ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಸದ್ಯ ಫ್ಯಾಮಿಲಿ ವೀಕ್ ನಡೆಯುತ್ತಿದೆ. ಇನ್ನೇನು ಕೆಲವೇ ವಾರಗಳಲ್ಲಿ ಫಿನಾಲೆ ನಡೆಯಲಿದ್ದು, ಇದಕ್ಕೂ ಮುನ್ನ ಇರುವ 9 ಸ್ಪರ್ಧಿಗಳಿಗೆ ಜೋಶ್ ಬರಲು ಕುಟುಂಬದವರನ್ನು ಮನೆಯೊಳಗೆ ಕರೆಸಲಾಗಿದೆ. ಸ್ಪರ್ಧಿಗಳ ಅಮ್ಮಂದಿರು, ಅಪ್ಪಂದಿರು ಮಡದಿ, ಮಕ್ಕಳು ಬಿಗ್ ಬಾಸ್ಗೆ ಬಂದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿರುವ 9 ಸ್ಪರ್ಧಿಗಳ ಕುಟುಂಬದವರು ಆಗಮಿಸುತ್ತಿದ್ದಾರೆ. ಮಂಗಳವಾರ ಭವ್ಯಾ ಗೌಡ ಅವರ ಫ್ಯಾಮಿಲಿ, ರಜತ್ ಕಿಶನ್ ಅವರ ಮಡದಿ ಹಾಗು ಮಕ್ಕಳು ಬಂದಿದ್ದರು. ಜೊತೆಗೆ ತ್ರಿವಿಕ್ರಮ್ ಅವರ ತಾಯಿ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದಾರೆ. ಇಂದು ಮೋಕ್ಷಿತಾ ಪೈ ಮತ್ತು ಉಗ್ರಂ ಮಂಜು ಅವರ ಕುಟುಂಬ ದೊಡ್ಮನೆಯೊಳಗೆ ಆಗಮಿಸಿದೆ.
ಉಗ್ರಂ ಮಂಜು ಅವರ ತಂದೆ ರಾಮೇ ಗೌಡ ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ತಂದೆ ಬರುತ್ತಿದ್ದಂತೆ ಮಂಜು ಕಣ್ಣಿರಿಟ್ಟಿದ್ದಾರೆ. ಯಾಕೋ ಅಳೋದು, ಅಳಬಾರದು ಲೇ. ತಂದೆ ನಗುತ್ತಾ, ನಗುತ್ತಾ ಇದ್ದೇನೆ. ಏನಕ್ಕೆ ಅಳೋದಿಲ್ಲಿ. ಹಳೆ ಮಂಜು ಬಿಟ್ಟು ಹೊಸ ಮಂಜು ರೀತಿ ಕಾಣ್ತಾ ಇದ್ದೀಯಾ ಎಂದು ಮಂಜು ಅವರ ತಂದೆ ಮಗನ ಹೆಗಲ ಮೇಲೆ ಕೈಹಾಕಿ ಹೇಳಿದ್ದಾರೆ.
ಮಂಜು ಅವರ ತಂದೆ ಮನೆಯವರ ಜೊತೆಗೆ ಖುಷಿ ಖುಷಿಯಲ್ಲಿ ಮಾತಾಡಿದ್ದಾರೆ. ಚೈತ್ರಾ ಕುಂದಾಪುರ ಬಗ್ಗೆ ತಮಾಷೆ ಕೂಡ ಮಾಡಿದ್ದು, ತನ್ನ ಕಾಲಿಗೆ ಬೀಳಲು ಬಂದಾಗ, ಚೈತ್ರಾ ಒಂದು ರೀತಿ ಬಿರುಗಾಳಿ ಇದ್ದಂಗೆ ಅಲ್ಲೇ ಇರು ಅಲ್ಲೇ ಇರು ಎಂದು ತಮಾಷೆ ಮಾಡಿದ್ದಾರೆ.
ಅತ್ತ ಮೋಕ್ಷಿತಾ ಪೈ ಕುಟುಂಬ ಕೂಡ ಬಂದಿದೆ. ಅಪ್ಪ-ಅಮ್ಮ ಹಾಗೂ ವಿಶೇಷಚೇತನ ತಮ್ಮ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಈ ಕುಟುಂಬವನ್ನು ಇಡೀ ಬಿಗ್ ಬಾಸ್ ಮನೆಯ ಸದಸ್ಯರು ಕಣ್ಣೀರಿಟ್ಟಿದ್ದಾರೆ. ಮೋಕ್ಷಿತಾ ಅವರ ತಮ್ಮ ವಿಶೇಷ ಚೇತನ. ಮೋಕ್ಷಿತಾ ಅವರು ತಮ್ಮನ ಅಷ್ಟು ದಿನ ಬಿಟ್ಟಿದ್ದೇ ಇಲ್ಲ. ಆದರೆ, ಬಿಗ್ ಬಾಸ್‌ಗಾಗಿ ಅವರು ಕುಟುಂಬವನ್ನು ಮೂರು ತಿಂಗಳು ಬಿಟ್ಟಿದ್ದರು. ಈ ಕಾರಣಕ್ಕೆ ಮೋಕ್ಷಿತಾ ಅವರನ್ನು ತಮ್ಮ ಮರೆತೇಬಿಟ್ಟಿದ್ದಾರೆ. ಈ ದೃಶ್ಯವನ್ನು ಕಂಡು ಗೌತಮಿ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
BBK 11: ಬಿಗ್ ಬಾಸ್ ಮನೆಗೆ ಬಂದ್ರು ಮೋಕ್ಷಿತಾ ಫ್ಯಾಮಿಲಿ: ವಿಶೇಷಚೇತನ ತಮ್ಮನನ್ನು ಕಂಡು ಮೋಕ್ಷಿ ಕಣ್ಣೀರು