Friday, 22nd November 2024

Upcoming Movie: ತಮ್ಮ ಮುಂದಿನ ಚಿತ್ರದ ಹೆಸರು ಘೋಷಿಸಿದ ‘ಗದರ್’ ನಿರ್ದೇಶಕ ಅನಿಲ್ ಶರ್ಮಾ

Upcoming Movie

ಗದರ್ (Gadar) ಚಿತ್ರ ನಿರ್ದೇಶಕ ಅನಿಲ್ ಶರ್ಮಾ (Anil Sharma) ಅವರು ತಮ್ಮ ಮುಂದಿನ ಚಿತ್ರದ (Upcoming Movie) ಹೆಸರನ್ನು ಶನಿವಾರ ಘೋಷಿಸಿದ್ದಾರೆ. ದಸರಾ ಸಂದರ್ಭದಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ. ಮುಂದಿನ ಚಿತ್ರ ವನವಾಸ್’ (Vanvaas) ಎಂದು ಹೇಳಿದ್ದಾರೆ. ಈ ಚಿತ್ರ ಕಲಿಯುಗದ ರಾಮಾಯಣ (Kalyug Ka Ramayana) ಎಂದು ಹೇಳಿದ್ದಾರೆ.

2023ರಲ್ಲಿ ತೆರೆಕಂಡ ಗದರ್ 2 ಯಶಸ್ಸಿನ ಬಳಿಕ ಚಿತ್ರ ನಿರ್ಮಾಪಕ ಅನಿಲ್ ಶರ್ಮಾ ಅವರು ತಮ್ಮ ಹೊಸ ಚಿತ್ರದ ಬಗ್ಗೆ ಹೇಳಿಕೊಂಡಿದ್ದಾರೆ. ಉತ್ಕರ್ಷ್ ಶರ್ಮಾ ಮತ್ತು ನಾನಾ ಪಾಟೇಕರ್ ಅಭಿನಯಿಸಿರುವ “ವನವಾಸ್ ” ಚಿತ್ರವು ಮಕ್ಕಳು ತಮ್ಮ ಹೆತ್ತವರನ್ನು ದೇಶಭ್ರಷ್ಟರನ್ನಾಗಿ ಮಾಡುವ ಕಥಾ ಹಂದರ ಒಳಗೊಂಡಿದೆ ಎಂದು ತಿಳಿಸಿದ್ದಾರೆ.

ಈ ಚಿತ್ರವು ಪ್ರಾಚೀನ ರಾಮಾಯಣದ ಕಥೆ ಪ್ರತಿಧ್ವನಿಸುತ್ತದೆ. ಕರ್ತವ್ಯ, ಗೌರವ ಮತ್ತು ಕ್ರಿಯೆಗಳ ಪರಿಣಾಮಗಳು ಜೀವನದ ಹಾದಿಯನ್ನು ರೂಪಿಸುತ್ತವೆ ಎಂಬುದನ್ನು ಸಾರುತ್ತದೆ.

ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಚಿತ್ರದ ಪ್ರಕಟಣೆಯ ವಿಡಿಯೋವನ್ನು ಹಂಚಿಕೊಂಡಿರುವ ಅವರು, ನಮ್ಮವರೆಂದುಕೊಂಡವರೇ ನಮಗೆ ವನವಾಸವನ್ನು ಕೊಡುತ್ತಾರೆ- ಅಪ್ನೆ ಹೈ ಅಪ್ನೋ ಕೋ ದೇತೆ ಹೈ ವನವಾಸ್ ಎನ್ನುವ ಶೀರ್ಷಿಕೆಯೊಂದಿಗೆ ಚಿತ್ರದ ಸಾರವನ್ನು ಹೇಳಿಕೊಂಡಿದ್ದಾರೆ. ಈ ವಿಡಿಯೋದಲ್ಲಿ “ರಾಮ್ ರಾಮ್” ಹಾಡನ್ನು ಸಹ ಕೇಳಬಹುದು.

“ಗದರ್: ಏಕ್ ಪ್ರೇಮ್ ಕಥಾ” ಮತ್ತು “ಗದರ್ 2” ಅನಂತರ ಝೀ ಸ್ಟುಡಿಯೋಸ್ ಜೊತೆ ಮತ್ತೊಮ್ಮೆ ಅನಿಲ್ ಶರ್ಮಾ ಕೈ ಜೋಡಿಸಿದ್ದಾರೆ. ಈ ಜೋಡಿ ಇದೀಗ ಮೂರನೇ ಬಾರಿಗೆ ಒಟ್ಟಿಗೆ ಸಿನಿಮಾ ನಿರ್ಮಾಣಕ್ಕೆ ಒಂದಾಗಿದೆ.

Upcoming Movie

ಝೀ ಸ್ಟುಡಿಯೋಸ್‌ನ ಸಿಇಒ ಉಮೇಶ್ ಕೆ.ಆರ್. ಬನ್ಸಾಲ್ ಮಾತನಾಡಿ, ಇಂತಹ ಕಥೆಯನ್ನು ಬೆಂಬಲಿಸಲು ನಮಗೆ ತುಂಬಾ ಸಂತೋಷವಾಗಿದೆ. ಇದು ನಿಜವಾಗಿಯೂ ಅದ್ಭುತ ಯೋಜನೆಯಾಗಿದೆ. ಪೋಷಕರೊಂದಿಗೆ ಆಧುನಿಕ ಮಕ್ಕಳ ಸಂಬಂಧವನ್ನು ಚಿತ್ರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ವೀಕ್ಷಕರಿಗೆ ಹಿಂದೆಂದೂ ಕಾಣದ ಅನುಭವವನ್ನು ನೀಡುವ ಗುರಿಯನ್ನು ಹೊಂದಿದ್ದು, ವನವಾಸ್‌ ಮೂಲಕ ನಾವು ಅದನ್ನು ಸಾಧಿಸುತ್ತೇವೆ ಎನ್ನುವ ವಿಶ್ವಾಸವಿದೆ. ವನವಾಸ್ ಅನ್ನು ಕಲಿಯುಗ್ ಕಾ ರಾಮಾಯಣ ಎಂದು ಹೇಳುವುದು ಸರಿಯಾಗಿದೆ ಎಂದು ತಿಳಿಸಿದ್ದಾರೆ.

ಅನಿಲ್ ಶರ್ಮಾ ಬರೆದು ನಿರ್ಮಿಸಿ ನಿರ್ದೇಶಿಸಿರುವ ವನವಾಸ್ ಚಿತ್ರ ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದರು. ಕಳೆದ ಆಗಸ್ಟ್‌ನಲ್ಲಿ ಅನಿಲ್ ಅವರು “ವನವಾಸ್” ಕುರಿತು ಮಾತನಾಡಿ, ಇದು “ಭಾವನೆಗಳ ಗದರ್” ಎಂದು ಹೇಳಿದ್ದರು.

ತಂದೆ ಎಲ್ಲಕ್ಕಿಂತ ಮಿಗಿಲು ಎಂದು ತೋರಿಸಲು ಪ್ರಯತ್ನಿಸಿರುವ ಕಥೆ ಇದು. ಇದು ಎಲ್ಲರ ಮನಗೆದ್ದಿರುವ ಚಿತ್ರವಾಗಿದ್ದು, ಪ್ರತಿಯೊಬ್ಬ ತಂದೆಯೂ ಚಿತ್ರವನ್ನು ನೋಡುತ್ತಾರೆ ಮತ್ತು ಅನಂತರ ಅದನ್ನು ನೋಡುವಂತೆ ತಮ್ಮ ಪುತ್ರರಿಗೆ ಹೇಳುತ್ತಾರೆ ಎಂದು ತಿಳಿಸಿದ್ದರು.

Martin Box Office Colletion: ತೆರೆ ಮೇಲೆ ಅಬ್ಬರಿಸಿದ ಧ್ರುವ ಸರ್ಜಾ; ʼಮಾರ್ಟಿನ್‌ʼ ಮೊದಲ ದಿನ ಗಳಿಸಿದ್ದೆಷ್ಟು?

“ವನವಾಸ್” ಜೊತೆಗಿನ ಭಾವನಾತ್ಮಕ ಪ್ರಯಾಣ ಹಂಚಿಕೊಂಡಿರುವ ಅವರು ಈ ಚಿತ್ರದ ಮೂಲಕ ನಾನು ಪ್ರಪಂಚದ ಅತ್ಯಂತ ದೊಡ್ಡ ಸತ್ಯವನ್ನು ಹೇಳಲು ಪ್ರಯತ್ನಿಸುತ್ತಿದ್ದೇನೆ. ಯಾಕೆಂದರೆ ಅದು ಇಂದಿನ ಸಮಯದಲ್ಲಿ ಬಹಳ ಪ್ರಸ್ತುತವಾಗಿದೆ ಎಂದು ಶರ್ಮಾ ತಿಳಿಸಿದ್ದಾರೆ.