Saturday, 23rd November 2024

BBK 11: ಚೈತ್ರಾ ಅಲ್ಲ: ತ್ರಿವಿಕ್ರಮ್​ಗೆ ಜೋಡಿಯಾದ ಸದಸ್ಯೆ ಇವರೇ ನೋಡಿ

Trivikram and Bhavya Gowda (1)

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಬಿಗ್ ಬಾಸ್ ನೀಡುತ್ತಿರುವ ಒಂದೊಂದು ಟಾಸ್ಕ್ ವೀಕ್ಷಕರನ್ನು ಹಿಡಿದು ಕೂರಿಸಿದೆ. ಸದ್ಯ ಮನೆಯಲ್ಲಿ ಜೋಡಿ ಟಾಸ್ಕ್ ನಡೆಯುತ್ತಿದೆ. ಸ್ವತಃ ಬಿಗ್ ಬಾಸ್ ಅವರೇ ಮನೆಯ ಸದ್ಯರನ್ನು ಜೋಡಿಯಾಗಿ ಆಯ್ಕೆ ಮಾಡಿದ್ದಾರೆ. ಆದರೆ, ಟಾಸ್ಕ್ ಅನ್ನು ಮುಂದಿನ ಹಂತಕ್ಕೆ ಕೊಂಡ್ಯಲು ಬಿಗ್ ಬಾಸ್ ಒಂದು ಟ್ವಿಸ್ಟ್ ನೀಡಿದರು.

ಟ್ವಿಸ್ಟ್ ಏನೆಂದರೆ ನೀವು ನಿಮ್ಮ ಜೋಡಿ ಸದಸ್ಯನನ್ನ ಬಿಟ್ಟು ತ್ರಿವಿಕ್ರಮ್ ಜೊತೆ ಜೋಡಿಯಾಗಲು ಬಯಸುತ್ತೀರಾ? ಎಂದು ಬಿಗ್ ಬಾಸ್‌ ಮಹಿಳಾ ಸದಸ್ಯರಿಗೆ ಕೇಳಿದ್ದಾರೆ. ಇದಕ್ಕೆ ಚೈತ್ರಾ ಕುಂದಾಪುರ, ಗೌತಮಿ ಜಾಧವ್, ಭವ್ಯಾ ಗೌಡ, ಅನುಷಾ ರೈ ಹೌದು ಎಂದು ಹೇಳಿದ್ದಾರೆ. ಆದರೆ, ಈ ನಾಲ್ವರಲ್ಲಿ ಯಾರಾದರು ಒಬ್ಬರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಬಿಗ್ ಬಾಸ್ ತ್ರಿವಿಕ್ರಮ್​ಗೆ ಸೂಚಿಸಿದ್ದಾರೆ.

ಇವರಲ್ಲಿ ತ್ರಿವಿಕ್ರಮ್ ಅವರು ಭವ್ಯಾ ಗೌಡ ಅವರನ್ನು ತನ್ನ ಜೋಡಿಯಾಗಿ ಆಯ್ಕೆ ಮಾಡಿದ್ದಾರೆ. ನಮ್ಮಿಬ್ಬರ ಬಾಂಡಿಂಗ್ ಚೆನ್ನಾಗಿದೆ, ಇಬ್ಬರು ಜೊತೆಯಾಗಿ ಆಡಿದರೆ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ. ಹೀಗಾಗಿ ಭವ್ಯಾ ಅವರ ಜೋಡಿ ಸದಸ್ಯರಾಗಿದ್ದ ಉಗ್ರಂ ಮಂಜು ಈ ವಾರದ ಎಲ್ಲ ಟಾಸ್ಕ್​ನಿಂದ ಹೊರಬಿದ್ದಿದ್ದಾರೆ. ಅವರು ಉಸ್ತುವಾರಿ ವಹಿಸಬೇಕಾಗುತ್ತದೆ.

ಚೈತ್ರಾ-ಶಿಶಿರ್ ನಡುವೆ ಜಗಳ:

ನೀವು ನಿಮ್ಮ ಜೋಡಿ ಸದಸ್ಯನನ್ನ ಬಿಟ್ಟು ತ್ರಿವಿಕ್ರಮ್ ಜೊತೆ ಜೋಡಿಯಾಗಲು ಬಯಸುತ್ತೀರಾ? ಎಂಬ ಬಿಗ್ ಬಾಸ್‌ ಆಫರ್​ನ ಚೈತ್ರಾ ಕುಂದಾಪುರ ಒಪ್ಪಿಕೊಂಡುಬಿಟ್ಟಿದ್ದಾರೆ. ಚೈತ್ರಾ ನಿರ್ಧಾರ ಕೇಳಿ ಶಿಶಿರ್ ಶಾಕ್ ಆಗಿದ್ದಾರೆ. ಚೈತ್ರಾ ಮೇಲೆ ಕೆಂಡಾಮಂಡಲರಾಗಿದ್ದಾರೆ. ಕೂಗಾಡಿ ರಂಪಾಟ ಮಾಡಿದ್ದಾರೆ. ನೀವು ಮಾಡಿದ್ದು ಎಷ್ಟು ಸರಿ ಎಂದು ಚೈತ್ರಾರನ್ನು ಪ್ರಶ್ನೆ ಮಾಡಿದ್ದಾರೆ.

ನಾನೇನು ಕಡ್ಲೆಪುರಿ ತಿಂತಿದ್ನಾ ಇಷ್ಟು ದಿನ ಎಂದು ತಿಳಿಸಿದ್ದಾರೆ. ತ್ರಿವಿಕ್ರಮ್ ಅವರು ದೈಹಿಕವಾಗಿ ಮಾನಸಿಕವಾಗಿ ಬಹಳ ಗಟ್ಟಿಯಾಗಿದ್ದಾರೆ ಎಂದು ಚೈತ್ರಾ ತಮ್ಮ ಕಾರಣ ಒದಗಿಸಿದ್ದಾರೆ. ಮಾನಸಿಕ ಅನ್ನೋ ಕಾರಣ ಕೊಡ್ತಾರೆ, ಇಷ್ಟು ದಿನ ಮಾನಸಿಕ ಏನಾಗಿತ್ತು?, ನಾಮಿನೇಷನ್​ ಅಂತಾ ಬಂದಾಗ ಅಯ್ಯೋ ಅಮ್ಮಾ ಅಂತಾ ಹೇಳಿಬಿಡ್ತಾರೆ. 12 ವರ್ಷಗಳಿಂದ ನಟಿಸುತ್ತಾ ಬಂದಿರೋ ನಾವಲ್ಲ ಕಲಾವಿದರು. ಇಲ್ಲಿ ಇದ್ದಾರೆ ನೋಡಿ ನಿಜವಾದ ಆ್ಯಕ್ಟರ್​​ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

BBK 11: ಬಿಗ್ ಬಾಸ್ ಮನೆಯಲ್ಲಿ ಕೊರಗಜ್ಜನ ಪವಾಡ: ಚೈತ್ರಾಗೆ ಸಿಕ್ಕಿತು ಕಳೆದುಕೊಂಡಿದ್ದ ಉಂಗುರ