Monday, 25th November 2024

BBK 11: ಬಿಗ್ ಬಾಸ್ ಮನೆಯಲ್ಲಿ ಉಗ್ರಾವತಾರ ತಾಳಿದ ಮಂಜು: ರಾಜನ ಅಟ್ಟಹಾಸಕ್ಕೆ ಕಂಗಾಲಾದ ಸ್ಪರ್ಧಿಗಳು

Ugramm Manju King

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಒಂಬತ್ತನೆ ವಾರಕ್ಕೆ ಕಾಲಿಟ್ಟಿದೆ. ಈಗಾಗಲೇ ಸುದೀಪ್ ಅವರು ಈ ವಾರದಿಂದ ಟಾಸ್ಕ್ ಮತ್ತಷ್ಟು ಕಠಿಣವಾಗಲಿದೆ ಎಂದು ಹೇಳಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಶೋ ಮತ್ತಷ್ಟು ರೋಚಕತೆ ಸೃಷ್ಟಿಸಲಿದೆ ಎಂಬುದು ಖಚಿತವಾಗಿದೆ. ಇದಕ್ಕೆ ತಕ್ಕಂತೆ ಈ ವಾರ ಉಗ್ರಂ ಮಂಜು ಮನೆಯ ಕ್ಯಾಪ್ಟನ್ ಆಗಿದ್ದಾರೆ. ಸದ್ಯ ಬಿಗ್ ಬಾಸ್ ಇವರ ಕ್ಯಾರೆಕ್ಟರ್​ಗೆ ಹೊಂದುವ ವಿಶೇಷ ಟಾಸ್ಕ್ ಈ ವಾರ ಮನೆ ಮಂದಿಗೆ ನೀಡಿದ್ದಾರೆ.

ಬಿಗ್​​​ ಬಾಸ್ ಮನೆ ಇದೀಗ ಬಿಗ್ ​ಬಾಸ್ ಸಾಮ್ರಾಜ್ಯವಾಗಿ ಬದಲಾಗಿದೆ. ಸಾಮ್ರಾಜ್ಯದಲ್ಲಿ ಉಗ್ರಂ ಮಂಜು ಅವರ ಉಗ್ರಾವತಾರದ ದರ್ಬಾರ್ ಭರ್ಜರಿ ಆಗಿ ನಡೆಯುತ್ತಿದೆ. ಇವರ ಆರ್ಭಟಕ್ಕೆ ಮನೆಮಂದಿ ಕಂಗಾಲಾಗಿದ್ದಾರೆ. ಸಾಮ್ರಾಜ್ಯದಲ್ಲೂ ಹೋರಾಟ ಎಂದ ಚೈತ್ರಾ ಕುಂದಾಪುರ ಬಾಯಿಗೆ ಮಂಜು ಅವರು ಆಲೂಗೆಡ್ಡೆ ತುರುಕಿಸಿದ್ದಾರೆ. ಉಸಿರು ಆಚೆ ಬರಬಾರ್ದು ಅಂತ ಮಹಾರಾಜರ ಕಟ್ಟಪ್ಪಣೆ ಆಗಿದೆ. ಮಾತು ಮೀರಿದವರಿಗೆ 50 ಬಸ್ಕಿ ಹೊಡೆಸಿದ್ದಾರೆ ಮಂಜು.

ಇವೆಲ್ಲದರ ಮಧ್ಯೆ ಯಾರಿಗೂ ಮಧ್ಯಾಹ್ನದ ಉಪಹಾರ ಇಲ್ಲ ಎಂದು ರಾಜ ಮಂಜು ಆಜ್ಞೆ ಮಾಡಿದ್ದಾರೆ. ಧನರಾಜ್ ಅವರು ರಾಜನ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಆಪ್ತ ಗೆಳೆಯ ಹನುಮಂತನ ಬಳಿ ಗಾರ್ಡನ್ ಏರಿಯಾಗೆ ಬಂದು ರಾಜನ ವಿರುದ್ಧ ಮಸಲತ್ತು ಮಾಡಿದ್ದಾರೆ. ಏನ್ ಅನ್ಕೊಂಡಿದ್ದಾರೆ? ಅವರು ಹೇಳಿದ್ದೆಲ್ಲ ಅನಿಸಿಕೊಳ್ಳೋಕೆ? ಎಂದು ಪ್ರಶ್ನೆ ಮಾಡಿದ್ದಾರೆ. ಒಟ್ಟಾರೆ ರಾಜಾ ಉಗ್ರಂ ಮಂಜು ಅಟ್ಟಹಾಸಕ್ಕೆ ಮನೆಯಲ್ಲಿ ಹೊಸ ಹಲ್‌ಚಲ್‌ ಎದ್ದಿದೆ. ಇದರಿಂದ ಮನೆಯಲ್ಲಿ ಎಲ್ಲವೂ ಏರು-ಪೇರಾಗಿದೆ.

ಧರ್ಮಾ ಎಲಿಮಿನೇಟ್:

ಎಂಟನೇ ವಾರ ಮನೆಯಿಂದ ಹೊರಹೋಗಲು ಏಳು ಸದಸ್ಯರು ನಾಮಿನೇಟ್ ಆಗಿದ್ದರು. ಚೈತ್ರಾ ಕುಂದಾಪುರ, ಉಗ್ರಂ ಮಂಜು, ತ್ರಿವಿಕ್ರಮ್, ಮೋಕ್ಷಿತಾ ಪೈ, ಗೌತಮಿ ಜಾಧವ್, ಧರ್ಮ ಕೀರ್ತಿರಾಜ್‌ ಹಾಗೂ ಕ್ಯಾಪ್ಟನ್ ಭವ್ಯಾ ಗೌಡಾ ಅವರ ನೇರ ನಾಮಿನೇಷನ್​ನಿಂದ ಹನುಮಂತ ಲಮಾಣಿ ನಾಮಿನೇಟ್ ಮಾಡಿದ್ದರು. ಈ ಪೈಕಿ ಅಚ್ಚರಿ ಎಂಬಂತೆ ಶರ್ಮಾ ಕೀರ್ತಿರಾಜ್ ತಮ್ಮ ಪ್ರಯಾಣವನ್ನು ಅಂತ್ಯಗೊಳಿಸಿದ್ದಾರೆ.

BBK 11: ನಿಮ್ಮ ರೊಮ್ಯಾನ್ಸ್ ಹೆಚ್ಚಾಗಿದೆ: ಶಿಶಿರ್-ಐಶ್ವರ್ಯಾಗೆ ನೇರವಾಗಿ ಚಾಟಿ ಬೀಸಿದ ಸುದೀಪ್