Saturday, 4th January 2025

BBK 11: ತಾಯಿಯ ಧ್ವನಿ ಕೇಳಿ ಇಡೀ ಬಿಗ್ ಬಾಸ್ ಮನೆ ಸುತ್ತಿದ ಉಗ್ರಂ ಮಂಜು

Manju Mother

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಹೊಸ ವರ್ಷದ ಪ್ರಯುಕ್ತ ಈ ವಾರ ಸರ್​ಪ್ರೈಸ್ ಮೇಲೆ ಸರ್​ಪ್ರೈಸ್ ಕೊಡುತ್ತಿದ್ದಾರೆ ಬಿಗ್ ಬಾಸ್. ಈ ವಾರ ನೋ ಎಲಿಮಿನೇಷನ್ ವೀಕ್​ನಂತೆ ಕಾಣುತ್ತಿದೆ. ಜೊತೆಗೆ ಒಬ್ಬೊಬ್ಬರ ಕುಟುಂಬ ಸದಸ್ಯರು ಮನೆಯೊಳಗೆ ಎಂಟ್ರಿ ಕೊಡುತ್ತಿದ್ದಾರೆ. ಇನ್ನೇನು ಕೆಲವೇ ವಾರಗಳಲ್ಲಿ ಫಿನಾಲೆ ನಡೆಯಲಿದ್ದು, ಇದಕ್ಕೂ ಮುನ್ನ ಇರುವ 9 ಸ್ಪರ್ಧಿಗಳಿಗೆ ಜೋಶ್ ಬರಲು ಕುಟುಂಬದವರನ್ನು ಮನೆಯೊಳಗೆ ಕರೆಸಲಾಗಿದೆ.

ಸ್ಪರ್ಧಿಗಳ ಅಮ್ಮಂದಿರು, ಅಪ್ಪಂದಿರು ಮಡದಿ, ಮಕ್ಕಳು ಬಿಗ್ ಬಾಸ್​ಗೆ ಬರುತ್ತಿದ್ದಾರೆ. ಮಂಗಳವಾರ ಭವ್ಯಾ ಗೌಡ ಅವರ ಫ್ಯಾಮಿಲಿ, ರಜತ್ ಕಿಶನ್ ಅವರ ಮಡದಿ ಹಾಗು ಮಕ್ಕಳು ಬಂದಿದ್ದರು. ಜೊತೆಗೆ ತ್ರಿವಿಕ್ರಮ್ ಅವರ ತಾಯಿ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದಾರೆ. ಬುಧವಾರ ಮೋಕ್ಷಿತಾ ಪೈ, ಉಗ್ರಂ ಮಂಜು ಅವರ ಕುಟುಂಬ ದೊಡ್ಮನೆಯೊಳಗೆ ಆಗಮಿಸಿದೆ.

ಮೊದಲಿಗೆ ಮಂಜು ಅವರ ತಂದೆ ರಾಮೇ ಗೌಡ ಆಗಮಿಸಿದರು. ಬಳಿಕ ಅವರ ತಾಯಿ ಮನೆಯೊಳಗೆ ಕಾಲಿಟ್ಟಿದ್ದಾರೆ. ಆದರೆ, ಬಿಗ್ ಬಾಸ್ ಸುಲಭವಾಗಿ ಮಂಜು ಅವರಿಗೆ ತಾಯಿಯನ್ನು ಭೇಟಿ ಮಾಡುವ ಅವಕಾಶ ಕೊಡಲಿಲ್ಲ. ಮೊದಲಿಗೆ ತಾಯಿಯ ಧ್ವನಿಯನ್ನು ಮಾತ್ರ ಕೇಳಿಸಿದರು. ಆಗ ಮಂಜು ಕಣ್ಣೀರಿಡುತ್ತಾ ಇಡೀ ಬಿಗ್ ಬಾಸ್ ಮನೆ ಹುಡುಕಿದ್ದಾರೆ.

ಅತ್ತ ಉಗ್ರಂ ಮಂಜು ಅವರ ತಂದೆ ರಾಮೇ ಗೌಡ ಅವರು ಬಿಗ್‌ ಬಾಸ್‌ ಮನೆಗೆ ಬರುತ್ತಿದ್ದಂತೆ ಮಂಜು ಕಣ್ಣಿರಿಟ್ಟಿದ್ದಾರೆ. ಯಾಕೋ ಅಳೋದು, ಅಳಬಾರದು ಲೇ. ತಂದೆ ನಗುತ್ತಾ, ನಗುತ್ತಾ ಇದ್ದೇನೆ. ಏನಕ್ಕೆ ಅಳೋದಿಲ್ಲಿ. ಹಳೆ ಮಂಜು ಬಿಟ್ಟು ಹೊಸ ಮಂಜು ರೀತಿ ಕಾಣ್ತಾ ಇದ್ದೀಯಾ ಎಂದು ಮಂಜು ಅವರ ತಂದೆ ಮಗನ ಹೆಗಲ ಮೇಲೆ ಕೈಹಾಕಿ ಹೇಳಿದ್ದಾರೆ. ಮಂಜು ಅವರ ತಂದೆ ಮನೆಯವರ ಜೊತೆಗೆ ಖುಷಿ ಖುಷಿಯಲ್ಲಿ ಮಾತಾಡಿದ್ದಾರೆ. ಚೈತ್ರಾ ಕುಂದಾಪುರ ಬಗ್ಗೆ ತಮಾಷೆ ಕೂಡ ಮಾಡಿದ್ದು, ತನ್ನ ಕಾಲಿಗೆ ಬೀಳಲು ಬಂದಾಗ, ಚೈತ್ರಾ ಒಂದು ರೀತಿ ಬಿರುಗಾಳಿ ಇದ್ದಂಗೆ ಅಲ್ಲೇ ಇರು ಅಲ್ಲೇ ಇರು ಎಂದು ತಮಾಷೆ ಮಾಡಿದ್ದಾರೆ.

BBK 11: ಬಿಗ್ ಬಾಸ್ ಮನೆಗೆ ಕಾಲಿಟ್ಟ ಉಗ್ರಂ ಮಂಜು ತಂದೆ ರಾಮೇ ಗೌಡ: ಚೈತ್ರಾಗೆ ಏನಂದ್ರು ಗೊತ್ತೇ?