ನವದೆಹಲಿ: ಈ ವರ್ಷ ಮುಗಿಯೋದಕ್ಕೆ ದಿನಗಣನೆ ಶುರುವಾಗಿದೆ. ಇನ್ನೇನು ಹೊಸ ವರ್ಷ ಆರಂಭವಾಗಲಿದ್ದು 2025ರಲ್ಲಿ ಟಾಪ್ ಬಾಲಿವುಡ್, ಟಾಲಿವುಡ್ ಸಿನಿಮಾಗಳು ರಿಲೀಸ್ ಆಗಲಿವೆ (Upcoming Movies) ಹೊಸ ವರ್ಷದಲ್ಲಿ ಸಿನಿಮಾ ಪ್ರಿಯರಿಗೆ ಭರ್ಜರಿ ಮನರಂಜನೆ ನೀಡಲು ರೆಡಿಯಾಗಿವೆ. ಹೊಸ ವರ್ಷದಲ್ಲಿ ಸಿನಿ ಪ್ರಿಯರನ್ನು ಭರ್ಜರಿ ಮೋಡಿ ಮಾಡಲಿರುವ ಯಾವೆಲ್ಲಾ ಚಿತ್ರಗಳು ಹೊಸ ವರ್ಷದಲ್ಲಿ ತೆರೆಕಾಣಲಿದೆ ಎನ್ನುವ ಮಾಹಿತಿ ಇಲ್ಲಿದೆ.
ಎಮರ್ಜೆನ್ಸಿ
ಕಂಗನಾ ರಣಾವತ್ ಅವರ ಬಹು ನಿರೀಕ್ಷಿತ ಸಿನಿಮಾ ಎಮರ್ಜೆನ್ಸಿ (Emergency Movie) 2025ರ ಆರಂಭದಲ್ಲೇ ತೆರೆಕಾಣಲಿದೆ. ಭಾರತದ ತುರ್ತು ಪರಿಸ್ಥಿತಿಯ ಕಥೆಯನ್ನೊಳಗೊಂಡಿರುವ ಎಮರ್ಜೆನ್ಸಿ ಚಿತ್ರದಲ್ಲಿ ನಟಿ ಕಂಗನಾ ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ಪಾತ್ರಗಳು ಮೂಡಿಬರಲಿವೆ. ಈ ಚಿತ್ರಕ್ಕೆ ಸಿನಿಪ್ರಿಯರು ಮೋಸ್ಟ್ ಎಕ್ಸೈಟ್ ಆಗಿದ್ದಾರೆ.
ಸಿಕಂದರ್
ಸಲ್ಮಾನ್ ಖಾನ್ ನಟನೆಯ ಸಿಕಂದರ್ ಆಕ್ಷನ್ ಎಂಟರ್‌ಟೈನರ್ ಚಿತ್ರವು 2025ರಲ್ಲಿ ಸಿನಿಪ್ರಿಯರಿಗೆ ರಸದೌತಣ ನೀಡಲು ರೆಡಿಯಾಗಿದೆ. ಎಆರ್ ಮುರುಗದಾಸ್ ನಿರ್ದೇಶನದ ಸಾಜಿದ್ ನಾಡಿಯಾಡ್ವಾಲಾ ನಿರ್ಮಿಸಿದ ಈ ಚಿತ್ರವು 2025 ರ ಈದ್‌ನಂದು ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದಲ್ಲಿ ಸಲ್ಮಾನ್ ಜೊತೆ ನಟಿ ರಶ್ಮಿಕಾ ಮಂದಣ್ಣ ಜೊತೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಸಿತಾರೆ ಜಮೀನ್ ಪರ್
ಅಮೀರ್ ಖಾನ್ ಅವರ ಮುಂದಿನ ಚಿತ್ರ ಸಿತಾರೆ ಜಮೀನ್ ಪರ್ 2025 ರಲ್ಲಿ ಚಿತ್ರಮಂದಿರಗಳಲ್ಲಿ ಮೂಡಿ ಬರಲಿದೆ. ಮುಂದಿನ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಇದು ಕೂಡ ಒಂದಾಗಿದೆ. ಆರ್‌ಎಸ್ ಪ್ರಸನ್ನ ನಿರ್ದೇಶಿಸಿದ 2007 ರ ಬ್ಲಾಕ್‌ಬಸ್ಟರ್ ತಾರೆ ಜಮೀನ್ ಪರ್’ನ ಸೀಕ್ವೆಲ್ ಇದಾಗಿದೆ.
ಆಲ್ಫಾ
2025 ರಲ್ಲಿ ಆಲ್ಫಾ ಚಿತ್ರ ಕೂಡ ಬಿಡುಗಡೆಯಾಗಲಿದೆ. ಶಿವ ರಾವೈಲ್ ನಿರ್ದೇಶನ ಮಾಡಲಿರುವ ಈ ಚಿತ್ರದಲ್ಲಿ ಆಲಿಯಾ ಭಟ್ ಮತ್ತು ಶರ್ವರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಡಿಸೆಂಬರ್ 25, 2025 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.
ಕಾಂತಾರ
ಕಾಂತಾರ ಪಾರ್ಟ್ 1ಕೂಡ ಅಭಿಮಾನಿಗಳನ್ನು ಮೋಡಿ ಮಾಡಲಿದೆ.ಏಳು ಭಾಷೆಗಳಲ್ಲಿ ತೆರೆಕಾಣಲಿರುವ ಹೊಂಬಾಳೆ ಫಿಲಂಸ್‌ನ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ತಯಾರಿ ಹಂತದಲ್ಲಿದೆ.
ಛಾವಾ
ಲಕ್ಷ್ಮಣ್ ಉಟೇಕರ್ ನಿರ್ದೇಶಿಸಿರುವ ಐತಿಹಾಸಿಕ ಕಥೆವುಳ್ಳ ಛಾವಾʼ (Chhaava) 2025 ರ ಫೆಬ್ರವರಿ 14 ರಂದು ರಿಲೀಸ್ ಆಗಲಿದ್ದು 2025ರಲ್ಲಿ ಈ ಚಿತ್ರವು ಹೆಚ್ಚು ಸದ್ದು ಮಾಡಲಿದೆ.
ಗೇಮ್ ಚೇಂಜರ್
ಶಂಕರ್ ನಿರ್ದೇಶನದ ಪ್ಯಾನ್ ಇಂಡಿಯಾ ʼಗೇಮ್ ಚೇಂಜರ್ʼ (Game Changer) ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದ್ದು ರಾಮ್ ಚರಣ್ (Ram Charan) ಸಿನಿಮಾದಲ್ಲಿ ತ್ರಿಬಲ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಟಿ ಕಿಯಾರ ಅಡ್ವಾಣಿ ನಾಯಕಿಯಾಗಿ ನಟಿಸಿದ್ದಾರೆ.
ಥಗ್ ಲೈಫ್
ಥಗ್ ಲೈಫ್ ಚಿತ್ರವು 2025ರಲ್ಲಿ ಬಿಡುಗಡೆ ಯಾಗಲಿದೆ. ಕಮಲ್ ಹಾಸನ್ ಚಿತ್ರ ಇದಾಗಿದ್ದು ಥಗ್ ಲೈಫ್ ಜೂನ್ 5, 2025 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆ ಯಾಗಲಿದ್ದು ಮಣಿರತ್ನಂ ನಿರ್ದೇಶಿಸಿದ್ದಾರೆ ಮತ್ತು ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಮತ್ತು ಮದ್ರಾಸ್ ಟಾಕೀಸ್ ಸಹನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಜಯಂ ರವಿ, ತ್ರಿಷಾ, ಅಭಿರಾಮಿ, ನಾಸರ್ ಇತ್ಯಾದಿ ನಟ ನಟಿಯರು ಅಭಿನಯಿಸಲಿದ್ದಾರೆ.
ರಾಜಾ ಸಾಬ್
ರಾಜಾ ಸಾಬ್ ಚಿತ್ರವು 2025ರಲ್ಲಿ ತೆರೆಕಾಣಲಿದೆ. ಈ ಚಲನಚಿತ್ರವು ಏಪ್ರಿಲ್ 10, 2025 ರಂದು ಐದು ಭಾಷೆಗಳಲ್ಲಿ ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದ್ದು ರಾಜಾ ಸಾಬ್‌ನಲ್ಲಿ ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್, ರಿದ್ಧಿ ಕುಮಾರ್, ವರಲಕ್ಷ್ಮಿ ಶರತ್‌ಕುಮಾರ್, ಜಿಶು ಸೇನ್‌ಗುಪ್ತಾ ಮತ್ತು ಬ್ರಹ್ಮಾನಂದಂ ಕೂಡ ಕಾಣಿಸಿಕೊಂಡಿದ್ದಾರೆ.
ಸನ್ನಿ ಸಂಸ್ಕರಿ ಕಿ ತುಳಸಿ ಕುಮಾರಿ
ಸನ್ನಿ ಸಂಸ್ಕರಿ ಕಿ ತುಳಸಿ ಕುಮಾರಿ ಚಿತ್ರದಲ್ಲಿ ಜಾನ್ವಿ ಕಪೂರ್, ವರುಣ್ ಧವನ್, ರೋಹಿತ್ ಸರಾಫ್, ಸನ್ಯಾ ಮಲ್ಹೋತ್ರಾ, ಅಕ್ಷಯ್ ಒಬೆರಾಯ್ ಮತ್ತು ಮನೀಶ್ ಪಾಲ್ ನಟಿಸಿದ್ದಾರೆ. ಈ ಚಿತ್ರವನ್ನು ಶಶಾಂಕ್ ಖೈತಾನ್ ನಿರ್ದೇಶಿಸಿದ್ದು ಏಪ್ರಿಲ್ 18, 2025 ರಂದು ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಒಟ್ಟಿನಲ್ಲಿ 2025ರಲ್ಲಿ ಈ ಎಲ್ಲಾ ಚಿತ್ರಗಳು ಸಿನಿಪ್ರಿಯರನ್ನು ಮೋಡಿ ಮಾಡುದಂತೂ ಪಕ್ಕ.
ಈ ಸುದ್ದಿಯನ್ನೂ ಓದಿ:Rewind 2024: ಈ ವರ್ಷ ಇಹಲೋಕ ತ್ಯಜಿಸಿದ ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರಿವರು