ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಉಗ್ರಂ ಮಂಜು ತುಂಬಾ ಡಿಫರೆಂಟ್ ಕ್ಯಾರೆಕ್ಟರ್ ಇರುವ ಓರ್ವ ಸ್ಪರ್ಧಿ. ಇತರರಿಗಿಂತ ಭಿನ್ನವಾಗಿ ಯೋಚಿಸುವ ಇವರು ಬರ ಬರುತ್ತಾ ಕಳೆದು ಹೋಗುತ್ತಿದ್ದಾರೆ. ಆರಂಭದಲ್ಲಿ ತನ್ನದೇ ಆದ ಗೇಮ್ ಸ್ಟ್ರಾಟರ್ಜಿ ಮೂಲಕ ಗುರುತಿಸಿಕೊಂಡಿದ್ದ ಮಂಜು ಈಗೀಗ ಸಂಬಂಧಕ್ಕೆ ಬೆಲೆ ಕೊಟ್ಟು ಅದರಲ್ಲೇ ಕಳೆದು ಹೋಗುತ್ತಿದ್ದಾರೆ. ಆಟದ ಲಯ ಕೂಡ ಕಳೆದುಕೊಂಡಂತಿದೆ. ಇದರ ಪರಿಣಾಮ ಈ ವಾರದ ಕಳಪೆ ಪಟ್ಟ ಪಡೆದುಕೊಂಡು ಮಂಜು ಅವರು ಜೈಲು ಸೇರಿದ್ದಾರೆ.
ಈ ವಾರ ಎಲ್ಲ ಸ್ಪರ್ಧಿಗಳಿಗೆ ಬಹಳ ಪ್ರಮುಖವಾದ ವಾರ ಆಗಿತ್ತು. ಯಾಕೆಂದರೆ ಈ ವಾರ ನೀಡಿದ ಸರಣಿ ಟಾಸ್ಕ್ನಲ್ಲಿ ಉತ್ತಮ ಪ್ರದರ್ಶನ ನೀಡಿ ಗೆದ್ದ ಸ್ಪರ್ಧಿಗೆ ಟಿಕೆಟ್ ಟು ಫಿನಾಲೆ ಪಾಸ್ ಸಿಗಲಿದೆ. ಅಂದರೆ ನೇರವಾಗಿ ಫಿನಾಲೆ ವೀಕ್ಗೆ ಅರ್ಹತೆ ಪಡೆದುಕೊಳ್ಳಲಿದ್ದಾರೆ. ಹೀಗಾಗಿ ಈ ವಾರ ಎಲ್ಲ ಸ್ಪರ್ಧಿಗಳು ಮೈ-ಚಳಿ ಬಿಟ್ಟು ಆಟವಾಡಿದ್ದಾರೆ. ಆದರೆ, ಇದರಲ್ಲಿ ಮಂಜು ಆಟ ಮನೆಯವರಿಗೆ ಹಿಡಿಸಿಲ್ಲ.
ಎಲ್ಲೋ ಮಂಜು ಕಾಕಾ ಕಳೆದು ಹೋಗ್ತಿದ್ದಾರೆ ಅನೀಸುತ್ತಿದೆ ಎಂದು ಹೇಳಿ ಹನುಮಂತ ಕಳಪೆ ನೀಡಿದ್ದಾರೆ. ಮೋಕ್ಷಿತಾ ಅವರು ಮಾತನಾಡಿ, ಆಟವನ್ನು ಆಟದ ರೀತಿಯಲ್ಲಿ ಆಡಲಿಲ್ಲ. ತುಂಬಾ ವೈಯಕ್ತಿಕವಾಗಿ ತೆಗೆದುಕೊಂಡ್ರಿ ಇದಕ್ಕೆ ಸಾಕ್ಷಿ ಎಂದು ತನ್ನ ಕೈ ಮೇಲೆ ಆಗಿರೋ ಗಾಯದ ಗುರುತನ್ನು ತೋರಿಸಿದ್ದಾರೆ. ಈ ಮನೆಯಲ್ಲಿ ಕೊನೆಯ ಕ್ಷಣದಲ್ಲೂ ನಮಗೆ ನಾವು ನಿಂತುಕೊಳ್ಳಲೇ ಬೇಕು. ಆದರೆ ಅದನ್ನು ನೀವು ಮಾಡ್ತಾ ಇಲ್ಲ ಅಂತ ಗೌತಮಿ ಕೂಡ ಮಂಜುಗೆ ಕಳಪೆ ನೀಡಿದ್ದಾರೆ. ಇನ್ನೂ, ರಜತ್ ಮಾತಾಡಿ ಟಾಸ್ಕ್ ಅಂತ ಬಂದಾಗ ನನಗೆ ಒಂದೊಂದು ಸಾರಿ ಹಿಂಸೆ ಆಗಿ ತಲೆ ಕೆಟ್ಟು ಹೋಗಿರೋ ತರ ಆಯ್ತು ಎಂದು ಕಳಪೆ ಪಟ್ಟ ಕೊಟ್ಟಿದ್ದಾರೆ.
ಮನೆಯವರೆಲ್ಲರ ಬಾಯಲ್ಲಿ ಬಂದಿದ್ದು ಒಂದೇ ಹೆಸರು !
— Colors Kannada (@ColorsKannada) January 10, 2025
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/PAj5LO0uGI
ಹನುಮಂತನಿಗೆ ಫಿನಾಲೆ ಪಾಸ್:
ಹನುಮಂತ, ಭವ್ಯ ಗೌಡ, ತ್ರಿವಿಕ್ರಮ್ ಮತ್ತು ರಜತ್ ಟಿಕೆಟ್ ಟು ಫಿನಾಲೆ ಟಾಸ್ಕ್ ಆಡಲು ಆಯ್ಕೆಯಾಗಿದ್ದಾರೆ. ಈ ನಾಲ್ವರಲ್ಲಿ ಹನುಮಂತ ಈಗ ಫಿನಾಲೆ ಟಿಕೆಟ್ ಪಡೆದು ಮೊದಲ ಫೈನಲಿಸ್ಟ್ ಆಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಪಾಸ್ ಪಡೆಯಲು ಬಿಗ್ ಬಾಸ್ ಕಠಿಣ ಟಾಸ್ಕ್ ನೀಡಿದ್ದರು. ಟ್ರಂಕ್ನಲ್ಲಿರುವ ಬಾವುಟ ಇರುವ ಸ್ಟಿಕ್ ತೆಗೆದುಕೊಂಡು ಹಗ್ಗಗಳಿಂದ ಮಾಡಿದ ಬಲೆಯನ್ನು ಹಿಡಿದು ಮೇಲಕ್ಕೆ ಏರಬೇಕಿದೆ. ಬಳಿಕ ಅಲ್ಲಿ ಹೋಗಿ ಬಾವುಟದ ಸ್ಟಿಕ್ ಇಟ್ಟು ಬಿಗ್ ಬಾಸ್ ಎಂದು ಕೂಗಿ ಹೇಳಬೇಕು. ಈ ಟಾಸ್ಕ್ ಅನ್ನು ಸ್ಪರ್ಧಿಗಳು ಅತಿ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಹನುಮಂತ ಅವರು ಅತ್ಯಂತ ಕಡಿಮೆ ಅವಧಿಯಲ್ಲಿ ಆಟ ಮುಗಿಸಿ ಫಿನಾಲೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ.
BBK 11: ಟಿಕೆಟ್ ಟು ಫಿನಾಲೆ ಪಾಸ್ ಪಡೆದ ಸ್ಪರ್ಧಿ ಯಾರೆಂದು ರಿವೀಲ್: ಶರಣ್ ಹೇಳಿದ ಹೆಸರು…