Wednesday, 4th December 2024

Nitin Chauhaan: ಕ್ರೈಂ ಪೆಟ್ರೋಲ್‌, ಸ್ಪ್ಲಿಟ್ಸ್‌ವಿಲ್ಲಾ ಖ್ಯಾತಿಯ ನಿತಿನ್‌ ಚೌಹಾಣ್‌ ನಿಗೂಢ ಸಾವು; ಆತ್ಮಹತ್ಯೆ ಶಂಕೆ

Nitin Chauhaan

ಮುಂಬೈ: ಜನಪ್ರಿಯ ಟಿವಿ ಶೋ ಕ್ರೈಂ ಪೆಟ್ರೋಲ್‌ ಖ್ಯಾತಿಯ ಹಿಂದಿ ಕಿರುತೆರೆ ನಟ ನಿತಿನ್ ಚೌಹಾನ್ (Nitin Chauhaan) ಗುರುವಾರ ಮುಂಬೈನಲ್ಲಿ ನಿಧನರಾದರು. ಅವರಿಗೆ 35 ವರ್ಷ ವಯಸ್ಸಾಗಿತ್ತು. ಇನ್ನು ಅವರ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಅವರ ಹಠಾತ್‌ ಸಾವಿನ ಸುದ್ದಿಯಿಂದಾಗಿ ಅಭಿಮಾನಿಗಳು ದುಃಖಿತರಾಗಿದ್ದಾರೆ. ನಿತಿನ್‌ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.

ಕಾರಣಾಂತರಗಳಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಸಾವಿಗೆ ನಿಖರವಾದ ಕಾರಣ ತಿಳಿದು ಬರಬೇಕಾಗಿದೆ. ನಿತಿನ್ ಮೂಲತಃ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ನಿವಾಸಿಯಾಗಿದ್ದು ಮುಂಬೈನಲ್ಲಿ ನೆಲೆಸಿದ್ದರು. ಕಿರುತೆರೆಯಲ್ಲಿ ಹಾಗೂ ಹಲವಾರು ರಿಯಾಲಿಟಿ ಶೋಗಳ ಮೂಲಕ ಹೆಸರುವಾಸಿಯಾಗಿದ್ದರು. ಎಂಟಿವಿಯ ಸ್ಪ್ಲಿಟ್ಸ್‌ವಿಲ್ಲಾ 5, ಜಿಂದಗಿ ಡಾಟ್ ಕಾಮ್, ಕ್ರೈಮ್ ಪೆಟ್ರೋಲ್, ಫ್ರೆಂಡ್ಸ್‌ ಸೀರಿಯಲ್​ಗಳಲ್ಲಿ ಅಭಿನಯಿಸಿದ್ದರು. ದಾದಾಗಿರಿ 2 ರಿಯಾಲಿಟಿ ಶೋ ಬಳಿಕ ಸಾಕಷ್ಟು ಪ್ರಸಿದ್ಧಿ ಗಳಿಸಿದ್ದ ನಿತಿನ್ ತೇರಾ ಯಾರ್ ಹೂನ್ ಮೈನ್’ನಲ್ಲಿ ಕೊನೆಯ ಬಾರಿಗೆ ನಟಿಸಿದ್ದರು.

ನಿತಿನ್ ನಿಧನದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಹ ನಟ ಸುದೀಪ್ ಸಾಹಿರ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರೆಸ್ಟ್‌ ಇನ್‌ ಪೀಸ್‌ ಬಡಿ ಎಂದು ಬರೆದು ಕೊಂಡಿದ್ದಾರೆ.

ಅವರ ಜೊತೆ ನಟಿಸಿದ್ದ ಮತ್ತೊಬ್ಬ ಸಹ ನಟಿ ಅವರ ಸಾವಿಗೆ ಸಂತಾಪ ಸೂಚಿಸಿದ್ದು, ಈ ಸುದ್ದಿ ತಿಳಿದು ನಾನು ನಿಜವಾಗಿಯೂ ಆಘಾತಕ್ಕೊಳಗಾಗಿದ್ದೇನೆ ಮತ್ತು ದುಃಖಿತನಾಗಿದ್ದೇನೆ ಎಂದು ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಆತ್ಮಹತ್ಯೆಗೆ ಶರಣಾದ ಕಿರುತೆರೆಯ ಕಲಾವಿದರು:

ಹಿಂದಿ ಕಿರುತೆಯ ಹಲವು ಮಂದಿ ತಮ್ಮ‌ ಸಣ್ಣ ವಯಸ್ಸಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಟಿ ತುನಿಶಾ ಶರ್ಮಾ ತಮ್ಮ 21ನೇ ವಯಸ್ಸಿನಲ್ಲಿ ‘ಅಲಿ ಬಾಬಾ: ದಸ್ತಾನ್-ಎ-ಕಾಬೂಲ್’ ಧಾರಾವಾಹಿಯ ಸೆಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸೀರಿಯಲ್‌ ಸೆಟ್‌ನಲ್ಲಿರುವ ವಾಶ್‌ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ದೇಹ ಪತ್ತೆಯಾಗಿತ್ತು. ಹಲವು ಹಿಟ್‌ ಸೀರಿಯಲ್‌ನಲ್ಲಿ ನಟಿಸಿದ್ದ ತುನಿಶಾ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.

ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಸೀರಿಯಲ್‌ನಲ್ಲಿ ನಟಿಸಿದ್ದ ನಟಿ ವೈಶಾಲಿ ಠಕ್ಕರ್‌ ಆತ್ಮಹತ್ಯೆ ಮಾಡಿಕೊಂಡಿದ್ದರು. ಮುಂಬೈನಲ್ಲಿರುವ ನಿವಾಸದಲ್ಲಿ ಆವರ ಶವ ಪತ್ತೆಯಾಗಿತ್ತು. ನೆರೆಹೊರೆಯವರ ಜೊತೆ ಜಗಳ ಮಾಡಿಕೊಂಡು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಝಲಕ್ ದಿಖ್ಲಾ ಜಾ ಖ್ಯಾತಿಯ ಕುಶಾಲ್ ಪಂಜಾಬಿ 2019 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಹಲವಾರು ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. 42 ವರ್ಷ ವಯಸ್ಸಿನ ನಟ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿತ್ತು.

ಇದನ್ನೂ ಓದಿ: Vikas Sethi: ಮಲಗಿದ್ದಲ್ಲೇ ಹಾರ್ಟ್‌ ಅಟ್ಯಾಕ್‌; ಖ್ಯಾತ ಕಿರುತೆರೆ ನಟ ವಿಧಿವಶ

ಹಿಂದಿ ಕಿರುತೆರೆಯ ಹಿಟ್‌ ಸೀರಿಯಲ್‌ ಬಾಲಿಕಾ ವಧು ನಟಿ ಪ್ರತ್ಯೂಷಾ ಬ್ಯಾನರ್ಜಿ 2016 ರಲ್ಲಿ ಮುಂಬೈನ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಆಕೆಯ ಪೋಷಕರು ಆಕೆಯ ಗೆಳೆಯನೇ ಆಕೆಯ ಆತ್ಮಹತ್ಯೆಗೆ ಕಾರಣ ಆತ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಎಂದು ಆರೋಪಿಸಿದ್ದರು.