ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಇಂದು 10ನೇ ವಾರದ ಪಂಚಾಯಿತಿ ನಡೆಯಲಿದೆ. ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ಗೆ ಬಂದಿರುವ ಕಿಚ್ಚ ಸುದೀಪ್, ಈ ಗೇಮ್ನ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀನಿ ಅಂತಾ ಬ್ರಮೆಯಲ್ಲಿ ಇರೋರಿಗೆ.., ಬಿಗ್ಬಾಸ್ ಮೇಲಿನ ನಿರ್ಧಾರಗಳ ಮೇಲೆ ರೆಸ್ಪೆಕ್ಟ್ ಇಲ್ಲ ಎಂದು ಹೇಳಿದ್ದಾರೆ. ಇಲ್ಲಿ ಸುದೀಪ್ ಮಾತನಾಡಿರುವುದು ತ್ರಿವಿಕ್ರಮ್ ಬಗ್ಗೆ. ಕಳೆದ ವಾರ ಶೋಭಾ ಶೆಟ್ಟಿ ಶೋ ಕ್ವಿಟ್ ಮಾಡಿ ಹೊರ ಹೋಗಿದ್ದರು. ಈ ವೇಳೆ ತ್ರಿವಿಕ್ರಮ್ ಅವರು ಗೌತಮಿ ಜಾಧವ್ ಜೊತೆ ಆಡಿರುವ ಮಾತುಗಳಿಗೆ ಸುದೀಪ್ ಕೆರಳಿ ಕೆಂಡವಾಗಿದ್ದಾರೆ.
ತ್ರಿವಿಕ್ರಮ್-ಗೌತಮಿ ಮಾತುಕತೆ ಏನು?:
”ಸಂಥಿಂಗ್ ಈಸ್ ರನ್ನಿಂಗ್ ಇನ್ ಮೈ ಮೈಂಡ್. ಅದು ರೈಟ್ ಆರ್ ರಾಂಗ್ ನನಗೆ ಗೊತ್ತಿಲ್ಲ. ಲಾಸ್ಟ್ ವೀಕ್‌ನಲ್ಲಿ ಆಗಿದ್ದು ಎಂದು ಹೇಳುತ್ತಾ ಎರಡು ಅಕ್ಕಿ ಕಾಳನ್ನ ಇಟ್ಟುಕೊಂಡು ಬಾಟಂ 2 ಅಂತ ಗೌತಮಿಗೆ ತ್ರಿವಿಕ್ರಮ್ ಹಿಂಟ್ ಕೊಡುತ್ತಾರೆ. ಇದಾದ ಬಳಿಕ ಇಷ್ಟು ಜನ ಇದ್ದೀವಲ್ಲಾ. ಇದರಲ್ಲಿ ಯಾರಾದರೂ ಒಬ್ಬರು ಮಾಡಿಬಿಟ್ಟಿದ್ದರೆ.. ಏನೋ ಪ್ರಾಬ್ಲಂ, ಇಶ್ಯೂ ಅಂದುಕೊಂಡು ಆಗಿರುತ್ತಿತ್ತು. ಆದರೆ ಶೋಭಾ ಶೆಟ್ಟಿ ಬಂದಿರೋದು ಹೊರಗಡೆ ಇಂದ. ಎಪಿಸೋಡ್‌ಗಳನ್ನ ನೋಡಿದ್ದಾರೆ. ನೀನು ಯಾರ್ಯಾರ ಬಳಿ ಏನೇನು ಮಾತಾಡಿದ್ಯಾ ಅಂತ ಗೊತ್ತಿಲ್ಲ. ಈ 2 (ಶಿಶಿರ್, ಐಶ್ವರ್ಯಾ) ಇರಬೇಕಾದರೆ ನೀನು ಆಚೆ ಹೋಗಿದ್ಯಾ ಅಂದ್ರೆ ನಿನ್ನ (ಶೋಭಾ ಶೆಟ್ಟಿ) ಪ್ಲಾನ್ ಏನು ಅಂತ ತ್ರಿವಿಕ್ರಮ್ ಹೇಳುತ್ತಾರೆ. ಆಗ ಗೌತಮಿ ಅವರು ಹೇಳ್ತಿರೋ ಹಾಗೆ ಹೆಲ್ತ್ ಇಶ್ಯೂ ಮುಂಚೆಯಿಂದಲೂ ಇತ್ತಂತೆ. ನಾನು ಡಿಸ್ಕಸ್ ಮಾಡಿದ್ದೀನಿ ಅವರ ಹತ್ತಿರ ಎಂದು ಗೌತಮಿ ಜಾಧವ್ ಹೇಳುತ್ತಾರೆ. ಇದೇ ವೇಳೆ, ಸೇಫ್ ಆಗೋ ಆಚೆ ಹೋಗುವ ಉದ್ದೇಶ ಏನು?” ಎಂದು ತ್ರಿವಿಕ್ರಮ್-ಗೌತಮಿ ನಡುವೆ ಮಾತುಕತೆ ನಡೆದಿದೆ.
ಕಳೆದ ವಾರ ಶೋಭಾ ಶೆಟ್ಟಿ ತಮ್ಮ ಸ್ವಂತ ಇಚ್ಚೆಯಿಂದ ಬಿಗ್ ಬಾಸ್ ಮನೆಯಿಂದ ಹೊರಗಡೆ ಬರುತ್ತಾರೆ. ಶಿಶಿರ್ ಹಾಗೂ ಐಶ್ವರ್ಯ ಈ ಇಬ್ಬರಲ್ಲಿ ಒಬ್ಬರು ಎಲಿಮಿನೇಟ್ ಆಗಬೇಕಿತ್ತು. ಆದರೆ ಶೋಭಾ ಶೆಟ್ಟಿ ಅವರು ಹೊರ ಬಂದಿದ್ದರಿಂದ ಇವರಿಬ್ಬರು ಸೇಫ್ ಆದರು. ಇದರಿಂದೆ ಯಾರಿದ್ದಾರೆ ಅನ್ನೋದನ್ನು ಗೌತಮಿ- ತ್ರಿವಿಕ್ರಮ್ ಕೋಡ್ ವರ್ಡ್ ಮೂಲಕ ಮಾತನಾಡಿದ್ದಾರೆ.
ತ್ರಿವಿಕ್ರಮ್ಗೆ ಸುದೀಪ್ ಕ್ಲಾಸ್:
ಇದೇ ವಿಚಾರವಾಗಿ ಇಂದಿನ ಪಂಚಾಯ್ತಿಯಲ್ಲಿ ಸುದೀಪ್ ಅವರು ತ್ರಿವಿಕ್ರಮ್ಗೆ ಪ್ರಶ್ನೆ ಮಾಡಿದ್ದಾರೆ. ಇಬ್ಬರು ಜಡ್ಜಸ್ ಆಫ್ ಬಿಗ್ಬಾಸ್, ಶೋಭಾ ಅವರು ಬಿಗ್ ಬಾಸ್ ಮನೆಯಿಂದ ಯಾಕೆ ಹೋದ್ರು ಅಂತ ತ್ರಿವಿಕ್ರಮ್ಗೆ ಸುದೀಪ್ ಕೇಳಿದ್ದಾರೆ. ಆಗ ತ್ರಿವಿಕ್ರಮ್ ನಾನು ಕನ್ಫ್ಯೂಷನ್ನಲ್ಲಿ ಇದ್ದೇ ಅಣ್ಣ ಅಂತ ಹೇಳಿದ್ದಾರೆ. ಆಗ ಸುದೀಪ್ ಅವರು ನಿಮ್ಮ ಕಣ್ಮುಂದೆನೇ ಅದೇಲ್ಲಾ ಆಗಿದೆ ಏನಕ್ಕೆ ಕನ್ಫ್ಯೂಷನ್ ನಿಮಗೆ ಅಂತ ಹೇಳಿದ್ದಾರೆ.
ಆಗ ತ್ರಿವಿಕ್ರಮ್ ಅವರು ಕೋಪ ಮಾಡಿಕೊಳ್ಳಲ್ಲ ಅಂದರೆ ಹೇಳುತ್ತೀನಿ. ನಿಮಗೆ ತಲೆ ತಗ್ಗಿಸಲು ರೆಡಿ ಎಂದಿದ್ದಾರೆ. ಅದಕ್ಕೆ ಕಿಚ್ಚ ಅವರು. ನಿಮ್ಮನ್ನ ಕೇಳಿ ನಾನು ಕೋಪ ಮಾಡಿಕೊಳ್ಳಲು ಬೇಕಾಗಿಲ್ಲ. ನಾನು ಯಾರಗೂ ನನ್ನ ಮುಂದೆ ತಲೆ ತಗ್ಗಿಸಬೇಕು ಅಂತ ಹೇಳೋ ಮಗನೇ ಅಲ್ಲ ಎಂದಿದ್ದಾರೆ. ಇದಕ್ಕೆ ತ್ರಿವಿಕ್ರಮ್ ಅವರು ಹಾಗೇನಾದರೂ ಬಿಗ್ ಬಾಸ್ಗೆ ನಾನು ಅಗೌರವ ಮಾಡಿದ್ರೆ ಈ ಮನೆಯಿಂದ ಹೋಗಲು ರೆಡಿ ಅಣ್ಣ ಅಂತ ಹೇಳಿದ್ದಾರೆ. ಆಗ ಕಿಚ್ಚ ಬಿಗ್ಬಾಸ್ ಅಗೌರವ ಕೊಟ್ಟಿದ್ದೀರಿ ನೀವು ಎಂದು ಕೋಪಗೊಂಡಿದ್ದಾರೆ.
BBK 11: ನಾನು ಬಿಗ್ ಬಾಸ್ ಕ್ವಿಟ್ ಮಾಡೋಕೆ ರೆಡಿ ಇದ್ದೇನೆ: ಸುದೀಪ್ ಮುಂದೆ ತ್ರಿವಿಕ್ರಮ್ ಶಾಕಿಂಗ್ ಹೇಳಿಕೆ