿನ್ ಲೆಜೆಂಡ್ ಮುತ್ತಯ್ಯ ಮುರಳೀಧರನ್ ಅವರ ಜೀವನಾಧಾರಿತ ಚಿತ್ರ ’800′ ನಲ್ಲಿ ನಟ ವಿಜಯ್ ಸೇತುಪತಿ ನಟಿಸುತ್ತಿದ್ದಾರೆ.
ಎಂ.ಎಸ್.ಶ್ರೀಪತಿ ಅವರ ನಿರ್ದೇಶನ, ಮೂವೀ ಟ್ರೈನ್ ಮೋಷನ್ ಪಿಕ್ಚರ್ಸ್ ಮತ್ತು ದಾರ್ ಮೋಷನ್ ಪಿಕ್ಚರ್ಸ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ ಮುತ್ತಯ್ಯ ಮುರಳೀ ಧರನ್ ಅವರು ಸ್ಪಿನ್ ಬೌಲಿಂಗಿನಲ್ಲಿ ಮೋಡಿ ಮಾಡಿದವರು. ಚಿತ್ರದ ಹೆಸರು 800 ಎಂದರೆ, ಮುರಳೀಧರನ್ ಅವರು ತಮ್ಮ ಟೆಸ್ಟ್ ಕ್ರಿಕೆಟ್ನ ಕ್ರೀಡಾವೃತ್ತಿಯಲ್ಲಿ ಗಳಿಸಿದ ವಿಕೆಟ್ಗಳ ಸಂಖ್ಯೆ ಯಾಗಿದೆ.
ಟೆಸ್ಟ್ ಕ್ರಿಕೆಟ್ನಲ್ಲಿ ಇಷ್ಟು ಸಂಖ್ಯೆ ವಿಕೆಟ್ ಕಿತ್ತ ಮೊದಲನೇ ಕ್ರಿಕೆಟ್ ಆಟಗಾರರಾಗಿದ್ದಾರೆ. ಈ ಮೂಲಕ, ಆಸ್ಟ್ರೇಲಿಯಾದ ಸ್ಪಿನ್ ಲೆಜೆಂಡ್ ಶೇನ್ ವಾರ್ನ್ ಅವರನ್ನು ಹಿಂದಿಕ್ಕಿದ್ದಾರೆ. ಅವರದ್ದು 708 ವಿಕೆಟ್.
ಮಕ್ಕಲ್ ಸೆಲ್ವನ್ ಎಂದೇ ಅಭಿಮಾನಗಳ ಫೇವರೇಟ್ ಆದ, ವಿಜಯ್, ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. 2016ರಲ್ಲಿ ಸೇತುಪತಿ ಮೂಲಕ ಪ್ರಸಿದ್ದಿ ಪಡೆದರು. ಬಳಿಕ 2016ರಲ್ಲಿ ಧರ್ಮದುರೈ ಚಿತ್ರದ ಮೂಲಕ ಮನೆ ಮಾತಾಗಿದ್ದಾರೆ.