ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಒಂಬತ್ತನೇ ವಾರಕ್ಕೆ ಕಾಲಿಟ್ಟಿದೆ. ಎಂಟನೇ ವಾರ ಮನೆಯಿಂದ ಧರ್ಮಾ ಕೀರ್ತಿರಾಜ್ ಎಲಿಮಿನೇಟ್ ಆಗಿ ಆಚೆ ಬಂದಿದ್ದಾರೆ. ಇಷ್ಟು ದಿನ ಬಿಗ್ ಬಾಸ್ನಲ್ಲಿ ಆಪ್ತರಾಗಿದ್ದವರ ಮಧ್ಯೆ ಒಂದೊಂದೆ ಬಿರುಕು ಮೂಡಲು ಶುರುವಾಗಿದೆ. ಇದೀಗ ಉಗ್ರಂ ಮಂಜು ಹಾಗೂ ಗೌತಮಿ ಜಾಧವ್ ಮಧ್ಯೆ ಕೂಡ ನಡೆದಿದೆ. ಇದಕ್ಕೆ ಕಾರಣವಾಗಿದ್ದು ಸೂಪರ್ ಸಂಡೇ ವಿಥ್ ಸುದೀಪ್ ಎಪಿಸೋಡ್ನಲ್ಲಿ ಕಿಚ್ಚ ಕೇಳಿದ ಒಂದು ಪ್ರಶ್ನೆ.
ಸುದೀಪ್ ಅವರು ಹೇಳಿದ ಒಂದೇ ಒಂದು ಮಾತಿನಿಂದ ಇಬ್ಬರ ನಡುವೆ ಅಂತರ ಉಂಟಾಗಿದೆ. ಗೌತಮಿ ಆಡಿಸೋ ಗೊಂಬೆ ಆದ್ರಾ ಉಗ್ರಂ ಮಂಜು? ಎಂಬ ಮನೆಯವರ ಬಳಿ ಸುದೀಪ್ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಗೋಲ್ಡ್ ಸುರೇಶ್ ಅವರು ಮಾತನಾಡಿ, ಗೌತಮಿ ಅವರು ಹಿಂಗೆ ಮಾಡಬೇಡ, ಹಾಗೆ ಅಂದರೆ ಅದನ್ನ ಕೇಳುತ್ತಾರೆ. ಇನ್ನು ಅದಕ್ಕೆ ಇವರೂ ಕೂಡ ಒಕೆ ಮಂಜಣ್ಣ ಅಂತಾರೆ ಎಂದಿದ್ದಾರೆ. ಅತ್ತ ಮೋಕ್ಷಿತಾ ಅವರು, ಮಂಜಣ್ಣನಿಗೆ ತಲೇಲಿ ಬೇರೆಯೇ ಇರತ್ತೆ. ಗೌತಮಿ ಅವರು ಹೇಳಿದಾಗ ಅವರೂ ಅದನ್ನ ಒಪ್ಪಿಕೊಳ್ಳುತ್ತಾರೆ.
ಇದಾದ ಬಳಿಕ ಈ ಮನೆಯಲ್ಲಿ ಯಾರನ್ನು ನೀವು ಮೆಚ್ಚಿಸಬೇಕು ಎಂದು ಸುದೀಪ್ ಅವರು ಪ್ರತಿಯೊಬ್ಬರ ಬಳಿ ಕೇಳಿದ್ದಾರೆ. ಇದಕ್ಕೆ ಎಲ್ಲರೂ ಯಾರೂ ಇಲ್ಲ ಎಂದಿದ್ದಾರೆ. ಆದರೆ ಮಂಜು ಅವರು ಗೌತಮಿಯನ್ನು ಮೆಚ್ಚಿಸಬೇಕು ಅಂತ ಹೇಳಿದ್ದಾರೆ. ಮಂಜು ಅವರ ಈ ಉತ್ತರಕ್ಕೆ ಕಿಚ್ಚ ಕೆಂಡಾಮಂಡಲರಾಗಿದ್ದಾರೆ.
ನೀವು ಮೆಚ್ಚಿಸಿ ಗೌತಮಿನ. ಅಲ್ಲ, ಅದೆಲ್ಲ ಬೇಡ, ನೀವ ಮೆಚ್ಚಿಸಿ ಎಂದು ಸುದೀಪ್ ಅವರು ಕೋಪದಲ್ಲಿ ಹೇಳಿದ್ದಾರೆ. ಈ ಎಪಿಸೋಡ್ ಮುಗಿದ ಬಳಿಕ ಜೊತೆಯಾಗಿ ಕೂತಾಗ ಗೌತಮಿ ಅವರು ಕಣ್ಣೀರಿಡುತ್ತಾ ಮಂಜು ಬಳಿ ನೀವು ದಯವಿಟ್ಟು ನನ್ನನ್ನು ಮೆಚ್ಚಿಸೋ ಪ್ರಯತ್ನ ಮಾಡಬೇಡಿ ಎಂದು ಹೇಳಿ ಎದ್ದು ಹೋಗಿದ್ದಾರೆ. ಇಲ್ಲಿಗೆ ಇವರಿಬ್ಬರ ಫ್ರೆಂಡ್ಶಿಪ್ ಕಟ್ ಆಯಿತಾ ಎಂಬ ಅನುಮಾನ ವ್ಯಕ್ತವಾಗಿದೆ.
ಧರ್ಮಾ ಕೀರ್ತಿರಾಜ್ ಔಟ್:
ಎಂಟನೇ ವಾರ ಮನೆಯಿಂದ ಹೊರಹೋಗಲು ಏಳು ಸದಸ್ಯರು ನಾಮಿನೇಟ್ ಆಗಿದ್ದರು. ಚೈತ್ರಾ ಕುಂದಾಪುರ, ಉಗ್ರಂ ಮಂಜು, ತ್ರಿವಿಕ್ರಮ್, ಮೋಕ್ಷಿತಾ ಪೈ, ಗೌತಮಿ ಜಾಧವ್, ಧರ್ಮ ಕೀರ್ತಿರಾಜ್ ಹಾಗೂ ಕ್ಯಾಪ್ಟನ್ ಭವ್ಯಾ ಗೌಡಾ ಅವರ ನೇರ ನಾಮಿನೇಷನ್ನಿಂದ ಹನುಮಂತ ಲಮಾಣಿ ನಾಮಿನೇಟ್ ಮಾಡಿದ್ದರು. ಈ ಪೈಕಿ ಅಚ್ಚರಿ ಎಂಬಂತೆ ಶರ್ಮಾ ಕೀರ್ತಿರಾಜ್ ತಮ್ಮ ಪ್ರಯಾಣವನ್ನು ಅಂತ್ಯಗೊಳಿಸಿದ್ದಾರೆ.
BBK 11: ಬಿಗ್ ಬಾಸ್ ಮನೆಯಲ್ಲಿ ಉಗ್ರಾವತಾರ ತಾಳಿದ ಮಂಜು: ರಾಜನ ಅಟ್ಟಹಾಸಕ್ಕೆ ಕಂಗಾಲಾದ ಸ್ಪರ್ಧಿಗಳು