ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಯಶಸ್ವಿಯಾಗಿ 100ನೇ ದಿನ ಪೂರೈಸಿ ಮುನ್ನುಗ್ಗುತ್ತಿದೆ. ಫಿನಾಲೆ ವೀಕ್ ಹತ್ತಿರವಾಗುತ್ತಿದ್ದು ಸದ್ಯ ಮನೆಯಲ್ಲಿರುವ ಒಂಬತ್ತು ಸ್ಪರ್ಧಿಗಳು ಟಾಪ್ 5ಗೆ ಬರಲು ಮೈ-ಚಳಿ ಬಿಟ್ಟು ಆಡುತ್ತಿದ್ದಾರೆ. ಈ ವಾರ ನಡೆಯುತ್ತಿರುವ ಗೇಮ್ಗಳಲ್ಲಿ ಗೆದ್ದ ಒರ್ವ ಸ್ಪರ್ಧಿಗೆ ಟಿಕೆಟ್ ಟು ಫಿನಾಲೆ ಪಾಸ್ ಸಿಗುತ್ತದೆ. ಟಿಕೆಟ್ ಟು ಫಿನಾಲೆ ಪಾಸ್ ಅಂದರೆ ಗ್ರ್ಯಾಂಡ್ ಫಿನಾಲೆಗೆ ನೇರವಾಗಿ ಸೆಲೆಕ್ಟ್ ಆಗುತ್ತಾರೆ.
ಹೀಗಾಗಿ ಸದ್ಯ ಬಿಗ್ ಬಾಸ್ನಲ್ಲಿ ಅಸಲಿ ಆಟ ಶುರುವಾಗಿದೆ. ಇಷ್ಟು ದಿನ ಇದ್ದ ಕಂಫರ್ಟ್ ಝೋನ್, ಫ್ರೆಂಡ್ಶಿಪ್ ಎಲ್ಲವೂ ಕೊಚ್ಚಿ ಹೋಗಿದೆ. ಮುಖ್ಯವಾಗಿ ತ್ರಿವಿಕ್ರಮ್ ಹಾಗೂ ಉಗ್ರಂ ಮಂಜು ನಡುವೆ ಜಟಾಪಟಿ ನಡೆದಿದೆ. ನಿನ್ನೆ (ಸೋಮವಾರ) ಕೂಡ ಮಂಜು-ತ್ರಿವಿಕ್ರಮ್ ಮಧ್ಯೆ ಟಾಸ್ಕ್ ಒಂದು ಮುಗಿದ ಬಳಿಕ ದೊಡ್ಡ ಜಗಳ ಆಗಿತ್ತು. ಇಂದು ಟಾಸ್ಕ್ ಮಧ್ಯೆ ಮತ್ತೊಮ್ಮೆ ಜಗಳ ನಡೆದಿದೆ. ಕ್ಯಾಪ್ಟನ್ ರಜತ್ ಕಿಶನ್ಗೆ ಇವರ ಜಗಳ ಕಂಡು ತಲೆಕೊಟ್ಟೋಗಿದೆ.
ಟಾಸ್ಕ್ ಪ್ರಕಾರ ಒಂದು ಕೈಯಲ್ಲಿ ಪೋಲ್ ಮತ್ತೊಂದು ಕೈಯಲ್ಲಿ ಬಣ್ಣದ ನೀರಿನ ಬಾಟಲ್ ಕೊಡಲಾಗಿದೆ. ಒಂದು ಬಾರಿಗೆ ಇಬ್ಬರು ಸ್ಪರ್ಧಿಗಳು ಆಡಬೇಕು. ಕೈಯಲ್ಲಿರುವ ಪೋಲ್ನಿಂದ ಹೊಡೆದು ಎದುರಾಳಿಯ ಬಾಟಲ್ ಒಳಗಿನ ಬಣ್ಣದ ನೀರಿನ್ನು ಚೆಲ್ಲಬೇಕು. ಯಾರ ನೀರು ಹೆಚ್ಚಿಗೆ ಚೆಲ್ಲುತ್ತಾವೋ ಅವರು ಸೋತಂತೆ. ಈ ಗೇಮ್ ಆಡುವಾಗ ತ್ರಿವಿಕ್ರಮ್ ಮುಖಕ್ಕೆ ಮಂಜು ತಪ್ಪಾಗಿ ಪೋಲ್ನಿಂದ ಹೊಡೆದಿದ್ದಾರೆ.
ಇದರಿಂದ ಕೆರಳಿದ ತ್ರಿವಿಕ್ರಮ್, ಮಂಜು ಬೇಕಂತಲೇ ಹೊಡೆದಿದ್ದು ಎಂಬಂತೆ ಗಲಾಟೆ ಮಾಡಿದ್ದಾರೆ. ಬಳಿಕ ನಾನು ಹೊಡೆಯುತ್ತೇನೆ ಎಂದು 2 ಸೆಕೆಂಡ್ಗೆ ಮಂಜು ಕೈಯಲ್ಲಿನ ಬಾಟಲ್ ಬೀಳಿಸುತ್ತೇನೆ ಎಂದು ಚಾಲೆಂಜ್ ಹಾಕಿದ್ದಾರೆ. ಪೋಲ್ನಿಂದ ತ್ರಿವಿಕ್ರಮ್ ಹೊಡೆದಿರುವುದು ವಿಡಿಯೋದಲ್ಲಿದೆ. ತ್ರಿವಿಕ್ರಮ್ ಹಾಗೂ ಮಂಜು ನಡುವಿನ ಮಾತಿನ ಸಮರ ಕಂಡು ರಜತ್ ಅವರು ಏನು ಮಾಡೋಕೆ ಆಗಲ್ಲ ಗುರು, ಕಾಪಾಡಿಕೋ ಎಂದು ಮಂಜುಗೆ ಹೇಳಿದ್ದಾರೆ.
BBK 11: ಈ ವಾರ ಯಾರೆಲ್ಲ ನಾಮಿನೇಟ್?: ಭಾನುವಾರ ಅಲ್ಲ ಎಲಿಮಿನೇಷನ್, ಮತ್ಯಾವಾಗ?