ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮಹತ್ವದ ಘಟ್ಟಕ್ಕೆ ಬಂದು ನಿಂತಿದೆ. ಟಾಸ್ಕ್ಗಳು ಕಠಿಣವಾಗುತ್ತಾ ಸಾಗುತ್ತಿದ್ದು, ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಕಳೆದ ವಾರ ನೋ ಎಲಿಮಿನೇಷನ್ ವೀಕ್ ಆಗಿತ್ತು. ಹೀಗಾಗಿ ಈ ವಾರದ ಮಧ್ಯೆ ಶಾಕಿಂಗ್ ಎಲಿಮಿನೇಷನ್ ಇದೆಯೇ ಎಂಬುದು ನೋಡಬೇಕಿದೆ. ಇದರ ನಡುವೆ ಮನೆಯೊಳಗೆ ಸೀನಿಯರ್ ಸ್ಪರ್ಧಿಗಳ ಎಂಟ್ರಿ ಆಗಿದೆ. ಕಳೆದ ಸೀಸನ್ 10ರ ಕೆಲ ಕಂಟೆಸ್ಟೆಂಟ್ಗಳು ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದಾರೆ.
ಕಳೆದ ಸೀಸನ್‌ನ ಡ್ರೋನ್ ಪ್ರತಾಪ್, ತನಿಷಾ ಕುಪ್ಪಂಡ, ತುಕಾಲಿ ಸಂತೋಷ್, ವರ್ತೂರು ಸಂತೋಷ್ ಆಗಮಿಸಿ ಸ್ಪರ್ಧಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಈ ನಡುವೆ ನಾಮಿನೇಷನ್ ಪ್ರಕ್ರಿಯೆ ಆರಂಭವಾಗಿದೆ. ಉಗ್ರಂ ಮಂಜು- ಶಿಶಿರ್ ನಡುವೆ ಮಾತಿನ ಸಮರ ಜೋರಾಗಿ ನಡೆದಿದೆ. ಮನೆಗೆ ಅತಿಥಿ ಎದುರೇ ಕಿತ್ತಾಡಿಕೊಂಡಿದ್ದಾರೆ. ಇವರಿಬ್ಬರ ಜಗಳ ನೋಡಿ ಡ್ರೋನ್ ಪ್ರತಾಪ್ಗೆ ಟೆನ್ಶನ್ ಆದಂತಿದೆ.
ಶಿಶಿರ್ ಅವರನ್ನ ನಾಮಿನೇಟ್ ಮಾಡಿರುವ ಮಂಜು ಅವರು, ಶಿಶಿರ್ ನೀವು ಸುಮಾರಷ್ಟು ವಿಷಯಗಳಲ್ಲಿ ಸ್ಟ್ಯಾಂಡ್ ತೆಗೆದುಕೊಳ್ಳಬಹುದಿತ್ತು, ಆದರೆ ಆ ರೀತಿ ಮಾಡಲಿಲ್ಲ ಎಂದಿದ್ದಾರೆ. ಇದರಿಂದ ಕೆರಳಿರುವ ಶಿಶಿರ್, ನಿಮಗೆ ಇಷ್ಟ ಆಗುವಂತ ನಿರ್ಧಾರಗಳನ್ನ ನಾನು ಯಾಕೆ ತೆಗೆದುಕೊಳ್ಳಲಿ. ಮನೆಯಲ್ಲಿ ನೀವೇನು ಮಾಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ನೀವೇನು ಮಾಡಿದ್ದೀರಾ. ನನಗೂ ನಿನಗೂ ಹೋಲಿಕೆಯೇ ಇಲ್ಲ ಎಂದು ಮಂಜು ಹೇಳಿದ್ದಾರೆ. ನಿನಗೆ ಹೋಲಿಕೆ ಮಾಡಿಕೊಂಡು ಕೂತುಕೊಳ್ಳಲು ನಾನು ಇಲ್ಲಿಗೆ ಬಂದಿಲ್ಲ. ನಿಮ್ಮಿಂದ ನಾನು ನೋಡಿ ಕಲಿತುಕೊಳ್ಳಬೇಕಾ ಎಂದು ಇಬ್ಬರ ನಡುವಣ ಜಗಳ ತಾರಕಕ್ಕೇರಿದೆ. ಮಂಜು, ಶಿಶಿರ್ ಅವರ ಜಗಳ ಕಂಡು ಪ್ರತಾಪ್ ಅವರು ಮಾತುಗಳ ಮೇಲೆ ಹಿಡಿತ ಇರಬೇಕು ಎಂದು ಹೇಳಿದ್ದಾರೆ.
ನಾಮಿನೇಷನ್ ಪಾಸ್:
ಪ್ರತಾಪ್ ಅವರು ಮನೆಯ ಎಲ್ಲಾ ಕಂಟೆಸ್ಟೆಂಟ್ ಗಳಿಗೂ ನಾಮಿನೇಷನ್ ಪಾಸ್ ಸಿಗುವ ಒಂದು ಟಾಸ್ಕ್ ಅನ್ನ ಆಡಿಸಿದ್ದಾರೆ. ಇದಕ್ಕೆ ತ್ರಿವಿಕ್ರಮ್, ಶಿಶಿರ್ ಹಾಗೂ ರಜತ್ ಅವರನ್ನು ಆಯ್ಕೆ ಮಾಡುತ್ತಾರೆ. ಮನೆಯ ಲಿವಿಂಗ್ ಏರಿಯಾದ ತುಂಬಾ ಬಲೂನ್ಗಳನ್ನು ಹಾಕಲಾಗಿರುತ್ತದೆ, ಆ ಬಲೂನ್ಗಳಲ್ಲಿ ಎರಡು ನಾಮಿನೇಷನ್ ಪಾಸ್ ಗಳನ್ನು ಕೂಡ ಇಡಲಾಗಿದೆ.
BBK 11: ಬಿಗ್ ಬಾಸ್ನ ಪ್ರಮುಖ ನಿಯಮವನ್ನೇ ಮುರಿದ ಕ್ಯಾಪ್ಟನ್ ಗೌತಮಿ: ಏನಾಯಿತು ನೋಡಿ