Saturday, 21st December 2024

BBK 11: ಇಂದು ಕಿಚ್ಚನ ಪಾಠ ಯಾರಿಗೆ?: ಸಣ್ಣ ಹಿಂಟ್ ಕೊಟ್ಟ ಸುದೀಪ್

Chaithra Kundapura and Sudeep

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಹನ್ನೆರಡನೇ ವಾರದ ಅಂತ್ಯದಲ್ಲಿದೆ. ಇಂದು ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ನಡೆಯಲಿದೆ. ವಾರದ ಮಧ್ಯೆ ನಡೆದ ಘಟನೆಯನ್ನು ಕಿಚ್ಚ ಸುದೀಪ್ ಮನೆಯವರೊಂದಿಗೆ ಮಾತನಾಡಲಿದ್ದಾರೆ. ಜೊತೆಗೆ ತಪ್ಪು ಮಾಡಿದವರಿಗೆ ಖಡಕ್ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ. ಅದರಂತೆ ಈ ವಾರದ ಟಾಸ್ಕ್ ಮಧ್ಯೆ ಉಸ್ತುವಾರಿ ವಹಿಸಿಕೊಂಡಿದ್ದ ಚೈತ್ರಾ ಕುಂದಾಪುರ ತೆಗೆದುಕೊಂಡ ಕೆಲವು ನಿರ್ಧಾರಗಳು ಅನೇಕ ಕೆಂಗಣ್ಣಿಗೆ ಗುರಿಯಾಯಿತು. ಇದರ ಪರಿಣಾಮ ಈ ವಾರದ ಕಳಪೆ ಪಟ್ಟ ಪಡೆದು ಜೈಲಿಗೆ ಹೋದರು.

ಬಿಗ್‌ ಬಾಸ್‌ ನೀಡಿದ್ದ ಕೆಲವು ಟಾಸ್ಕ್‌ಗಳ ಉಸ್ತುವಾರಿಯಾಗಿದ್ದ ಚೈತ್ರಾ ಕುಂದಾಪುರ ತಂಡಗಳ ನಡುವೆ ಪಕ್ಷಪಾತಿ ನೀತಿ ಅನುಸರಿಸಿದರು ಎಂದು ಹೇಳಿರುವ ಮನೆಯ ಇತರ ಸ್ಪರ್ಧಿಗಳು ಈ ವಾರದ ಕಳಪೆ ಪಟ್ಟವನ್ನು ಚೈತ್ರಾ ಅವರಿಗೆ ನೀಡಿದ್ದಾರೆ. ಚೈತ್ರಾ ವಿಚಾರವಾಗಿ ಇಂದು ಸುದೀಪ್ ಕೂಡ ಮಾತನಾಡಲಿದ್ದಾರೆ.

ಉಸ್ತುವಾರಿಗಳು ಜವಾಬ್ದಾರಿಗಳನ್ನು ಮರೆತು ಆಟದ ದಾರಿಯನ್ನು ತಪ್ಪುಸುತ್ತಿದ್ದಾರೆ. ಮಾತಿನ ಮಿತಿಗಳು ಮಿರುತ್ತಾ ಹೋಗುತ್ತಿವೆ ಖಡಕ್​ ಡೈಲಾಂಗ್​ ಹೊಡೆದು ಸುದೀಪ್ ಎಂಟ್ರಿ ಕೊಟ್ಟಿದ್ದಾರೆ. ಈ ಮೊದಲು ಹೊರಗಿನ ವಿಚಾರಗಳನ್ನು ಎಲ್ಲರ ಎದುರು ಹೇಳಿ ಅವರು ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಇದೀಗ ಉಸ್ತುವಾರಿ ಸರಿಯಾಗಿ ನಿರ್ವಹಿಸದ ಚೈತ್ರಾಗೆ ಸುದೀಪ್ ಕ್ಲಾಸ್‌ ತೆಗೆದುಕೊಳ್ಳಲಿದ್ದಾರೆ.

ಭವ್ಯಾ ಕ್ಯಾಪ್ಟನ್:

13ನೇ ವಾರಕ್ಕೆ ಭವ್ಯಾ ಗೌಡ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ವಿಶೇಷ ಎಂದರೆ ಭವ್ಯಾ ಮನೆಯ ಕ್ಯಾಪ್ಟನ್ ಆಗಿರುವುದು ಇದು ಎರಡನೇ ಬಾರಿ. ಬಿಗ್ ಬಾಸ್ ಸ್ಪರ್ಧಿಗಳಿಗೆ ಕ್ಯಾಪ್ಟನ್ಸಿ ಟಾಸ್ಕ್ ನೀಡುದ್ದರು. ಅದರಲ್ಲಿ ಗೌತಮಿ, ಐಶ್ವರ್ಯಾ, ಭವ್ಯಾ ಗೌಡ, ಚೈತ್ರಾ ಕುಂದಾಪುರ ಹಾಗೂ ಧನರಾಜ್ ಆಯ್ಕೆಯಾಗಿದ್ದರು. ಇವರ ಪೈಕಿ ಕೊನೆಯ ಕ್ಷಣದಲ್ಲಿ ಐಶ್ವರ್ಯಾ ಹಾಗೂ ಭವ್ಯಾ ಗೌಡ ಕ್ಯಾಪ್ಟನ್ಸಿ ಓಟಕ್ಕೆ ಸೆಲೆಕ್ಟ್ ಆಗಿದ್ದರು. ಈ ಕತ್ತಲೆ ಬೆಳಕಿನ ಆಟದಲ್ಲಿ ಭವ್ಯಾ ಗೌಡ ಗೆದ್ದು ಮನೆಯ ಕ್ಯಾಪ್ಟನ್ ಪಟ್ಟವನ್ನು ಅಲಂಕರಿಸಿದ್ದಾರೆ. ಈ ಮೂಲಕ ಮುಂದಿನ ವಾರದ ನಾಮಿನೇಷನ್​ನಿಂದ ಭವ್ಯಾ ಪಾರಾಗಿದ್ದಾರೆ.

BBK 11: ಬಿಗ್ ಬಾಸ್ ಮನೆಯಲ್ಲಿ ಭಯದ ವಾತಾವರಣ: ಅಷ್ಟಕ್ಕೂ ಏನಾಯಿತು?, ಇಲ್ಲಿದೆ ಮಾಹಿತಿ