Friday, 3rd January 2025

BBK 11: ರಾಧಕೃಷ್ಣನ ಥರ ಇದೀರಿ: ತ್ರಿವಿಕ್ರಮ್ ತಾಯಿಯ ಮಾತಿಗೆ ನಾಚಿ ನೀರಾದ ಭವ್ಯಾ ಗೌಡ

Trivikram Mother and Bhavya

ಬಿಗ್ ಬಾಸ್ ಕನ್ನಡ ಸಿಸನ್ 11 ರಲ್ಲಿ (Bigg Boss Kannada 11) 94 ದಿನಗಳ ಆಟ ಮುಗಿದು ಹೋಗಿದೆ. ಫೈನಲ್​ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಹೀಗಿರುವಾಗ ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಜೋರಾಗಿದೆ. ಇದರ ಮಧ್ಯೆ ಇಷ್ಟು ದಿನಗಳಕಾಲ ಕುಟುಂಬವನ್ನು ಬಿಟ್ಟು ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಕುಟುಂಬದವರನ್ನು ಭೇಟಿ ಮಾಡುವ ಅವಕಾಶ ಒದಗಿಸಲಾಗಿದೆ. ಈ ವಾರ ಫ್ಯಾಮಿಲಿ ವೀಕ್ ಆಗಿದೆ.

ಬಿಗ್ ಬಾಸ್ ಮನೆಯಲ್ಲಿರುವ 9 ಸ್ಪರ್ಧಿಗಳ ಕುಟುಂಬದವರು ಆಗಮಿಸುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ಭವ್ಯಾ ಗೌಡ, ರಜತ್ ಕಿಶನ್ ಮತ್ತು ತ್ರಿವಿಕ್ರಮ್ ಅವರ ಮನೆಯವರು ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದಾರೆ. ಭವ್ಯಾ ಮತ್ತು ತ್ರಿವಿಕ್ರಮ್ ತಾಯಂದಿರು ದೊಡ್ಮನೆಗೆ ಬಂದಿದ್ದಾರೆ. ಆದರೆ, ಇದರಲ್ಲೂ ಬಿಗ್ ಬಾಸ್ ಒಂದು ಟ್ವಿಸ್ಟ್ ಇಟ್ಟಿದ್ದಾರೆ. ಸ್ಪರ್ಧಿಗಳಿಗೆ ಹೊಸ ಟಾಸ್ಕ್ ನೀಡಲಾಗಿದೆ. ಟಾಸ್ಕ್‌ ಗೆದ್ದವರಿಗೆ ಮಾತ್ರ ತಮ್ಮ ಮನೆಯವರನ್ನು ಭೇಟಿ ಮಾಡುವ ಅವಕಾಶ ಕೊಡಲಾಗುತ್ತದೆ.

ಭವ್ಯಾ ತಾಯಿ ಬಂದಾಗ, ಸ್ಪರ್ಧಿ ಅಲ್ಲಾಡದೇ, ಯಾವುದೇ ರಿಯಾಕ್ಷನ್ ಇಲ್ಲದೇ ನಿಲ್ಲಬೇಕು. ಭವ್ಯಾ ಅವರು ತುಂಬ ಎಮೋಷನಲ್‌ ಆದರು. ತಾಯಿ ಜೊತೆ ಭಾವುಕರಾಗಿ ಮಾತನಾಡಿ ಕಣ್ಣೀರಿಟ್ಟರು. ಆದರೆ ತ್ರಿವಿಕ್ರಮ್‌ಗೆ ಆ ಅವಕಾಶ ಸಿಗಲಿಲ್ಲ ಎಂಬಂತೆ ಕಂಡುಬಂದಿದೆ. ಈ ಟಾಸ್ಕ್ ಅನ್ನು 10 ನಿಮಿಷದಲ್ಲಿ ಪೂರ್ಣಗೊಳಿಸಿದ್ರೆ ಅಮ್ಮನನ್ನು ಭೇಟಿ ಮಾಡಬಹುದು ಎಂದು ಬಿಗ್ ಬಾಸ್ ತ್ರಿವಿಕ್ರಮ್​ಗೆ ಹೇಳಿದ್ದರು. ಅದರಂತೆ ಆ್ಯಕ್ಟಿವಿಟಿ ರೂಮ್​ನಲ್ಲಿ ತ್ರಿವಿಕ್ರಮ್ ಅವರು, ಪಜಲ್ ಅನ್ನು ಫುಲ್ ಟೆನ್ಷನ್​​ನಲ್ಲಿ ಕಂಪ್ಲೀಟ್ ಮಾಡಲಿಲ್ಲ. ಹಾಗಾಗಿ, ತಾಯಿಯನ್ನು ಭೇಟಿ ಮಾಡಿಸಿ, ಎಂದು ಬಿಗ್ ಬಾಸ್ ಬಳಿ ಗೊಗರೆದರು ತ್ರಿವಿಕ್ರಮ್.

ಅತ್ತ ಮನೆಯೊಳಗೆ ಬಂದಿದ್ದ ತ್ರಿವಿಕ್ರಮ್ ತಾಯಿಗೆ ಮಗನ ನೋಡುವ ಅವಕಾಶ ಸಿಗುತ್ತಾ ಗೊತ್ತಿಲ್ಲ, ಆದರೆ ಭವ್ಯಾ ಗೌಡ ಜೊತೆ ಸಖತ್ ಹರಟೆ ಹೊಡೆದಿದ್ದಾರೆ. ಭವ್ಯ, ತ್ರಿವಿಕ್ರಮ್ ಅವರ ತಾಯಿಯನ್ನು ತಬ್ಬಿಕೊಂಡು ಸಂತಸ ಪಟ್ಟರು. ಬಳಿಕ ಸೋಫಾ ಮೇಲೆ ಕುಳಿತು ಇಬ್ಬರು ಮಾತನಾಡುವಾಗ, ನನ್ನ ಮಗನ ತಾಯಿಯಾಗಿ, ಫ್ರೆಂಡ್ ಆಗಿ ಎಲ್ಲ ತರದಲ್ಲೂ ಇಬ್ಬರು ಚೆನ್ನಾಗಿದ್ದೀರಿ. ರಾಧಕೃಷ್ಣನ ಥರ ಇದೀರಿ ಎಂದು ತ್ರಿವಿಕ್ರಮ್ ತಾಯಿ, ಭವ್ಯಗೆ ಹೇಳಿದ್ದಾರೆ. ಇದನ್ನು ಕೇಳಿ ಭವ್ಯಾ ನಾಚಿ ನೀರಾಗಿದ್ದು ಖುಷಿಯಾಗಿದ್ದಾರೆ.

BBK 11: ಬಿಗ್ ಬಾಸ್ ಮನೆಯೊಳಗೆ ಬಂದ ಪತ್ನಿಯನ್ನೇ ಆಚೆ ಹೋಗು ಎಂದ ರಜತ್