ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಸದ್ಯ 41ನೇ ದಿನಕ್ಕೆ ಕಾಳಿಟ್ಟಿದೆ. ಆರಂಭದಲ್ಲಿ ಬರೀ ಜಗಳಗಳಿಂದಲೇ ಕೂಡಿದ್ದ ದೊಡ್ಮನೆ ಕಳೆದ ಕೆಲವು ವಾರಗಳಿಂದ ಬದಲಾಗಿದ್ದು, ರೋಚಕತೆ ಸೃಷ್ಟಿಸುತ್ತಿದೆ. ಮನೆಯೊಳಗೆ ಟಾಸ್ಕ್ನ ಕಾವು ಏರುತ್ತಿದ್ದು, ಎಲ್ಲರೂ ತಮ್ಮ ತಮ್ಮ ಮೈಂಡ್ ಗೇಮ್ ಶುರುಮಾಡಿಕೊಂಡಿದ್ದಾರೆ. ಸದ್ಯ ಮುಂದಿನ ವಾರದ ಮನೆಯ ನೂತನ ಕ್ಯಾಪ್ಟನ್ ಆಗಿ ತ್ರಿವಿಕ್ರಮ್ ಅವರು ಆಯ್ಕೆ ಆಗಿದ್ದಾರೆ.
ಕ್ಯಾಪ್ಟನ್ಸಿ ಆಯ್ಕೆಗೆ ಸೆಲೆಕ್ಟ್ ಆದ ಏಳು ಮಂದಿಯಲ್ಲಿ ತ್ರಿವಿಕ್ರಮ್ ಹಾಗೂ ಭವ್ಯಾ ಇಬ್ಬರು ಮಾತ್ರ ಕೊನೆಯಲ್ಲಿ ಉಳಿದುಕೊಂಡರು. ಆದರೆ, ಕ್ಯಾಪ್ಟನ್ ಆಯ್ಕೆ ವಿಚಾರದಲ್ಲಿ ಬಿಗ್ ಬಾಸ್ ಟ್ವಿಸ್ಟ್ ನೀಡಿದರು. ಭವ್ಯಾ ಮತ್ತು ತ್ರಿವಿಕ್ರಮ್ ಅವರ ಪೈಕಿ, ಮುಂದಿನ ಕ್ಯಾಪ್ಟನ್ ಆರಿಸಲು ಉಳಿದ ಮನೆಮಂದಿಗೆ ಟಾಸ್ಕ್ ನೀಡಿದರು. ಮನೆ ಮಂದಿ ಓಡಿ ಹೋಗಿ ಬ್ಲ್ಯಾಕ್ ಕಲರ್ ಬಾಟಲ್ ತೆಗೆದುಕೊಳ್ಳಬೇಕಿದೆ. ಕಲರ್ ಬಾಟಲ್ ತೆಗೆದುಕೊಂಡವರಿಗೆ, ಮುಂದಿನ ಕ್ಯಾಪ್ಟನ್ ಲಿಸ್ಟ್ನಿಂದ ಓರ್ವರನ್ನು ಹೊರಗಿಡುವ ಅವಕಾಶ ಸಿಗಲಿದೆ.
ಹೆಚ್ಚಿನವರು ಭವ್ಯಾ ಕ್ಯಾಪ್ಟನ್ ಆಗಲು ಸೂಕ್ತವಲ್ಲ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. 2 ಬಾರಿ ಮಂಜು, ಗೌತಮಿ, ಧರ್ಮ ಕೀರ್ತಿರಾಜ್ ಅವರು ಭವ್ಯಾ ಕ್ಯಾಪ್ಟನ್ ಆಗುವುದು ಬೇಡ ಎಂದು ಅವರ ಭಾವಚಿತ್ರಕ್ಕೆ ಮಸಿ ಬಳೆದಿದ್ದರು. ಅದರಂತೆ ಭವ್ಯಾ ಅವರ ಬೋರ್ಡ್ಗೆ ಅತಿ ಹೆಚ್ಚು ಮಸಿ ಬೆಳೆದಿದ್ದರಿಂದ ಅವರು ಔಟ್ ಆದರು. ಬಳಿಕ ತ್ರಿವಿಕ್ರಮ್ ಕ್ಯಾಪ್ಟನ್ ಆಗಿ ಸೆಲೆಕ್ಟ್ ಆಗಿದ್ದಾರೆ.
ಕಣ್ಣೀರಿಟ್ಟ ಭವ್ಯಾ ಗೌಡ:
ಇತರೆ ಸ್ಪರ್ಧಿಗಳು ನೀಡಿದ ಕಾರಣಗಳನ್ನು ಒಪ್ಪಿಕೊಳ್ಳದ ಭವ್ಯಾ ಗೌಡ ಬೇಸರದಲ್ಲಿ ಕಣ್ಣೀರಿಟ್ಟಿದ್ದಾರೆ. ಮುಖ್ಯವಾಗಿ ಗೌತಮಿ ಕೊಟ್ಟ ಕಾರಣ ಭವ್ಯಾಗೆ ನೋವು ತರಿಸಿದೆ. ಭವ್ಯಾ ನನಗೆ ಬಹಳಷ್ಟು ಜಾಗದಲ್ಲಿ ಪಕ್ಷಪಾತ ಮಾಡುವವರಾಗಿ ಕಾಣಿಸಿದ್ದಾರೆ. ಅವರು ಆಡಿರುವ ಕೆಲವೊಂದು ಪದಗಳನ್ನು ನನಗೆ ತಡೆದುಕೊಳ್ಳುವ ಶಕ್ತಿ ಇಲ್ಲ ಎಂದು ಗೌತಮಿ ಹೇಳಿದ್ದಾರೆ. ಈ ಆ್ಯಕ್ಟಿವಿಟಿ ಮುಗಿದ ಬಳಿಕ ಭವ್ಯಾ ಅವರು, ತಡೆದುಕೊಳ್ಳುವ ಶಕ್ತಿ ಇಲ್ಲ ಅಂದಮೇಲೆ ಈ ಮನೆ ಯಾಕೆ ಬೇಕು? ಇವಳತ್ರ ಎಂತಹ ಪಾಸಿಟಿವಿಟಿ ಇದೆ? ನಾನು ಎಲ್ಲರಿಗಿಂತ ಬೆಟರ್ ಆಗಿದ್ದೀನಿ. ಅವರಿಗವರೇ ಸುಪೀರಿಯರ್ ಅಂದ್ಕೊಂಡ್ರೆ, ನಾನು ಡಬಲ್ ಸುಪೀರಿಯರ್ ಎಂದು ಹೇಳಿದ್ದಾರೆ.
BBK 11: ಸುರೇಶ್ ವಿರುದ್ಧ ತಿರುಗಿಬಿದ್ದ ಸ್ತ್ರೀಯರು: ನೇರವಾಗಿ ಜೈಲಿಗೆ ಹೋದ ಗೋಲ್ಡ್